ಕೆ.ಎನ್.ಪಿ.ವಾರ್ತೆ,ಚಾಮರಾಜನಗರ,ಅ.28;

ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಮಹಿಳೆಯೊಬ್ಬರು ಬಹಿರ್ದೆಸೆಗೆಂದು ತೆರಳಿದ್ದ ವೇಳೆ ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾದ ಘಟನೆ ನಡೆದಿದೆ.

ಸಣ್ಣಮ್ಮ ಮೃತ ದುರ್ದೈವಿ, ಇವರು ಗ್ರಾಮದ ಶಿವಶಂಕರ್ ಎಂಬುವರ ಜಮೀನಿನಲ್ಲಿ ಕೂಲಿ ಕೆಲಸಕ್ಕೆಂದು ಹೋಗಿದ್ದರು. ಜಮೀನಿನ ಸುತ್ತಲೂ ವಿದ್ಯುತ್ ಸೋಲಾರ್ ಬಿಡಲಾಗಿತ್ತು. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಧ್ಯೆ ಮಹಿಳೆ ಬಹಿರ್ದೆಸೆಗೆ ತೆರಳಿದ್ದಾರೆ.

ಬಹಿರ್ದೆಸೆ ಮುಗಿಸಿ ಮತ್ತೆ ಹಿಂದಿರುಗುವ ವೇಳೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಅಸ್ವಸ್ಥಗೊಂಡರು ಎಂದು ತಿಳಿದುಬಂದಿದೆ. ಈ ವೇಳೆ ಅಸ್ವಸ್ಥ ಮಹಿಳೆ ಸಣ್ಣಮ್ಮ ಅವರನ್ನು ಸಂತೇಮರಹಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರ ಸಂಬಂಧಿಕರಾದ ತಾಯಮ್ಮ ಕುದೇರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆ.ಎನ್.ಪಿ.ಯ ಸಮಸ್ತ ಓದುಗ ಬಳಗಕ್ಕೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು…

ಬೆಳಕಿನ ಹಬ್ಬ ನಿಮಗೆ ಸುಖ, ಸಂಪತ್ತು, ನೆಮ್ಮದಿ ಕರುಣಿಸಲಿ. ನಿಮ್ಮ ಜೀವನ ಸಮೃದ್ಧಿಯ ಹಾದಿಯಲ್ಲಿ ಸಾಗಲಿ….. ದೀಪದಂತೆ ನಿಮ್ಮ ಬದುಕೂ ಪ್ರಕಾಶಮಾನವಾಗಿರಲಿ. ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಜೀವನ ಉಜ್ವಲವಾಗಲಿ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.