ಕೆ.ಎನ್.ಪಿ.ವಾರ್ತೆ,ಜಗಳೂರು,ಡಿ.09;

ಕರ್ನಾಟಕದ ರಾಜಕೀಯದಲ್ಲಿ ಪಕ್ಷಾಂತರ ಹೊಸದೇನಲ್ಲ ಹಾಗೂ ಮುಖ್ಯಮಂತ್ರಿಯ ಸ್ಥಾನಕ್ಕಾಗಿ ಕುದುರೆ ವ್ಯಾಪಾರ ದಂತಹ ಪ್ರಸಂಗಗಳು ಹೊಸದೇನಲ್ಲ, ರಾಜಕೀಯ ಇತಿಹಾಸವನ್ನು ತಿರುಗಿ ನೋಡಿದ್ದೇ ಆದರೆ, ಸ್ವ ಪಕ್ಷದಲ್ಲಿಯೇ ಮುಖ್ಯಮಂತ್ರಿಯ ಗಾದಿಗಾಗಿ ತಂತ್ರ-ಪ್ರತಿತಂತ್ರ ಗಳನ್ನು ಮಾಡಿರುವುದನ್ನು ನಾವು ನೋಡಿದ್ದೇವೆ.

ಕರ್ನಾಟಕದ ಈಗಿನ ಪರಿಸ್ಥಿತಿಗೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡದ ಮತದಾರ ನೇರ ಹೊಣೆಯಾಗುತ್ತಾನೆ.

ಇನ್ನೂ ಸೋಮವಾರದ ಫಲಿತಾಂಶ, ಕರ್ನಾಟಕದ ರಾಜಕೀಯದಲ್ಲಿ ಬಿರುಗಾಳಿಯನ್ನು ಎಬ್ಬಿಸುವಂತಹ ಸೂಚನೆಗಳು ಅಥವಾ ತಂಗಾಳಿಯಾಗಿ ಬೀಸುವಂತಹ ನಿರೀಕ್ಷೆಗಳು ಕಾಣುತ್ತವೆ.

ಇಂದು 15 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಯಡಿಯೂರಪ್ಪನವರ ಸರ್ಕಾರದ ಅಳಿವು-ಉಳಿವಿನ ಅಂತಿಮ ತೀರ್ಮಾನವಾಗಿದೆ.
ಆದರೆ ಜಗಳೂರು ತಾಲೂಕು ಗಡಿಮಾಕುಂಟೆ ಗ್ರಾಮದ ಶ್ರೀ ಭುಜಂಗ ಮಠದ ಶಿವಮೂರ್ತಿ ಶಾಸ್ತ್ರಿಗಳು ಯಡಿಯೂರಪ್ಪನವರ ಕುರ್ಚಿ ಭದ್ರಾ ಎಂದು ಭವಿಷ್ಯ ನುಡಿದ್ದಾರೆ.

ಇವರ ಪ್ರಕಾರ ಇಂದು ಹೊರಬೀಳಲಿರುವ ಫಲಿತಾಂಶದಲ್ಲಿ 6 ರಿಂದ 8 ಸೀಟು ಬಿಜೆಪಿಗೆ, 4ರಿಂದ 6 ಸೀಟು ಕಾಂಗ್ರೆಸ್ಸಿಗೆ ಮತ್ತು ಒಂದು ಸೀಟು ಜೆಡಿಎಸ್ ಅಥವಾ ಪಕ್ಷೇತರ ಅಭ್ಯರ್ಥಿ ಪಾಲಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಶ್ರೀಗಳ ಭವಿಷ್ಯದಂತೆ 6 ರಿಂದ 8 ಸೀಟು ಬಿಜೆಪಿ ಪಕ್ಷ ಗಳಿಸಿದ್ದೇ ಆದರೆ ಅವರು ಹೇಳಿದಂತೆ ಯಡಿಯೂರಪ್ಪನವರ ಮುಖ್ಯಮಂತ್ರಿಯ ಪಟ್ಟ ಗಟ್ಟಿಯಾಗಿರುತ್ತದೆ ಎನ್ನುವ ಮಾತು ಅಕ್ಷರಸಹ ಸತ್ಯ ವಾಗಲಿದೆ. ಶ್ರೀಗಳು ಈ ಹಿಂದೆ ಹೇಳಿದಂತೆ ಭವಿಷ್ಯಗಳು ರಾಜಕೀಯವಲಯದಲ್ಲಿ ಅಕ್ಷರಸಹ ಸತ್ಯವಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ವರದಿ : ವೇದಮೂರ್ತಿ ಗುತ್ತಿದುರ್ಗ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.