ಕೆ.ಎನ್.ಪಿ.ಕವಿತೆ,ಜೂ.07;
ಕವಿತೆ ವಿಭಾಗದಲ್ಲಿ ಕೆ.ಎನ್.ಪಿ. ಬಳಗವು ಪ್ರತಿನಿತ್ಯ ಒಂದೊಂದು ಕವಿತೆಯನ್ನು ಪ್ರಕಟಿಸಲು ಮುಂದಾಗಿದೆ. ಆ ಮೂಲಕ ಯುವ ಮತ್ತು ಉದಯೋನ್ಮುಖ ಬರಹಗಾರರಿಗೆ ಮತ್ತಷ್ಟು ಬರವಣಿಗೆಗೆ ಹಚ್ಚುವಂತಹ ಆತ್ಮವಿಶ್ವಾಸವನ್ನು ತುಂಬುವ ನಿಟ್ಟಿನಲ್ಲಿ ಕೆ.ಎನ್.ಪಿ. ಹೆಜ್ಜೆಯಿಡುತ್ತಿದೆ. ಓದುಗರು ನಮ್ಮ ಈ ಪ್ರಯತ್ನಕ್ಕೆ ಬೆಂಬಲ ನೀಡಿ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸಿರಿ.
ದಿನದ ಕವಿತೆ ವಿಭಾಗದಲ್ಲಿ ಕೊಪ್ಪಳ ಜಿಲ್ಲೆಯ ಭರವಸೆಯ ಯುವ ಕವಿ ಮೆಹಬೂಬ ಮಾಕಾನದಾರ್ ಅವರ “ಸೂಜಿಯ ಜೊತೆ ದಾರವು ಇದೆ” ಎಂಬ ಕವಿತೆಯನ್ನು ಪ್ರಕಟಿಸಲಾಗಿದೆ. ಜೀವಪ್ರೀತಿಯುಳ್ಳ ಮೆಹಬೂಬ್ ಅವರು ತಮ್ಮ ಕವಿತೆಗಳಲ್ಲಿ ಸಾಮಾಜಿಕ ಸಾಮರಸ್ಯದ ಬಗ್ಗೆಯೇ ಹೆಚ್ಚು ಮಾತಾಡುತ್ತಾರೆ. ಹಾಗಾಗಿಯೆ ಮೆಹಬೂಬ್ ಮಾನವೀಯ ಮನಸುಳ್ಳ ಎಲ್ಲರಿಗೂ ಒಂದಿಷ್ಟು ಹತ್ತಿರವಾಗುವ ಕವಿ. ಸೂಜಿಯ ಜೊತೆ ದಾರವು ಇದೆ ಕವಿತೆಯಲ್ಲಿ ಕೆಳಗಿನ ಸಾಲುಗಳು ಹೆಚ್ಚು ಮನಸೆಳೆಯುತ್ತವೆ.
ನಿನಗೆ ಹುಣ್ಣಿಮೆಯ ಬೆಳದಿಂಗಳು
ತರುವ ಚಂದ್ರ
ನನಗಾಗಿ ರಮಜಾನ್ ತರುತ್ತಾನೆ
ನಿನ್ನ ಅಮ್ಮ ತೋರಿಸೂ ಚಂದ್ರ
ನನ್ನಮ್ಮನಿಗೂ ಮಾತಾಡಿಸುತ್ತಾನೆ
ಒಂದೇ ಬಳ್ಳಿಯ ಹೂಗಳು ನಾವು
ಇದ್ದರೆ ದಯಾದಿ ಕಲಹ
ತೆಗೆದು ಹೊಲೆದುಬಿಡು….
ಸಹೃದಯರು ಕವಿತೆ ಓದಿ ತಮ್ಮ ಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.
ಸೂಜಿಯ ಜೊತೆ ದಾರವು ಇದೆ
ನನ್ನ ಬಳಿ,
ಸೂಜಿಯ ಜೊತೆ ದಾರವು ಇದೆ.
ಗೊತ್ತು ನನಗೆ ಅದು
ನಿನ್ನ ಬಳಿಯು ಇದೆ…
ನನ್ನೇದೆಯ ಚೀಲ
ಪ್ರೇಮ ದಾಹದಿಂದ
ಒಣಗುತ್ತಿದೆ
ನಿನ್ನ ಬಳಿವಿದ್ದರೆ ಒಂದು
ಮುಷ್ಟಿ ಹಾಕಿ
ಹೊಲೆದುಬಿಡು….
ನನ್ನ ಈದ್ ನಲ್ಲಿಯ
ಶಾಂತಿಯು
ಏಕಾಂಗಿಯಾಗಿ ಸಂಭ್ರಮಿಸುತ್ತಿದೆ.
ನಿನ್ನ ಹಬ್ಬದ ದೀಪಗಳ ಕಾಂತಿಯನ್ನು ತುಂಬಿಸಿ ಹೊಲೆದುಬಿಡು….
ನಿನಗೆ ಹುಣ್ಣಿಮೆಯ ಬೆಳದಿಂಗಳು
ತರುವ ಚಂದ್ರ
ನನಗಾಗಿ ರಮಜಾನ್ ತರುತ್ತಾನೆ
ನಿನ್ನ ಅಮ್ಮ ತೋರಿಸೂ ಚಂದ್ರ
ನನ್ನಮ್ಮನಿಗೂ ಮಾತಾಡಿಸುತ್ತಾನೆ
ಒಂದೇ ಬಳ್ಳಿಯ ಹೂಗಳು ನಾವು
ಇದ್ದರೆ ದಯಾದಿ ಕಲಹ
ತೆಗೆದು ಹೊಲೆದುಬಿಡು….
ನೀ ‘ಹಿಂ’ದಾದರೆ
ನಾ ‘ಮುಂ’ದೆ ಸಾಗಲ್ಲ
ಒಂದೇ ಕಾಲಿನ ಏಣಿನ
ಹತ್ತೋಕಾಗಲ್ಲ
ಉತ್ತಮ ಸರ್ವೋತ್ತಮ ಬೇಡ
ನಾ ಹೆಚ್ಚು ನೀ ಕಡಿಮೆ
ಅನ್ನಬೇಡ
ಇದ್ದರೆ ನಮ್ಮಲ್ಲಿ
ಮನಸ್ಸಿನ ಭಿನ್ನತೆ
ತೆಗೆದು ಹೊಲಿದುಬಿಡು….
ಹೆಚ್ಚಾದರೆ ಹಂಚಿಕೊಳ್ಳೋಣ
ಏನಾದರೂ ಇರಲಿ ನಮ್ಮಲ್ಲಿಯೇ
ಮುಚ್ಚಿಕೊಳ್ಳೋಣ
ನೀ ನನಗೆ, ನಾ ನಿನಗೆ
ಹಚ್ಚುವ ಭರದಲ್ಲಿ ಮಸಿ
ನಮ್ಮ ಕೈಗಳಿಗೂ ಮೆತ್ತಿಕೊಳ್ಳುತ್ತೆ
ಇದ್ದರೆ ನಮ್ಮಲ್ಲಿ
ಸ್ವಾರ್ಥ ತೆಗೆದು
ಸ್ವಚ್ಛಂದ ಭಾವ ಸೇರಿಸಿ
ಹೊಲೆದುಬಿಡು….
- ಮಹೆಬೂಬ ಮಕಾನದಾರ್ ಕೊಪ್ಪಳ
ನಿಮ್ಮ ಕವಿತೆಗಳನ್ನು ಕೂಡ ಕಳುಹಿಸಬಹುದು.
9513326661
ನೀವು ಕೂಡ ಬರೆಯಬಹುದು :
ಆತ್ಮೀಯರೇ ಕೆ.ಎನ್.ಪಿ.ಯಲ್ಲಿ ನೀವು ಕೂಡ ಬರೆಯಬಹುದಾಗಿದೆ. ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆಯಿರಿ, ಕೆ.ಎನ್.ಪಿ.ಗೆ ಕಳುಹಿಸಿರಿ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.
- ಕೆ.ಎನ್.ಪಿ.ಫೇಸ್ಬುಕ್ ಅಕೌಂಟ್ ಗಾಗಿ ಈ ಗುಂಡಿ ಒತ್ತಿರಿ
- ಕೆ.ಎನ್.ಪಿ.ಯುಟ್ಯೂಬ್ ಚಾನಲ್ ಗಾಗಿ ಈ ಗುಂಡಿ ಒತ್ತಿರಿ
- ಕೆ.ಎನ್.ಪಿ.ಆ್ಯಪ್ ಗಾಗಿ ಈ ಗುಂಡಿ ಒತ್ತಿರಿ
ಮೆಹಬೂಬ್ ಅವರ ಇತರೆ ಕವಿತೆಗಳನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ.