ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜು.10;

ರಾಜ್ಯ ರಾಜಕೀಯ ಹೈ ಡ್ರಾಮಾ ಮುಂದುವರಿದಿದ್ದು, ರಾಜೀನಾಮೆಗಳ ಪರಿಶೀಲನೆ, ಸ್ಪೀಕರ್‌ ನಿರ್ಧಾರ ಹಾಗೂ ಶಾಸಕಾಂಗ ಪಕ್ಷದ ಸಭೆ, ಸುದೀರ್ಘ ಸಭೆಗಳಿಗೆ ಮಂಗಳವಾರದ ರಾಜಕೀಯ ಬೆಳವಣಿಗೆ ಸಾಕ್ಷಿಯಾಯಿತು. ಬುಧವಾರ ಅತೃಪ್ತರ ಮನವೊಲಿಕೆ ಪ್ರಹಸನ ಆರಂಭವಾಗಿದ್ದು, ಯಾವುದೇ ಕಾರಣಕ್ಕೂ ಡಿಕೆಶಿ ಭೇಟಿ ಮಾಡಲ್ಲ, ಇಂದು ಮತ್ತಷ್ಟು ಅತೃಪ್ತರು ಮುಂಬಯಿಗೆ ಬರಲಿದ್ದಾರೆ ಎನ್ನುವ ಮೂಲಕ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. 

ಮುಂಬಯಿಯ ರಿನೈಸೆನ್ಸ್ ಹೋಟೆಲ್ ಮುಂದೆ ಹೈ ಡ್ರಾಮಾ ನಡೆಯುತ್ತಿದ್ದು, ಇತ್ತ ಅತೃಪ್ತರ ಭೇಟಿಗೆ ಡಿಕೆಶಿ ಕಸರತ್ತು ನಡೆಸಿದ್ದರೆ, ನಾವು ಯಾವುದೇ ಕಾರಣಕ್ಕೂ ಡಿ ಕೆ ಶಿವಕುಮಾರ್ ರನ್ನು ಭೇಟಿಯಾಗಲ್ಲ ಎಂದು ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಇವತ್ತು ಮತ್ತಷ್ಟು ಅತೃಪ್ತ ಶಾಸಕರು ನಮ್ಮನ್ನು ಸೇರಿಕೊಳ್ಳುತ್ತಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. 

ಡಿಕೆಶಿ ಅವರ ಜತೆ ನಿರಂತರ ಸಂಪರ್ಕದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂಬಯಿಯ ಪ್ರತಿಯೊಂದು ಬೆಳವಣಿಗೆಯ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. 

ಪೊಲೀಸರಿಂದ ತಡೆ

ಶಿವಕುಮಾರ್ ಜತೆಗೆ ಜೆಡಿಎಸ್ ನಾಯಕರಾದ ಜಿ ಟಿ ದೇವೇಗೌಡ ಮತ್ತು ಶಿವಲಿಂಗೇಗೌಡ ಕೂಡ ಇದ್ದು, ಮೂವರು ರಿನೈಸೆನ್ಸ್ ಹೋಟೆಲ್‌ನಲ್ಲಿದ್ದಾರೆ. ನಮಗೆ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಒತ್ತಡವಿದೆ, ಭದ್ರತೆ ಒದಗಿಸಿ ಎಂದು ಅತೃಪ್ತರು ಮುಂಬಯಿ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಹೊಟೇಲ್‌ಗೆ ಭಾರಿ ಭದ್ರತೆ ಒದಗಿಸಲಾಗಿದೆ.

ಡಿ.ಕೆ.ಶಿವಕುಮಾರ್ ನಿಯೋಗವನ್ನು ಹೋಟೆಲ್ ಒಳಗೆ ಪ್ರವೇಶಿಸಲು ಮುಂಬಯಿ ಪೊಲೀಸರು ಬಿಡುತ್ತಿಲ್ಲ. ಪೊಲೀಸರ ಜತೆ ಡಿಕೆಶಿ ಚರ್ಚೆ ನಡೆಸಿದ್ದು ನಾನು ಹೋಟೆಲ್ ನಲ್ಲಿ ರೂಂ ಬುಕ್ ಮಾಡಿದ್ದರೂ ನನಗೆ ಪ್ರವೇಶ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಗೋ ಬ್ಯಾಕ್, ಗೋ ಬ್ಯಾಕ್ ಕುಮಾರಸ್ವಾಮಿ, ಡಿಕೆಶಿ

ಡಿಕೆಶಿ ಹೊಟೇಲ್ ಮುಂಭಾಗಕ್ಕೆ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅಲ್ಲಿ ನೆರೆದಿದ್ದು ಗೋ ಬ್ಯಾಕ್ ಗೋ ಬ್ಯಾಕ್ ಘೋಷಣೆ ಕೂಗುತ್ತಿದ್ದಾರೆ. ಎದುರಾಗುವ ಎಲ್ಲ ಸಮಸ್ಯೆಗಳನ್ನು ದಾಟಿ ಟ್ರಬಲ್ ಶೂಟರ್ ಡಿಕೆಶಿ ಮತ್ತವರ ತಂಡ ಅತೃಪ್ತರ ಮನವೊಲಿಸಲು ಸಫಲರಾಗುತ್ತಾರಾ ಎಂದು ಕಾದು ನೋಡಬೇಕಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.