ಕೆ.ಎನ್.ಪಿ.ವಾರ್ತೆ, ಗ್ಯಾಡ್ಜ್ ಟ್ಸ್;
ಈ ತಿಂಗಳ ಕೊನೆಯಲ್ಲಿ ‘ಡಿಜಿಟಲ್ ಐಡಿಯಾ’ ಆ್ಯಪ್ ಬಿಡುಗಡೆ ಸಾಧ್ಯತೆಯಿದೆ.
ಟೆಲಿಕಾಂ ವಲಯದಲ್ಲಿ ಹೊಸದೊಂದು ಅಲೆಯನ್ನು ಸೃಷ್ಟಿಸಿರುವ ಜಿಯೋ, ಕೇವಲ ಕರೆ ಮತ್ತು ಡೇಟಾ ಮಾತ್ರವಲ್ಲದೇ ಆಪ್ ವಿಚಾರದಲ್ಲಿಯೂ ಇತರೆ ಟೆಲಿಕಾಂ ಕಂಪನಿಗಳಿಗೂ ಮಾದರಿಯಾಗಿದ್ದು, ಜಿಯೋ ಹಾದಿಯನ್ನು ಅನುಸರಿಸಲು ಮುಂದಾಗಿರುವ ಐಡಿಯಾ ಸಹ ಜನವರಿ ತಿಂಗಳ ಕೊನೆಯಲ್ಲಿ ‘ಡಿಜಿಟಲ್ ಐಡಿಯಾ’ ಆ್ಯಪ್ ಬಿಡುಗಡೆ ಮಾಡಲು ಮುಂದಾಗಿದೆ.
ಜಿಯೋ ಮಾದರಿಯಲ್ಲಿ ಡಿಜಿಟಲ್ ಐಡಿಯಾ ಆಪ್ ಮೂಲಕ ಐಡಿಯಾ ಸಹ ಮೂವಿಸ್, ಟಿವಿ, ಮೂಸ್ಸಿಕ್ ಮತ್ತು ಗೇಮಿಂಗ್ ಆಪ್ ಗಳು ಸೇರಿದಂತೆ ಹಲವು ಆಪ್ ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ರಿಲಯನ್ಸ್ ಜಿಯೋ ಈಗಾಗಲೇ ಈ ಹಾದಿಯಲ್ಲಿ ಯಶಸ್ಸು ಕಂಡಿದ್ದು, ಆದೆ ಮಾನದಂಡದ ಮೇಲೆ ಐಡಿಯಾ ಸಹ ಕಾರ್ಯ ನಿರ್ವಹಿಸಲಿದೆ.
ಈಗಾಗಲೇ ಜಿಯೋ ಜೊತೆಯಲ್ಲಿ ದರ ಸಮರಕ್ಕೆ ಇಳಿದಿರುವ ಐಡಿಯಾ, ತನ್ನ ಬಳಕೆದಾರರಿಗೆ ವಿವಿಧ ಡೇಟಾ ಆಫರ್‌ಗಳು ಮತ್ತು ಅನ್‌ಲಿಮಿಟೆಡ್ ಕಾಲಿಂಗ್ ಆಫರ್ ನೀಡುತ್ತಿದೆ, ಈಗ ಮತ್ತೊಂದು ಸುತ್ತಿನಲ್ಲಿ ಜಿಯೋ ವಿರುದ್ಧ ಸ್ಪರ್ಧೆಗೆ ನಿಂತಿರುವ ಐಡಿಯಾ ಆ್ಯಪ್‌ಗಳನ್ನು ಬಿಡುಗಡೆ ಮಾಡಿ ಆ ಮೂಲಕ ಗ್ರಾಹಕರನ್ನು ಸೆಳೆಯುವ ಮನಸ್ಸು ಮಾಡುತ್ತಿದೆ.