ಕೆ.ಎನ್.ಪಿ.ವಾರ್ತೆ,ಬಾಗಲಕೋಟೆ,ಮಾ.07;

ಅಭಿನಂದನಾ ಕಾರ್ಯಕ್ರಮ ಹಾಗೂ ರಾಜ್ಯಮಟ್ಟದ ವೃತ್ತಿ ಪರ ನೇಕಾರರ ಸಮಾವೇಶದ ಪೂರ್ವಭಾವಿ ಸಭೆ ನಡೆಯಿತು.

ಬಾಗಲಕೋಟೆಯಲ್ಲಿ ಮಾ.12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ರಾಜ್ಯಮಟ್ಟದ ವೃತ್ತಿ ಪರ ನೇಕಾರರ ಸಮಾವೇಶ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ ನಿನ್ನೆ ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆ ನಡೆಯಿತು.

ಈ ವೇಳೆ ಕರ್ನಾಟಕ ನೇಕಾರರ ಒಕ್ಕೂಟದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನೇಕಾರರ ಸಮಸ್ಯೆಗಳನ್ನು ಮನಗಂಡು, ನೇಕಾರರ ಸಾಲ ಮನ್ನಾ, ಗೃಹ ಸಾಲ ಮನ್ನಾ ಮಾಡಿದರು. ಸಬ್ಸಿಡಿ ನೀಡಲು ಒಪ್ಪಿದರು. ಹೀಗಾಗಿ ರಾಜ್ಯದ ನೇಕಾರರ ಒಕ್ಕೂಟದಿಂದ ವೃತ್ತಿಪರ ನೇಕಾರರ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಅಂದು ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನೇಕಾರರು ಇದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರು ಇದ್ದಾರೆ. ನೇಕಾರರ ಒಕ್ಕೂಟದ ಅಡಿಯಲ್ಲಿ 1465 ಸಮುದಾಯಗಳಿವೆ. ಇವರಲ್ಲಿ ಅನೇಕರು ನೇಕಾರಿಕೆ ವೃತ್ತಿಯಲ್ಲಿ ಇಲ್ಲ. ಸರ್ಕಾರದ ಸೌಕರ್ಯ ಪಡೆದುಕೊಂಡ ವೃತ್ತಿಪರ ನೇಕಾರರ ಆಶಯದ ಹಿನ್ನೆಲೆ ಸಮಾವೇಶ ಮತ್ತು ಅಭಿನಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ ಎಂದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀಮತಿ ಉಮಾಶ್ರೀ, ಕೆಸಿ ಕೊಂಡಯ್ಯ,  ಎಂ.ಡಿ.ಲಕ್ಷ್ಮಿನಾರಾಯಣ, ಪಿ.ಎಚ್ ಪೂಜಾರಿ, ಮಲ್ಲಿಕಾರ್ಜುನ, ಶ್ರೀನಿವಾಸ ಬಳ್ಳಾರಿ, ನಜೀರ ಕಂಗನೋಳಿ, ಶ್ರೀಮತಿ ಸುಜಾತಾ ತಂತ್ರಾನಿ, ಸೇರಿದಂತೆ ನೇಕಾರ ಒಕ್ಕೂಟದ ಮುಖಂಡರು ಭಾಗವಹಿಸಿದ್ದರು.

ವರದಿ : ವಿವೇಕಾನಂದ, ವಿಜಯಪುರ