ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಡಿ.21;

ರೈತರಿಗಾಗಿ 5ದಿನಗಳ ಕಾಲ ಚಿತ್ರದುರ್ಗದ ಶ್ರೀ ಮುರಘಮಠದಲ್ಲಿ ಬೆಳಕಿನ ಬೇಸಾಯ ಕೃಷಿ ಕಾರ್ಯಗಾರ.

ಕನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಅಮೃತಭೂಮಿ ಅಂತರ್ ರಾಷ್ಟ್ರೀಯ ಸುಸ್ತಿರ ಅಭಿವೃದ್ದಿ ಕೇಂದ್ರ ಮತ್ತು ಉಳಿಮೆ ಪ್ರತಿಷ್ಠಾನದ ವತಿಯಿಂದ  ಜನವರಿ 7ರಿಂದ 11ರವರೆಗೆ 5ದಿನಗಳ ಕಾಲ ಚಿತ್ರದುರ್ಗದ ಶ್ರೀ ಮುರಘಮಠದಲ್ಲಿ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಕಾರ್ಯಗಾರ ನೆಡೆಯಲಿದೆ ಎಂದು ಕೃಷಿ ತಜ್ಞ ಅವಿನಾಶ ತಿಳಿಸಿದರು.

ಮಂಗಳವಾರ ನಗರದ ಖಾಸಗಿ ಹೋಟೆಲ್ ನಲ್ಲಿ ನೆಡೆಸಿದ ಸುದ್ದಿ ಗೋಷ್ಠಿಯಲ್ಲಿ ರಾಜ್ಯರೈತ ಸಂಘದ ಜಿಲ್ಲಾದ್ಯಕ್ಷ ಪುರುಷೋತ್ತಮಗೌಡ ದರೂರ್ ಮತ್ತಿತರರು ಮಾತನಾಡಿ ನೈಸರ್ಗಿಕ ರೈತ, ಕೃಷಿ ತಜ್ಞ ಅವಿನಾಶ್, ನೈಸರ್ಗಿಕ ಕೃಷಿಯುಗ ಪ್ರದರ್ಶಕ ಪದ್ಮಶ್ರೀ ಶುಭಾಷ್ ಪಾಳೆಕರ್ ಅವರು ಸಾವಯವ ಕೃಷಿಯ ಬಗೆಗಿನ ಅವರ ಅನುಭವ ಜ್ಞಾನವನ್ನು ರೈತರೊಂದಿಗೆ ಹಂಚಿ ಕೋಳ್ಳಲಿದ್ದಾರೆ. ಮತ್ತು ರೈತರು ಯಾವ ವಿಧಧ ಬೆಳೆಗಳನ್ನು ಬೆಳೆದು ಹೆಚ್ಚು ಲಾಭಗಳಿಸಬಹುದೆಂಬ ಮಾಹಿತಿಯನ್ನು ಈ ಕಾರ್ಯಗಾರದಿಂದ ಪಡೆಯಬಹುದು ಎಂದು ತಿಳಿಸಿದರು.

ಕುಸಿಯುತ್ತಿರುವ ಅಂತರ್ಜಲ, ಕಡಿಮೆಮಳೆ, ಅದಿಕ ಪ್ರಮಾಣದಲ್ಲಿ ರಾಸಾಯನಿಕ ಬಳಕೆ, ಇತ್ಯಾದಿ ಕಾರಣಗಳಿಂದಾಗಿ ರೈತರಿಗೆ ಕೃಷಿಯು ಹೆಚ್ಚಿನ ವೆಚ್ಚವಾಗುತ್ತದೆ. ಇದನ್ನು ಕಡಿಮೆ ಕರ್ಚಿನಲ್ಲಿ ಉತ್ತಮ ಬೆಳೆ ತೆಗೆಯುವ ನೈಸರ್ಗಿಕ ಕೃಷಿ ಕಾರ್ಯಾಗಾರದ ಬಗ್ಗೆ ಈ ಕಾರ್ಯಕ್ರಮದಲ್ಲಿ ಬೆಳಕು ಚೆಲ್ಲಲಾಗುತ್ತದೆ ಎಂದರು. ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲರ ಆಶಯಕ್ಕೆ ಇರುವ ಒಂದೇ ಒಂದು ಬೆಳಕಿನ ಕಿಂಡಿ ಎಂದರೆ ಅದು ಬೆಳಕಿನ ಬೇಸಾಯ ಅಥವ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಪದ್ದತಿ. ಇದರಲ್ಲಿ ಮುಖ್ಯವಾಗಿ ಸಾವಯವ ಇಂಗಾಲ, ವಾಯುದ್ರವ, ಹಾಗೂ ಬೆಳಕಿನ ಸಂಯೋಜನೆಯನ್ನು ಪರಿಗಣಿಸಲಾಗುತ್ತದೆ. ಬೆಳಕಿನ ಬೇಸಾಯ ಪದ್ದತಿಯಿಂದ ಭೂಮಿಯ ಕಣ್ಣು ತೆರೆಯುತ್ತದೆ ಅಂತೆಯೆ ಮನಕುಲದ ಕಣ್ಣನ್ನು ಸಹ ತೆರೆಯ ಬಹುದಾಗಿದೆ ಎಂದು ಅಬಿಪ್ರಾಯಪಟ್ಟರು.

ಬೆಳಕಿನ ಬೇಸಾಯ ಪದ್ದತಿಯಲ್ಲಿ ಹ್ಯೂಮಸ್ ಉತ್ಪತ್ತಿ ಮಾಡುವುದರ ಬಗ್ಗೆ ಗಮನಹರಿಸುತ್ತೇವೆ ಇದರಿಂದ ಭೂಮಿಯು ಬಲಗೋಳ್ಳುತ್ತದೆ. ಹಾಗೆಯೇ ರೈತರು ಕೂಡ ಸ್ವಾವಲಂಬಿಗಳಾಗಿ ಬದುಕಲು ದಾರಿಯಾಗುತ್ತದೆ. ಹ್ಯೂಮಸ್‍ನಲ್ಲಿರುವ ಅದ್ಭುತ ಶಕ್ತಿಯೆಂದರೆ ಒಂದು ಕೇಜಿ ಹ್ಯೂಮಸ್. ಒಂದು ದಿನಕ್ಕೆ ಆರು ಲೀಟರ್ ನೀರನ್ನು ವಾತವರಣ ದಿಂದ ಹೀರಿಕೊಂಡು ಹಿಡಿದಿಟ್ಟು ಕೋಳ್ಳುವ ಶಕ್ತಿ ಹೊಂದಿರುವುದು ಇದರಿಂದಗಿ ಈ ಪದ್ದತಿಯಲ್ಲಿ ಶೇಕಡ 50ರಷ್ಟು ನೀರನ್ನು ಕಡಿಮೆ ಗೋಳಿಸಬಹುದೆಂದು ವಿವರಿಸಿದರು.

ಸಾವಯವ ಇಂಗಾಲ ಪದ್ದತಿಯು ಭೂಮಿಯ ಫಲವತ್ತತೆಯನ್ನು ಅಳೆಯುವ ಸಾದನ ಎನ್ನಬಹುದು. ಸಾಮಾನ್ಯವಾಗಿ ಒಂದು ಎಕರೆ ಗದ್ದೆಯಲ್ಲಿ ಭತ್ತ ಬೆಳೆಯಲು ಇಪತ್ತರಿಂದ ಇಪತೈದು ಸಾವಿರಲೀಟರ್ ನೀರು ಬೇಕಾಗುತ್ತದೆ. ಆದರೆ ನೈಸರ್ಗಿಕ ಕೃಷಿ ಪದ್ದತಿಯಿಂದ 9ರಿಂದ 10 ಸಾವಿರಲೀಟರ್ ಗಳಷ್ಟು  ನೀರನ್ನು ಉಪಯೋಗಿಸಿ ಅದೇ ಸರಾಸರಿ ಇಳುವರಿಯನ್ನು ಪಡೆಯ ಬಹುದಾಗಿದೆ ಎಂದು ಹೇಳಿದರು. ಈ ಎಲ್ಲಾ ಅಂಶಗಳ ಬಗ್ಗೆ ಈ ಒಂದು ಕಾರ್ಯಗಾರವನ್ನು ಆಯೋಜಿಸಿದ್ದೇವೆ. ಇದರ ಪ್ರಯೋಜನವನ್ನು ರೈತರು ಪಡೆದು ಕೊಳ್ಳಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಿ.ಎಂ.ವೀರಪ್ಪಯ್ಯ, ಗಂಗಾದರ್‍ ಗಡಿಗಿ, ಶರಣಗೌಡ, ಶ್ರೀಮತಿಗಂಗಾಧರ ವಾಡಕರ್ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಟಿ.ಗಣೇಶ.