• ಮನೆ
  • ಸುದ್ದಿ
    • ಜಿಲ್ಲಾವಾರು ಸುದ್ದಿ
    • ಕ್ರೀಡಾಸುದ್ದಿ
    • ಕರ್ನಾಟಕ ರೌಂಡಪ್
    • ರಾಷ್ಟ್ರೀಯ ಸುದ್ದಿ
    • ಅಂತರಾಷ್ಟ್ರೀಯ ಸುದ್ದಿ
    • ವಾಣಿಜ್ಯ ಸುದ್ದಿ
    • ಸಂಪಾದಕೀಯ
    • ಡಿಂಕು ರೌಂಡಪ್
  • ಸಿನಿಮಾ
    • ಸಿನಿಸುದ್ದಿ
    • ಚಿತ್ರ ವಿಮರ್ಶೆ
    • ಬಾಲಿವುಡ್
    • ಹಾಲಿವುಡ್
    • ಗಾಸಿಪ್
    • ಟಿ.ವಿ
    • ಸಂದರ್ಶನ
    • ನಮ್ ಹಾಡು
  • ಲೈಫ್ ಲೈನ್
    • ಸೌಂದರ್ಯ
    • ಆರೋಗ್ಯ
    • ಮನೆಮದ್ದು
    • ಫಿಟ್ನೆಸ್
  • ಗ್ಯಾರೇಜ್
    • ಗ್ಯಾರೇಜ್ ಮಾತು
    • ಬೈಕ್ ರೈಡ್
    • ಹೊಸಕಾರು
    • ಸವಾರಿ
  • ಟೆಕ್ನಾಲಜಿ
    • ಸಾಫ್ಟ್ ಮಾತು
    • ಟ್ಯಾಬ್ಲೈಟ್ಸ್
    • ಕಂಪ್ಯೂಟರ್ಸ್
    • ಮೊಬೈಲ್ಸ್
  • ಇತರೆ
    • ಕೃಷಿ
      • ರೈತ
      • ಸಾವಯವ ಕೃಷಿ
      • ನಮ್ಮ ಜಲಾಶಯಗಳು
      • ನೇಗಿಲಯೋಗಿ
    • ಅಂಕಣ
      • ಬದುಕು ಬರಹ
      • ಲೇಖನ
      • ಕವನ
      • ಕತೆ
      • ರಂಗಭೂಮಿ
      • ವಿಮರ್ಶೆ
      • ಹೊಸಪುಸ್ತಕ
      • ಫ್ಯೂಚರ್
      • ಮುಗುಳುನಗೆ
      • ಮಕ್ಕಳ ಸಾಹಿತ್ಯ
    • ಮಹಿಳೆ
      • ಸಾಧಕಿ
      • ಉದ್ಯೋಗಿನಿ
      • ಅಡುಗೆಮನೆ
    • ವೀಡಿಯೋ
    • ಮಾರುಕಟ್ಟೆ
    • ನಾಗರಿಕ ಪತ್ರಕರ್ತ
    • ಪಂಚ್ ಪಾಪಣ್ಣ
    • ಪಬ್ಲಿಕ್ ಪವರ್
    • ಜನಮೆಚ್ಚಿದ ಸುದ್ದಿ
    • ಗೋಡೆಗಳ ಮಾತು
    • ಕೆ.ಎನ್.ಪಿ. ಪದಬಂಧ
    • ಕೆ.ಎನ್.ಪಿ. ಗ್ಯಾಲರಿ
Wednesday, February 20, 2019
No Result
View All Result
  • ಮನೆ
  • ಸುದ್ದಿ
    • ಜಿಲ್ಲಾವಾರು ಸುದ್ದಿ
    • ಕ್ರೀಡಾಸುದ್ದಿ
    • ಕರ್ನಾಟಕ ರೌಂಡಪ್
    • ರಾಷ್ಟ್ರೀಯ ಸುದ್ದಿ
    • ಅಂತರಾಷ್ಟ್ರೀಯ ಸುದ್ದಿ
    • ವಾಣಿಜ್ಯ ಸುದ್ದಿ
    • ಸಂಪಾದಕೀಯ
    • ಡಿಂಕು ರೌಂಡಪ್
  • ಸಿನಿಮಾ
    • ಸಿನಿಸುದ್ದಿ
    • ಚಿತ್ರ ವಿಮರ್ಶೆ
    • ಬಾಲಿವುಡ್
    • ಹಾಲಿವುಡ್
    • ಗಾಸಿಪ್
    • ಟಿ.ವಿ
    • ಸಂದರ್ಶನ
    • ನಮ್ ಹಾಡು
  • ಲೈಫ್ ಲೈನ್
    • ಸೌಂದರ್ಯ
    • ಆರೋಗ್ಯ
    • ಮನೆಮದ್ದು
    • ಫಿಟ್ನೆಸ್
  • ಗ್ಯಾರೇಜ್
    • ಗ್ಯಾರೇಜ್ ಮಾತು
    • ಬೈಕ್ ರೈಡ್
    • ಹೊಸಕಾರು
    • ಸವಾರಿ
  • ಟೆಕ್ನಾಲಜಿ
    • ಸಾಫ್ಟ್ ಮಾತು
    • ಟ್ಯಾಬ್ಲೈಟ್ಸ್
    • ಕಂಪ್ಯೂಟರ್ಸ್
    • ಮೊಬೈಲ್ಸ್
  • ಇತರೆ
    • ಕೃಷಿ
      • ರೈತ
      • ಸಾವಯವ ಕೃಷಿ
      • ನಮ್ಮ ಜಲಾಶಯಗಳು
      • ನೇಗಿಲಯೋಗಿ
    • ಅಂಕಣ
      • ಬದುಕು ಬರಹ
      • ಲೇಖನ
      • ಕವನ
      • ಕತೆ
      • ರಂಗಭೂಮಿ
      • ವಿಮರ್ಶೆ
      • ಹೊಸಪುಸ್ತಕ
      • ಫ್ಯೂಚರ್
      • ಮುಗುಳುನಗೆ
      • ಮಕ್ಕಳ ಸಾಹಿತ್ಯ
    • ಮಹಿಳೆ
      • ಸಾಧಕಿ
      • ಉದ್ಯೋಗಿನಿ
      • ಅಡುಗೆಮನೆ
    • ವೀಡಿಯೋ
    • ಮಾರುಕಟ್ಟೆ
    • ನಾಗರಿಕ ಪತ್ರಕರ್ತ
    • ಪಂಚ್ ಪಾಪಣ್ಣ
    • ಪಬ್ಲಿಕ್ ಪವರ್
    • ಜನಮೆಚ್ಚಿದ ಸುದ್ದಿ
    • ಗೋಡೆಗಳ ಮಾತು
    • ಕೆ.ಎನ್.ಪಿ. ಪದಬಂಧ
    • ಕೆ.ಎನ್.ಪಿ. ಗ್ಯಾಲರಿ
No Result
View All Result

Knp

No Result
View All Result

ಹುತಾತ್ಮ ಟಿಪ್ಪುಸುಲ್ತಾನ್ ಭಾಗ -10

ಟಿಪ್ಪುವಿನ ಸಾಧನೆ-ವಿಶೇಷತೆಗಳು

admin by admin
November 13, 2016
in ಅಂಕಣ, ಲೇಖನ
0
ಹುತಾತ್ಮ ಟಿಪ್ಪುಸುಲ್ತಾನ್ ಭಾಗ -10
Views: 155

ಕೆರೆಕಟ್ಟೆಗಳು:
ಟಿಪ್ಪುವಿನ ಕಾಲದಲ್ಲಿ ನೀರಾವರಿ ಸೌಲಭ್ಯ ವಿಸ್ತøತವಾಗಿ ಹರಡಿತು. ಅವುಗಳಲ್ಲಿ ಸರ್ಕಾರವೇ ಕೈಗೆತ್ತಿಕೊಂಡ ಬೃಹತ್ ನೀರಾವರಿ ಯೋಜನೆಗಳು, ಜನ ಹಾಗೂ ಸರ್ಕಾರ ಜೊತೆಗೂಡಿ ನಿರ್ವಹಿಸುತ್ತಿದ್ದ ಮಧ್ಯಮ ನೀರಾವರಿ ಯೋಜನೆಗಳು ಹಾಗೂ ಜನತೆಯೇ ಸರ್ಕಾರದ ಬೆಂಬಲದಿಂದ ನಿರ್ವಹಿಸಿದ ನೀರಾವರಿ ಯೋಜನೆಗಳು.

ಈ ಒಟ್ಟಾರೆ ನೀರಾವರಿ ಜಾಲದಿಂದಾಗಿ ಟಿಪ್ಪುವಿನ ಮೈಸೂರು ಸಂಸ್ಥಾನದಲ್ಲಿ 39,000 ಕೆರೆ ಕಟ್ಟೆಗಳಿದ್ದು ಭಾರತದಲ್ಲೇ ಪ್ರಥಮ ಸ್ಥಾನದಲ್ಲಿತ್ತು. 1803-1804ರ ಅಂದಾಜಿನಂತೆ ಆಗ ಉಳುಮೆಯಾಗುತ್ತಿದ್ದ 30,12,397 ಎಕರೆ ಜಮೀನಿನಲ್ಲಿ 8,13,491 ಎಕರೆ ಜಮೀನು ನೀರಾವರಿಗೆ ಒಳಪಟ್ಟಿತ್ತು. ಮತ್ತೊಂದು ಅಂದಾಜಿನಂತೆ 1799ರ ವೇಳೆಗೆ ಶೇ.35ರಷ್ಟು ಭೂಮಿ ನೀರಾವರಿಗೆ ಒಳಪಟ್ಟಿತ್ತು. ಅಲ್ಲದೇ 1798ರಲ್ಲಿ ಇಂದು ಕೆ.ಆರ್.ಎಸ್ ಇರುವ ಜಾಗದಲ್ಲೇ ಕಾವೇರಿ ನದಿಗೆ ಬೃಹತ್ ಆಣೆಕಟ್ಟು ಕಟ್ಟುವ ಯೋಜನೆಗೆ ಟಿಪ್ಪು ಸರ್ಕಾರ ಅಸ್ತಿಭಾರ ಹಾಕಿತ್ತು. ಅಷ್ಟುಹೊತ್ತಿಗೆ ನಾಲ್ಕನೇ ಮೈಸೂರು ಯುದ್ಧ ಸಾಧ್ಯತೆಗಳಿದ್ದವು ಎಂಬುದನ್ನು ಗಮನಿಸಬೇಕು.

ನಾಡಿನ ಪ್ರಪ್ರಥಮ ರೇಷ್ಮೆ ಬೆಳೆಗಾರ:
ಟಿಪ್ಪು ಸದಾ ಪ್ರಯೋಗಶೀಲನಾಗಿರುತ್ತಿದ್ದ. ವಿಶ್ವದ ಯಾವುದೇ ಮೂಲೆಯಲ್ಲಿ ಕೃಷಿ ಹಾಗೂ ಕೈಗಾರಿಕೆಗೆ ಸಂಬಂಧಪಟ್ಟ ಯಾವುದೇ ಹೊಸ ಅಥವಾ ಇಲ್ಲಿ ಇರದಿದ್ದ ಪದ್ದತಿಗಳು, ಅನ್ವೇಷಣೆಗಳನ್ನು ಕಂಡರೂ ಆತ ಕೂಡಲೇ ರಾಯಭಾರಿಗಳನ್ನು ಕಳಿಸಿ ತರಿಸಿಕೊಂಡು ಉತ್ಪಾದನೆಗೆ ಹಚ್ಚುತ್ತಿದ್ದ.
ಟಿಪ್ಪುವಿನ ಈ ಅದಮ್ಯ ಅಭಿವೃದ್ಧಿಶೀಲ ಗುಣದಿಂದಲೇ ವಿದೇಶಿ ರೇಷ್ಮೆ ಬೆಳೆ ಕರ್ನಾಟಕದಲ್ಲಿ ಪರಿಚಯಗೊಂಡಿತು. ಟಿಪ್ಪು ರೇಷ್ಮೆ ಕೃಷಿಯ ಬಗ್ಗೆ ಅದೆಷ್ಟು ಜತನ ವಹಿಸಿದನೆಂದರೆ 1786ರಲ್ಲಿ ಯುದ್ಧದ ಮಧ್ಯೆ ಸುತ್ತುವರಿಯಲ್ಪಟ್ಟಿದ್ದರೂ ತನ್ನ ಬಿಡುವಿಲ್ಲದ ದಿನಚರಿಯ ನಡುವೆಯೂ ವಿದೇಶದಿಂದ ತರುವ ರೇಷ್ಮೆಗೂಡುಗಳನ್ನು ಹೇಗೆ ಕಾಪಾಡಿ, ಬೆಳೆಸಬೇಕು ಎಂಬುದರ ಬಗ್ಗೆ ಅಧಿಕಾರಿಗಳಿಗೆ ಸುದೀರ್ಘ ಪತ್ರ ಬರೆದು ಮಾರ್ಗದರ್ಶನ ಮಾಡುತ್ತಿದ್ದ. ಟಿಪ್ಪುವಿನ ಈ ನಿರಂತರ ಕಾಳಜಿಯಿಂದ 18ನೇ ಶತಮಾನದ ಕೊನೆಯ ವೇಳೆಗೆ ಮೈಸೂರು ಪ್ರಾಂತ್ಯದಲ್ಲಿ 318 ರೇಷ್ಮೆ ಉತ್ಪಾದನಾ ಕುಟುಂಬಗಳಿದ್ದವು.ಇಂದು ಕರ್ನಾಟಕ ರೇಷ್ಮೆ ಉತ್ಪಾದನೆಯಲ್ಲಿ ಭಾರತದಲ್ಲೇ ಮೊಟ್ಟ ಮೊದಲ ಸ್ಥಾನ ಪಡೆದಿದೆ.

ಸಸ್ಯಶಾಸ್ತ್ರ ಪ್ರಯೋಗಶಾಲೆ-ಲಾಲ್‍ಬಾಗ್:
ಬೆಂಗಳೂರಿನಲ್ಲಿರವ ಲಾಲ್‍ಬಾಗ್ ಸಸ್ಯತೋಟವನ್ನು ಅಪರೂಪದ ಸಸ್ಯತಳಿಗಳನ್ನು ಸಂರಕ್ಷಿಸಲೆಂದೇ ಟಿಪ್ಪು ಪ್ರಾರಂಭಿಸಿದ. ಪ್ರಾಕ್ಸಿ ಫರ್ನಾಂಡೀಸ್ ಎಂಬುವವರು ಬರೆದಿರುವಂತೆ;”ಲಾಲ್ ಬಾಗ್ ಸಸ್ಯ ಉದ್ಯಾನವು ಕೇವಲ ಮನೋಲ್ಲಾಸಕ್ಕಾಗಿ ನಿರ್ಮಿಸಿದ ತೋಟವಾಗಿರಲಿಲ್ಲ. ವಿಶ್ವದ ಬೇರೆಬೇರೆ ಕಡೆಗಳಿಂದ ತರಿಸಲಾಗಿದ್ದ ಅಪರೂಪದ ಸಸ್ಯ ತಳಿಗಳನ್ನೆಲ್ಲಾ ಇಲ್ಲಿ ಸಂರಕ್ಷಣೆ ಮಾಡಲಾಗಿತ್ತು. ಇಂಗ್ಲೆಂಡಿನ ಓಕ್‍ಮರ, ದಕ್ಷಿಣ ಆಫ್ರಿಕಾದ ಪೈನ್‍ಮರ, ಮೆಕ್ಸಿಕೋದ ಅವೋಕಾಡೋ, ಮಾವು, ಕಿತ್ತಳೆ, ಹಿಪ್ಪುನೇರಳೆ, ಸೀಬೆಗಿಡಗಳು ಹಾಗೂ ಹತ್ತಿ ಮತ್ತು ನೀಲಿ ಬೆಳೆಯ ಪ್ರಾಯೋಗಿಕ ಕ್ಷೇತ್ರಗಳು ಲಾಲ್ ಬಾಗಿನಲ್ಲಿದ್ದವು”.

ವಿಶ್ವದಲ್ಲೇ ಅತ್ತುತ್ತಮ ಕಬ್ಬಿಣ:
ಟಿಪ್ಪುವಿನ ಆಳ್ವಿಕೆಯಲ್ಲಿ ದೊರೆತ ಕಬ್ಬಿಣದ ಬಗ್ಗೆ ಹೇನ್ಸ್ ಎಂಬುವವನು ಈಸ್ಟ್ ಇಂಡಿಯಾ ಕಂಪನಿಗೆ ಈ ರೀತಿ ವರದಿ ಮಾಡಿದ್ದ ; “….ಒಟ್ಟಿನಲ್ಲಿ ಹೇಳುವುದಾದರೆ ಇಂಗ್ಲೀಷ್ ಉದ್ಯಮಿಗಳಿಗೆ ಭಾರತದ ಕಬ್ಬಿಣ ಅತ್ಯುತ್ತಮ ಸರಕಾಗುತ್ತದೆ ಎಂದು ನನ್ನ ಭಾವನೆ. ಏಕೆಂದರೆ ಇದಕ್ಕೆ ಹೋಲಿಸಿದರೆ ನಮ್ಮ ಇಂಗ್ಲೀಷ್ ಕಬ್ಬಿಣ ಕನಿಷ್ಟಪಕ್ಷ 30-40 ವರ್ಷಕ್ಕಿಂತ ಹಳತಾದ ಕೆಳದರ್ಜೆಯದು…… ನಾನಿದುವರೆಗೆ ನೋಡಿರುವ ಕಬ್ಬಿಣದಲ್ಲಿ ಭಾರತದ ಈ ಕಬ್ಬಿಣ ಅತ್ಯುತ್ತಮ ದರ್ಜೆಯದು”.

ಸಿಟಿಜನ್ ಟಿಪ್ಪು:
ಬ್ರಿಟಿಷರ ವಿರುದ್ಧ ಟಿಪ್ಪು ಫ್ರಾನ್ಸಿನೊಡನೆ ಸತತ ರಾಜತಾಂತ್ರಿಕ ಸಂಪರ್ಕವಿರಿಸಿ ಕೊಂಡಿದ್ದರೂ  ಅಲ್ಲಿ ಕ್ರಾಂತಿಯ ಸಂಕ್ಷೋಭೆ ಉಂಟಾದಾಗ ಟಿಪ್ಪು ಕ್ರಾಂತಿಕಾರಿಗಳ ಪರವಾಗಿ ನಿಂತಿದ್ದು ಸಹಜವಾಗಿತ್ತು. ಫ್ರಾನ್ಸಿನ ಕಾಂ್ರತಿಕಾರಿ ಸಂಘಟನೆಯಾದ “ಜಾಕೋಬಿನ್ ಕ್ಲಬ್”ಅನ್ನು ಟಿಪ್ಪುವಿನ ಆಶ್ರಯದಲ್ಲಿದ್ದ ಫ್ರೆಂಚರು ಪ್ರಾಂಭಿಸಿದಾಗ ಟಿಪ್ಪು ಅದಕ್ಕೆ ಆಶ್ರಯ ಕೊಟ್ಟು ತಾನೂ ಸಹ ಅದರ ಸದಾಶಯದಲ್ಲಿ “ಸಿಟಿಜನ್ ಟಿಪ್ಪು” ಆಗಿ ಭಾಗವಹಿಸಿದ. ಅಲ್ಲದೇ ಟಿಪ್ಪುವಿನ ಪ್ರಾಂಗಣದಲ್ಲಿ ವಿಮೋಚನಾ ವೃಕ್ಷವೊಂದನ್ನು ನೆಡೆಸಲಾಯಿತು. ಫ್ರೆಂಚ್ ಕ್ರಾಂತಿ ಸಂಭವಿಸಿದಾಗ ಅದರ ಯಶಸ್ಸಿಗೆ ಶ್ರೀರಂಗಪಟ್ಟಣದಲ್ಲೂ ಟಿಪ್ಪು ಸಹ ಸಂಭ್ರಮಾಚರಣೆ ನಡೆಸಿದ. ಹೀಗೆ ಟಿಪ್ಪು ಕೇವಲ ನಾಡಿನೊಳಗೆ ಮಾತ್ರವಲ್ಲ, ವಿಶ್ವದೆಲ್ಲೆಡೆಯಿದ್ದ ಪ್ರಗತಿಪರ ಶಕ್ತಿಗಳೊಡನೆ ಗುರುತಿಸಿಕೊಂಡ.

ಮಹಿಳಾ ಕಾಳಜಿ:
ಟಿಪ್ಪುಸುಲ್ತಾನ್ ಹಾಗೂ ಹೈದರಾಲಿ ಇಬ್ಬರೂ ಮೂಢ ಸಂಪ್ರದಾಯದಡಿ ಮಹಿಳೆಯರು ಅನುಭವಿಸುತ್ತಿದ್ದ ಶೋಷಣೆಯ ಬಗ್ಗೆ ಸಂವೇದನಾ ಶೀಲರಾಗಿದ್ದರು. ಈಗಿನ ಆಧುನಿಕ ಮಹಿಳಾ ವಿಮೋಚನಾ ಪ್ರಜ್ಞೆ ಅವರಿಗಿರಲಿಲ್ಲವಾದರೂ ಅವರಿದ್ದ ಐತಿಹಾಸಿಕ ಕಾಲಘಟ್ಟ ಮಿತಿ ಹಾಗೂ ಅವರು ಪ್ರತಿನಿಧಿಸುತ್ತಿದ್ದ ಪ್ರಗತಿಪರವಾದರೂ ವ್ಯಾಪಾರೋಧ್ಯಮಿ ವರ್ಗದೃಷ್ಟಿಯ ಮಿತಿಯಲ್ಲಿ ಅವರು ಮೂಢ-ಸಂಪ್ರದಾಯಗಳಿಂದ ಮಹಿಳೆಯರ ಶೋಷಣೆಯನ್ನು ನಿಲ್ಲಿಸಲು ಸಾಕಷ್ಟು ಪ್ರಯತ್ನಿಸಿದರು. ಉದಾಹರಣೆಗೆ ಕೇರಳದ ಉತ್ತರ ಮಲಬಾರ್ ಪ್ರಾಂತ್ಯದಲ್ಲಿ ಊಳಿಗಮಾನ್ಯ ಪ್ರಭುಗಳು ವಿಧಿಸಿದ್ದ ಕಂದಾಚಾರಗಳಿಗೆ ಬಲಿಯಾಗಿದ್ದ ಮಹಿಳೆಯರು ಎದೆಯಮೇಲೆ ಬಟ್ಟೆ ಹಾಕುವಂತಿರಲಿಲ್ಲ.
ಜನಕಂಟಕ ಪಾಳೆಗಾರರನ್ನೆಲ್ಲಾ ನಾಶಮಾಡಿದ ನಂತರ ಟಿಪ್ಪು ಈ ಮಹಿಳಾ ವಿರೋಧಿ ಕಂದಾಚಾರಗಳ ವಿರುದ್ಧ ಕ್ರಮ ಕೈಗೊಂಡ. ಈ ನಿಟ್ಟಿನಲ್ಲಿ ಅತ ತನ್ನ ಅಧಿಕಾರಿಗಳಿಗೆ ಹೊರಡಿಸಿದ ನಿರೂಪವೊಂದರಲ್ಲಿ “ಮಹಿಳೆಯರ ಎದೆಯಮೆಲೆ ಬಟ್ಟೆ ಹಾಕಲಾರದ ಅನಿಷ್ಟ ಸಂಪ್ರದಾಯವೊಂದು ಆ ಪ್ರಾಂತ್ಯದಲ್ಲಿ ಅಸ್ತಿತ್ವದಲ್ಲಿದೆ. ಇದು ಸಮಾಜಕ್ಕೆ ಒಂದು ಕಳಂಕ. ಒಂದು ವೇಳೆ ಬಲಪ್ರಯೋಗದಿಂದ ಮಹಿಳೆಯರನ್ನು ಈ ಸ್ಥಿತಿಗೆ ದೂಡಿದ್ದರೆ ಕೂಡಲೇ ಅಂಥವರ ವಿರುದ್ಧ ಕ್ರಮ ಕೈಗೊಳ್ಳತಕ್ಕದ್ದು. ಅಥವಾ ಇದು ಅಲ್ಲಿ ಧಾರ್ಮಿಕ ಸಂಪ್ರದಾಯಗಳ ಭಾಗವಾಗಿ ಅಸ್ತಿತ್ವದಲ್ಲಿದ್ದರೆ ಅಲ್ಲಿನ ಧರ್ಮಗುರುಗಳ ಮನ ಒಲಿಸುವ ಮೂಲಕ ಈ ಕಂದಾಚಾರವನ್ನು ನಿಲ್ಲಿಸಲು ಪ್ರಯತ್ನಿಸತಕ್ಕದ್ದು” ಎಂದು ಆದೇಶ ನೀಡಿದ್ದ.

ಸಂಪೂರ್ಣ ಮಧ್ಯಪಾನ ನಿಷೇಧ:
ಮಧ್ಯಪಾನ ನಿಷೇಧಿಸಿದರೆ ಸರ್ಕಾರದ ಖಜಾನೆ ಖಾಲಿಯಾಗುತ್ತದೆ ಎಂದು ಇಂದಿನ ಸರ್ಕಾರಗಳು ಈಗಲೂ ಜನರನ್ನು ಕುಡಿತದ ಅಮಲಿನಲ್ಲಿಟ್ಟು ಶೋಷಣೆ ಮುಂದುವರೆಸಿದ್ದಾರೆ. ಆದರೆ ಎರಡು ಶತಮಾನಗಳ ಮೊದಲೇ ಟಿಪ್ಪುವು ಸಂಪೂರ್ಣ ಮಧ್ಯಪಾನ ನಿಷೇಧವನ್ನು ಜಾರಿಗೆ ತಂದಿದ್ದ. 1787ರಲ್ಲಿ ಮೀರ್‍ಸಾದಿಕ್‍ಗೆ ಬರೆದ ಪತ್ರವೊಂದರಲ್ಲಿ “ಈ ವಿಷಯದಲ್ಲಿ ಮಾತ್ರ ನಾವು ಯಾವುದೇ ಹಣಕಾಸಿನ ವಿಷಯವನ್ನು”  ಈ ವಿಷಯದಲ್ಲಿ ಮಾತ್ರ ನಾವು ಯಾವುದೇ ಹಣಕಾಸಿನ ವಿಷಯವನ್ನು ಪ್ರಧಾನಗೊಳಿಸಿ ನೋಡಬಾರದು. ಏನೇಆದರೂ ಸಂಪೂರ್ಣ  ಮಧ್ಯಪಾನ ನಿಷೇಧ ಮಾತ್ರ ಜಾರಿಗೆ ಬರಲೇಬೇಕು. ಅದು ಕೇವಲ ಧಾರ್ಮಿಕ ವಿಷಯವಲ್ಲ. ನಾವು ನಮ್ಮ ಜನತೆಯ ಆರ್ಥಿಕ ಸಧೃಢತೆ, ನೈತಿಕ ಔನತ್ಯಗಳನ್ನು ಪ್ರಧಾನವಾಗಿ ಪರಿಗಣಿಸಬೇಕು. ನಮ್ಮ ಯುವಕರಲ್ಲಿ ಸನ್ನಡತೆಯನ್ನು ಬೆಳೆಸಬೇಕು. ಖಜಾನೆಯ ಹಣಕಾಸಿನ ವಿಷಯ ಪ್ರಮುಖವಾದರೂ ಅದು ನಮ್ಮ ಜನತೆಯ ಆರೋಗ್ಯ ಹಾಗೂ ನೈತಿಕತೆಗಿಂತಲೂ ಮುಖ್ಯವಾದದ್ದೇ? ಎಂದು ಪ್ರಶ್ನಿಸಿದ್ದ.
ಇಂದಿನ ನಮ್ಮ ಸಮಾಜವಾದಿಗಳಿಗೂ ಇಲ್ಲದಂತಹ ನೈತಿಕ ಹಾಗೂ ದೂರದೃಷ್ಟಿ ಟಿಪ್ಪುವಿಗಿತ್ತು. ಅಲ್ಲದೇ ಟಿಪ್ಪುವು ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು  ನಾಡಿನಾದ್ಯಂತ ಈಚಲುಮರಗಳನ್ನು ಕಡಿಸಲು ಆಜ್ಞೆ ಮಾಡಿದ್ದ.

ಭಾರತದ ಅತಿದೊಡ್ಡ ವ್ಯಾಪಾರಿ ಕೇಂದ್ರ ಗುಬ್ಬಿ :
ಹೈದರಾಲಿ ಹಾಗೂ ಟಿಪ್ಪು ಅವರ ಆಳ್ವಿಕೆಯಲ್ಲಿ ವಾಣಿಜ್ಯೀಕರಣ ಅದೆಷ್ಟು ತೀವ್ರಗತಿ ಪಡೆದುಕೊಂಡಿತ್ತೆಂದರೆ ಗುಬ್ಬಿ ಹಾಗೂ ಹರಿಹರದ ಸಂತೆಗಳು ಇಡೀ ಸಂಸ್ಥಾನಲ್ಲೇ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದುಕೊಂಡವು.ಬುಕಾನನ್ ದಾಖಲಿಸಿರುವಂತೆ ಆಗ ಗುಬ್ಬಿಯಲ್ಲಿ ನಡೆಯುತ್ತಿದ್ದ ಸಂತೆ ಭಾರತದಲ್ಲೇ ಅತಿ ದೊಡ್ಡ ಸಂತೆಯಾಗಿತ್ತು. ಗುಬ್ಬಿ ಪಟ್ಟಣದಲ್ಲಿ 360ಮನೆಗಳಿದ್ದರೆ 156

ಮಠಗಳಿಂದ ಅಕ್ಷರ ವಿಮೋಚನೆ!
ಒಂದು ಕೇಂದ್ರೀಕೃತ ಪ್ರಭುತ್ವದ ಯಶಸ್ವಿ ನಿರ್ವಹಣೆಗೆ ಅಕ್ಷರಸ್ಥ ಅಧಿಕಾರಿ ವರ್ಗದ ಅಗತ್ಯವನ್ನು ಟಿಪ್ಪು ಮನಗಂಡಿದ್ದ
. ಈ ಕಾರಣದಿಂದ ಟಿಪ್ಪುವಿನ ಆಳ್ವಿಕೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಅಧಿಕಾರಿಗಳಿಗೆ ಹಾಗೂ ಅವರ ಮಕ್ಕಳು ಓದು ಬರಹ ಕಲಿಯುವುದು ಕಡ್ಡಾಯವಾಗಿತ್ತು. ಹೀಗೆ ಶತಶತಮಾನಗಳಿಂದ ಸಾಗಿಬಂದಿದ್ದ ಅಕ್ಷರದ ಮೇಲೆ ಬ್ರಾಹ್ಮಣಶಾಹಿ ಹತೋಟಿ ತಪ್ಪಿ ಸಾರ್ವಜನಿಕ ಗೊಳಿಸುವ ಪ್ರಕ್ರಿಯೆಯು ಸಣ್ಣದಾಗಿ ಪ್ರಾರಂಭಗೊಂಡಿತ್ತು.

ಲೇಖಕ-ಟಿಪ್ಪು!
ಟಿಪ್ಪು ತನ್ನ ಬಿಡುವಿಲ್ಲದ ದಿನಚರಿಯ ನಡುವೆಯೂ ಹಲವು ಪುಸ್ತಕಗಳನ್ನು ರಚಿಸಿದ್ದಾನೆ. ಟಿಪ್ಪುವು ಕನ್ನಡ,ತೆಲುಗು, ತಮಿಳು,ಭಾಷೆ ಬಲ್ಲವನಾಗಿದ್ದ. ಆತ ಬರೆದ ಪುಸ್ತಕಗಳ ಮೂಲಧಾತುವೂ ಸಹ ಬ್ರಿಟಿಷ್ ವಸಾಹತುಶಾಹಿಯಿಂದ ಹಾಗೂ ಊಲಿಗಮಾನ್ಯತೆಯಿಂದ ನಾಡಿನ ಬಿಡುಗಡೆಯ ಅಂಶವನೇ ಹೊಂದಿತ್ತು. ಅವುಗಳಲ್ಲಿ ಫಾತುಲ್ ಮುಜಾಹಿದೀನ್(ಸೈನಿಕನ ವಿಜಯ)ಯುದ್ಧ, ಕಲೆ,ಹಾಗೂ ವಿಜ್ಞಾನಗಳ ಬಗ್ಗೆಯಾಗಿತ್ತು. ಭೂ ಕಂದಾಯ ಕಾಯಿದೆ ಹಾಗೂ ವಾಣಿಜ್ಯ ಕಾಯಿದೆಗಳು ಟಿಪ್ಪುವಿನ ರಾಷ್ಟ್ರ ನಿರ್ಮಾಣದ ಪ್ರಣಾಳಿಕೆಯೇ ಆಗಿತ್ತು. ಅಲ್ಲದೇ “ ಟಿಪ್ಪು ಕನಸುಗಳು” ಎಂಬ ಪುಸ್ತಕ 38 ಲೇಖನಗಳನ್ನು ಹೊಂದಿದ್ದು ಸ್ವತಂತ್ರ ರಾಷ್ತ್ರ ನಿರ್ಮಾಣದ ಬಗೆ ಟಿಪ್ಪುವಿನ ಕನಸುಗಳನ್ನು ದಾಖಲಿಸುತ್ತದೆ.

(ಮುಂದುವರೆಯುವುದು)

ಸಹಕಾರ: ಸಮಾಜವಿಜ್ಞಾನ ಅಧ್ಯಯನ ಕೇಂದ್ರ

ಹುತಾತ್ಮ ಟಿಪ್ಪುವಿನ ಕುರಿತಾದ ಸರಣಿ ಲೇಖನಮಾಲೆ ನಿಮ್ಮ ಕೆ.ಎನ್.ಪಿ.ಯಲ್ಲಿ ಪ್ರಕಟಗೊಳ್ಳುತ್ತಿದೆ. ತಪ್ಪದೇ ಓದಿರಿ.

ಹುತಾತ್ಮ ಟಿಪ್ಪುಸುಲ್ತಾನ್ ಭಾಗ-9 ಟಿಪ್ಪುವನ್ನು ಸ್ಮರಿಸೋಣ! ಸ್ವತಂತ್ರ ಕರ್ನಾಟಕ ಕಟ್ಟೋಣ! ಓದಲು ಇಲ್ಲಿ ಕ್ಲಿಕ್ಕಿಸಿ

Tags: ಅಂಕಣಲೇಖನಹುತಾತ್ಮ ಟಿಪ್ಪು
Next Post

ಹುತಾತ್ಮ ಟಿಪ್ಪುಸುಲ್ತಾನ್ ಭಾಗ-11

Related Posts

ಕವಿತೆ | ಪಾಪಿಸ್ತಾನ | ದೇವರಾಜ್ ನಿಸರ್ಗತನಯ
ಅಂಕಣ

ಕವಿತೆ | ಪಾಪಿಸ್ತಾನ | ದೇವರಾಜ್ ನಿಸರ್ಗತನಯ

February 15, 2019
ಹಾವನೂರ ಗ್ರಾಮದೇವತೆಯ ಜಾತ್ರಾ ಪ್ರಯುಕ್ತ ವಿಶೇಷ ಲೇಖನ
ಜಿಲ್ಲಾವಾರು ಸುದ್ದಿ

ಹಾವನೂರ ಗ್ರಾಮದೇವತೆಯ ಜಾತ್ರಾ ಪ್ರಯುಕ್ತ ವಿಶೇಷ ಲೇಖನ

February 6, 2019
ವರಕವಿ | ಶ್ರೀನಿವಾಸ ಎಂ ಪಣಕಹಳ್ಳಿ
ಅಂಕಣ

ಕವಿತೆ | ವರಕವಿ | ಶ್ರೀನಿವಾಸ ಎಂ ಪಣಕಹಳ್ಳಿ

January 31, 2019
ನಾನು ಮತ್ತು ಗಾಂಧೀಜಿ | ದೇವರಾಜ್ ನಿಸರ್ಗತನಯ
ಅಂಕಣ

ಕವಿತೆ | ನಾನು ಮತ್ತು ಗಾಂಧೀಜಿ | ದೇವರಾಜ್ ನಿಸರ್ಗತನಯ

January 29, 2019
ನಡೆದಾಡುವ ದೇವರು | ಶ್ರೀನಿವಾಸ ಎಂ ಪಣಕಹಳ್ಳಿ
ಅಂಕಣ

ಕವಿತೆ | ನಡೆದಾಡುವ ದೇವರು | ಶ್ರೀನಿವಾಸ ಎಂ ಪಣಕಹಳ್ಳಿ

January 26, 2019
ನಾವು ಭಾರತೀಯರು | ದೇವರಾಜ್ ನಿಸರ್ಗತನಯ
ಅಂಕಣ

ಭಾವೈಕ್ಯತಾ ಗೀತೆ | ನಾವು ಭಾರತೀಯರು | ದೇವರಾಜ್ ನಿಸರ್ಗತನಯ

January 26, 2019
Next Post
ಹುತಾತ್ಮ ಟಿಪ್ಪುಸುಲ್ತಾನ್ ಭಾಗ-11

ಹುತಾತ್ಮ ಟಿಪ್ಪುಸುಲ್ತಾನ್ ಭಾಗ-11

Leave a Reply Cancel reply

Your email address will not be published. Required fields are marked *

Latest News

ಹುತಾತ್ಮ ವೀರಯೋಧರಿಗೆ ಶ್ರದ್ಧಾಂಜಲಿ

ಮೋಸದ ಕುಕೃತ್ಯಕ್ಕೆ ತಕ್ಕ ಉತ್ತರ ನೀಡಿ ಸ್ನೇಹಿತರ ಶೌರ್ಯಕ್ಕೆ ಅರ್ಪಿಸುತ್ತೇವೆ : ಯೋಧ ಬಸವರಾಜ ಯರಗೇರಿ

by admin
February 17, 2019
0

ಕೆ.ಎನ್.ಪಿ.ವಾರ್ತೆ,ಗಜೇಂದ್ರಗಡ,ಫೆ.17; ಪುಲ್ವಾಮಾದಲ್ಲಿ ಬಸ್‍ನಲ್ಲಿ ಚಲಿಸುತ್ತಿದ್ದ ಯೋಧರಿಗೆ ಮೋಸದ ಮೂಲಕ ಕುಕೃತ್ಯ ನಡೆಸಿ ಹತ್ಯೆ ಮಾಡಿರುವ ಜೈಷ್ ಉಗ್ರರನ್ನು ಸೆದೆಬಡಿಯುವ ಮೂಲಕ ನಮ್ಮ 49 ಸ್ನೇಹಿತರಿಗೆ ಅರ್ಪಣೆ ಮಾಡುತ್ತೇವೆ...

ಪುರಸಭೆ ಮುಖ್ಯಾಧಿಕಾರಿ ಸಿದ್ಧಲಿಂಗ ಇಬ್ರಂಡಿಯು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ : ಅಬ್ಬಿಗೇರಿ ಆರೋಪ

ಪುರಸಭೆ ಮುಖ್ಯಾಧಿಕಾರಿ ಸಿದ್ಧಲಿಂಗ ಇಬ್ರಂಡಿಯು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ : ಅಬ್ಬಿಗೇರಿ ಆರೋಪ

by admin
February 17, 2019
0

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಫೆ.17; ಪುರಸಭೆಯಲ್ಲಿ ಫೆ.18ರಂದು ಕರೆದಿರುವ ಸಭೆಯು ಹೈಕೋಟ್‌ನ ನಿರ್ದೇಶನದಂತೆ ಕರೆಯದೇ ಮುಖ್ಯಾಧಿಕಾರಿಯು ಕಾನೂನು ಬಾಹಿರವಾಗಿ ವರ್ತಿಸುತ್ತಿದ್ದಾರೆ ಎಂದು ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಆರೋಪಿಸಿದರು. ಪುರಸಭೆ ಅಧ್ಯಕ್ಷರ...

ನೈಜತೆಯನ್ನು ಎತ್ತಿಹಿಡಿದು ಇತಿಹಾಸ ಬರೆದ ಮಹಾನ್ ತಪಸ್ವಿಗಳು

ನೈಜತೆಯನ್ನು ಎತ್ತಿಹಿಡಿದು ಇತಿಹಾಸ ಬರೆದ ಮಹಾನ್ ತಪಸ್ವಿಗಳು

by admin
February 17, 2019
0

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಫೆ.17; ನಗರದಲ್ಲಿ ಫೆ 15 ಮತ್ತು 17 ರಂದು ನಡೆದ ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವಕ್ಕೆ ಒಂದು ಐತಿಹಾಸಿಕ ಧಾರ್ಮಿಕ ಇತಿಹಾಸವಿದೆ. 12ನೇ ಶತಮಾನದಿಂದ ಇಂದಿನವರೆಗೂ ಭವ್ಯ...

ಯುವ ಮನಸ್ಸುಗಳನ್ನು ಸದೃಢಗೊಳಿಸಲು ಕ್ರೀಡೆಗಳು ಅವಶ್ಯ : ರಾಮಪ್ಪ ಟಿ 

ಯುವ ಮನಸ್ಸುಗಳನ್ನು ಸದೃಢಗೊಳಿಸಲು ಕ್ರೀಡೆಗಳು ಅವಶ್ಯ : ರಾಮಪ್ಪ ಟಿ 

by admin
February 17, 2019
0

ಕೆ.ಎನ್.ಪಿ.ವಾರ್ತೆ,ಕನಕಗಿರಿ,ಫೆ.17; ಯುವ ಮನಸ್ಸುಗಳನ್ನು ಸದೃಢಗೊಳಿಸಲು ಕ್ರೀಡೆಗಳು ಅವಶ್ಯವಾಗಿದ್ದು, ಗ್ರಾಮೀಣ ಪ್ರದೇಶದ ಸಂಘ, ಸಂಸ್ಥೆಗಳು ಕಲೆ ಮತ್ತು ಕ್ರೀಡೆಯಲ್ಲಿ ತೊಡಗಿಕೊಂಡಾಗ ನಮ್ಮ ದೇಶದ ಭಾಷೆ, ಸಾಂಸ್ಕೃತಿಕ ಬಾಂಧವ್ಯ ಮತ್ತು...

KNP

The Karnataka news portal offers latest updates of Karnataka news, current affairs, stories, videos, photos, movies, sports, literature, new short films, political news and interviews, automobile, health, technology related news and information's.

Follow Us

February 2019
M T W T F S S
« Jan    
 123
45678910
11121314151617
18192021222324
25262728  
  • ಮನೆ
  • ಸುದ್ದಿ
  • ಸಿನಿಮಾ
  • ಲೈಫ್ ಲೈನ್
  • ಗ್ಯಾರೇಜ್
  • ಟೆಕ್ನಾಲಜಿ
  • ಇತರೆ

Copyrights © 2018 Karnatakanewsportal.com | All Rights Reserved.

No Result
View All Result
  • ಮನೆ
  • ಸುದ್ದಿ
    • ಜಿಲ್ಲಾವಾರು ಸುದ್ದಿ
    • ಕ್ರೀಡಾಸುದ್ದಿ
    • ಕರ್ನಾಟಕ ರೌಂಡಪ್
    • ರಾಷ್ಟ್ರೀಯ ಸುದ್ದಿ
    • ಅಂತರಾಷ್ಟ್ರೀಯ ಸುದ್ದಿ
    • ವಾಣಿಜ್ಯ ಸುದ್ದಿ
    • ಸಂಪಾದಕೀಯ
    • ಡಿಂಕು ರೌಂಡಪ್
  • ಸಿನಿಮಾ
    • ಸಿನಿಸುದ್ದಿ
    • ಚಿತ್ರ ವಿಮರ್ಶೆ
    • ಬಾಲಿವುಡ್
    • ಹಾಲಿವುಡ್
    • ಗಾಸಿಪ್
    • ಟಿ.ವಿ
    • ಸಂದರ್ಶನ
    • ನಮ್ ಹಾಡು
  • ಲೈಫ್ ಲೈನ್
    • ಸೌಂದರ್ಯ
    • ಆರೋಗ್ಯ
    • ಮನೆಮದ್ದು
    • ಫಿಟ್ನೆಸ್
  • ಗ್ಯಾರೇಜ್
    • ಗ್ಯಾರೇಜ್ ಮಾತು
    • ಬೈಕ್ ರೈಡ್
    • ಹೊಸಕಾರು
    • ಸವಾರಿ
  • ಟೆಕ್ನಾಲಜಿ
    • ಸಾಫ್ಟ್ ಮಾತು
    • ಟ್ಯಾಬ್ಲೈಟ್ಸ್
    • ಕಂಪ್ಯೂಟರ್ಸ್
    • ಮೊಬೈಲ್ಸ್
  • ಇತರೆ
    • ಕೃಷಿ
      • ರೈತ
      • ಸಾವಯವ ಕೃಷಿ
      • ನಮ್ಮ ಜಲಾಶಯಗಳು
      • ನೇಗಿಲಯೋಗಿ
    • ಅಂಕಣ
      • ಬದುಕು ಬರಹ
      • ಲೇಖನ
      • ಕವನ
      • ಕತೆ
      • ರಂಗಭೂಮಿ
      • ವಿಮರ್ಶೆ
      • ಹೊಸಪುಸ್ತಕ
      • ಫ್ಯೂಚರ್
      • ಮುಗುಳುನಗೆ
      • ಮಕ್ಕಳ ಸಾಹಿತ್ಯ
    • ಮಹಿಳೆ
      • ಸಾಧಕಿ
      • ಉದ್ಯೋಗಿನಿ
      • ಅಡುಗೆಮನೆ
    • ವೀಡಿಯೋ
    • ಮಾರುಕಟ್ಟೆ
    • ನಾಗರಿಕ ಪತ್ರಕರ್ತ
    • ಪಂಚ್ ಪಾಪಣ್ಣ
    • ಪಬ್ಲಿಕ್ ಪವರ್
    • ಜನಮೆಚ್ಚಿದ ಸುದ್ದಿ
    • ಗೋಡೆಗಳ ಮಾತು
    • ಕೆ.ಎನ್.ಪಿ. ಪದಬಂಧ
    • ಕೆ.ಎನ್.ಪಿ. ಗ್ಯಾಲರಿ

Copyrights © 2018 Karnatakanewsportal.com | All Rights Reserved.