ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.22;

ಡಿಸೆಂಬರ್ 01ರಿಂದ ದೇಶದಲ್ಲಿ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಲಿಸುವ ವಾಹನಗಳು ಟೋಲ್ ಸಂಗ್ರಹ ಕೇಂದ್ರ ದಾಟಬೇಕಾದರೆ FASTag ಹೊಂದುವುದು ಕಡ್ಡಾಯವಾಗಲಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಇದನ್ನು ನಿರ್ವಹಿಸುತ್ತಿದೆ. ಫಾಸ್‌ಟ್ಯಾಗ್ ಒಂದು ರೀತಿ ವಾಹನಗಳ ‘ಆಧಾರ್ ಕಾರ್ಡ್‌’ನಂತೆ ಕಾರ್ಯ ನಿರ್ವಹಿಸುತ್ತದೆ.

FASTag ಅಂದ್ರೇನು?

“FASTag ” ಅಂದ್ರೆ ಎಲ್ಲಾ ವಾಹನಕ್ಕೂ ಆಧಾರ್ ಕಾರ್ಡ್ ಇದ್ದ ಹಾಗೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈಗಾಗಲೇ ಹೇಳಿದ್ದಾರೆ.

ನ್ಯಾಶ್ನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ(NPCI) ಆರಂಭಿಸಿದ ಹೆದ್ದಾರಿಯ ಟೋಲ್ ಗಳ ವಿದ್ಯುನ್ಮಾನ ಸುಂಕ ಸಂಗ್ರಹ (electronic toll collection system) ಪದ್ಧತಿಯೇ “FASTag ” ಎಲ್ಲಾ ವಾಹನಗಳಿಗೂ ಇದನ್ನು ಕಡ್ಡಾಯಗೊಳಿಸಲಾಗಿದ್ದು, ವಾಹನಕ್ಕೆ ಅಂಟಿಸಲಾದ ಫಾಸ್ ಟ್ಯಾಗ್ ಅನ್ನು ಗ್ರಹಿಸಿ ತನ್ನಿಂತಾನೇ ಟೋಲ್ ಓಪನ್ ಆಗುತ್ತದೆ. ಫಾಸ್ ಟ್ಯಾಗ್ ಅನ್ನು ವಾಹನದ ಮಾಲೀಕರು ಮೊದಲೇ ರೀಚಾರ್ಜ್ ಮಾಡಿಕೊಂಡಿರಬೇಕಾಗುತ್ತದೆ.

ಕಡ್ಡಾಯವೇಕೆ?

ಎಲ್ಲ ಹೊಸ ವಾಹನಗಳ ವಿಂಡ್ ಸ್ಕ್ರೀನ್ ಮೇಲೆ ಫಾಸ್‌ಟ್ಯಾಗ್ ಅಂಟಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಡಿಜಿಟಲ್ ವ್ಯವಹಾರಗಳಿಗೆ ಉತ್ತೇಜನ ನೀಡುವ ಮತ್ತು ನಗದು ಹಣದ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಫಾಸ್ ಟ್ಯಾಗ್ ಅನ್ನು ಕಡ್ಡಾಯಗೊಳಿಸಿದೆ.

ಟೋಲ್ ಗಳಲ್ಲಿ ಹಣ ಕಟ್ಟುವುದಕ್ಕಾಗಿಯೇ ಸಾಲುಗಟ್ಟಿ ನಿಲ್ಲುವ ವಾಹನಗಳಿಂದಾಗಿ ಸಮಯ ವ್ಯರ್ಥವಾಗುವುದನ್ನು ಮತ್ತು ಇಂಧನ ವ್ಯಯವಾಗುವುದನ್ನು ತಪ್ಪಿಸುವ ಸಲುವಾಗಿಯೂ ಈ ಪದ್ಧತಿ ಜಾರಿಗೆ ತಂದಿರುವುದಾಗಿ ಸರ್ಕಾರ ಹೇಳಿದೆ.

ವಾಹನ ಗುರುತಿಸುವುದೂ ಸುಲಭ ಫಾಸ್ ಟ್ಯಾಗ್ ನೀಡುವ ಸಂದರ್ಭದಲ್ಲಿ ವಾಹನ ಮಾಲೀಕರಿಗೆ ನೀಡಲಾಗುವ ಸಾರ್ವತ್ರಿಕ ಗುರುತಿನ ಸಂಖ್ಯೆಯಿಂದಾಗಿ ಎಲ್ಲಾ ವಾಹನಗಳನ್ನೂ ಸುಲಭವಾಗಿ ಗುರುತಿಸಬಹುದು.

ಈ ಎಲ್ಲಾ ಕಾರಣಗಳಿಂದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಡಿಸೆಂಬರ್ 1 ರಿಂದ ಫಾಸ್ ಟ್ಯಾಗ್ ಅನ್ನು ಕಡ್ಡಾಯಗೊಳಿಸಲಾಗಿದೆ.

ಇವೆಲ್ಲದರೊಟ್ಟಿಗೆ ಟೋಲ್ ನಲ್ಲಿ ಗಂಟೆಗಟ್ಟಲೆ ವಾಹನದ ಎಂಜಿನ್ ಆಫ್ ಮಾಡದೆ ನಿಲ್ಲಿಸ್ಕೊಂಡಿರುವುದರಿಂದ ಉಂಟಾಗುವ ವಾಯುಮಾಲಿನ್ಯವನ್ನೂ ತಡೆಯುವ ಉದ್ದೇಶವಿದೆ ಎಂದು ಸರ್ಕಾರ ಹೇಳಿದೆ. ಈಗಾಗಲೇ ವಾಹನಗಳ ದಟ್ಟಣೆಯಿಂದಲೇ ಹಲವು ರಾಜ್ಯಗಳು ವಾಯುಮಾಲಿನ್ಯದ ಸಮಸ್ಯೆ ಎದುರಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.