ಕೆ.ಎನ್.ಪಿ.ವಾರ್ತೆ,ಗ್ಯಾಡ್ಜಟ್ಸ್;

ಹವಮಾನ ವೈಪರಿತ್ಯದ ಸಮಯದಲ್ಲೂ ಯಾವುದೇ ಸಮಸ್ಯೆ ಇಲ್ಲದೆ ಎಲ್ಲಾ ಗ್ರಾಹಕರು ಸಂಪರ್ಕ ಸಾಧಿಸಲು ಬಿಎಸ್ಎನ್ಎಲ್ ಚಿಂತನೆ ಮಾಡಿದೆ.

ಈ ಪ್ರಕ್ರಿಯೆ ಪೂರ್ಣವಾಗಲು 14-24 ತಿಂಗಳ ಕಾಲಾವಕಾಶಬೇಕೆಂದು ಬಿಎಸ್ಎನ್ಎಲ್ ವ್ಯವಸ್ಥಾಪಕ ನಿರ್ದೆಶಕ ಅನುಪಮ್ ಶ್ರೀವಾಸ್ತವ್ ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಪೊಲೀಸ್ ಇಲಾಖೆ,ಗಡಿ ಭಧ್ರತಾ ಪಡೆ, ವಿಪತ್ತು ನಿರ್ವಹಣಾ ಸಂಸ್ಥೆ ಇತ್ಯಾದಿ ಸರ್ಕಾರಿ ಸಂಸ್ಥೆಗಳಿಗೆ ಸೇವೆ  ನೀಡಲಾಗುತ್ತದೆ. ನಂತರದಲ್ಲಿ ಸೇವೆಯನ್ನು ಸಾರ್ವಜನಿಕ ವಲಯಕ್ಕೆ ವಿಸ್ತರಿಸಲಾಗುವುದು ಎಂದರು.

35,700ಕಿ.ಮಿ ದೂರದಲ್ಲಿರುವ ಉಪಗ್ರಹಗಳು ರವಾನೆ ಮಾಡುವ ಸಂದೇಶ ಬಳಸಿ ಸ್ಯಾಟಲೈಟ್ ಫೋನ್ಗಳು ಕಾರ್ಯ ನಿರ್ವಹಿಸಲಿದ್ದು, ವಿಶೇಷವಾದ ಇನ್ಮಾರ್ಸ್ಯಾಟ್ ವ್ಯವಸ್ಥೆ ನೀಡಲಾಗುತ್ತದೆ. ಇದು 14ಉಪಗ್ರಹಗಳ ಗುಚ್ಛವಾಗಿದೆ. ಬೇರೆ ಜಾಲಗಳು ತಲುಪದ  ಸ್ಥಳಗಳಲ್ಲೂ ಸಿಗ್ನಲ್ಗಳನ್ನು ಪ್ರತಿಫಲಿಸುವ ಕ್ಷಮತೆ ಹೊಂದಿದೆ.