ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಮಾ.03;
ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ಪಹಣಿ, ಜಾತಿ ಪ್ರಮಾಣ ಪತ್ರ ಹಾಗೂ ಇತರ ಸರ್ಕಾರಿ ಯೋಜನೆಗಳನ್ನು ಆರಂಭಿಸಬೇಕು ಎಂದು ಮನವಿ ಸಲ್ಲಿಸಲಾಯಿತು.
ಉಚ್ಚoಗಿದುರ್ಗವೂ ಹರಪನಹಳ್ಳಿ ತಾಲ್ಲೂಕಿನಲ್ಲಿ ದೊಡ್ದ ಗ್ರಾಮ ಪಂಚಾಯ್ತಿ ಆಗಿದ್ದು, ಸುತ್ತ ಮುತ್ತಲಿನ ಗ್ರಾಮಗಳ ಜನಸಂಖ್ಯೆ 60ಸಾವಿರಕ್ಕಿಂತ ಹೆಚ್ಚು ಇದ್ದು, ಸರ್ಕಾರದ ಯೋಜನೆ ಪಡೆಯಲು ಜಾತಿ ಪ್ರಮಾಣ ಪತ್ರ ನೀಡುವುದು ಅವಶ್ಯವಾಗಿದೆ.
ಗ್ರಾಮದಲ್ಲಿ ರೈತರಿಗೆ ಪಹಣಿ ಕೇಂದ್ರ ತೆರೆದು ಸುತ್ತಮುತ್ತಲಿನ ಜನರಿಗೆ ಸಹಾಯವಾಗುವಂತೆ ಮಾಡಬೇಕು ಎಂದು ರೈತ ಸಂಘದಿoದ ಉಪ ತಹಶೀಲ್ದಾರ್ ಪಾತಿಮಾಗೆ ಮನವಿ ಪತ್ರ ನೀಡಲಾಯಿತು.
ಈ ವೇಳೆ ಮಾತನಾಡಿದ ಉಪ ತಹಸೀಲ್ದಾರ್ ಪಾತಿಮಾ, ಜಾತಿ ಪ್ರಮಾಣ ಪತ್ರ ಹಾಗೂ ಪಹಣಿ ನೀಡಲು ಸರ್ಕಾರ ಆದೇಶ ನೀಡಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಪಾತಿಮಾ, ಕಂದಾಯ ನಿರೀಕ್ಷಕ ದಿನೇಶ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಚೌಡಪ್ಪ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಬಸವರಾಜ್ ಪೂಜಾರ್