ಕೆ.ಎನ್.ಪಿ.ವಾರ್ತೆ,ಚಿಟಗುಪ್ಪಾ,ಆ.30;

12ನೇ ಶತಮಾನದ ಬಸವಾದಿ ಶಿವಶರಣರ ಅನುಭವ ಮಂಟಪದಲ್ಲಿ ಅನುಭಾವದ ಮೂಲಕ ವಚನಗಳನ್ನು ರಚಿಸಿದ ಶ್ರೇಯಸ್ಸು ಮತ್ತು ಕೀರ್ತಿ ಶರಣರಿಗೆ ಸಲ್ಲಬೇಕು ಹಾಗೂ ವಿಶ್ವದಲ್ಲೇ ಇಂತಹ ಅಮೂಲ್ಯ ಸಾಹಿತ್ಯ ಎಲ್ಲೂ ಸಿಗುವುದಿಲ್ಲ ಹಾಗಾಗಿ ವಚನ ಸಾಹಿತ್ಯ ವಿಶ್ವ ಮಟ್ಟದ ಶ್ರೇಷ್ಠ ಸಾಹಿತ್ಯ ವೆಂದು ಪ.ಗು.ಹಳಕಟ್ಟಿ ಕುರಿತು ವಿಶೇಷ ಉಪನ್ಯಾಸದಲ್ಲಿ ಶರಣ ಸಾಹಿತ್ಯ ಚಿಂತಕರು ಮತ್ತು ಶಿಕ್ಷಕರಾದ ಶರಣ ಶಿವಸ್ವಾಮಿ ಚೀನಕೇರಾ ರವರು ಅಭಿಪ್ರಾಯಪಟ್ಟರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಚಿಟಗುಪ್ಪಾ ತಾಲೂಕು ಹಾಗೂ ಜ್ಞಾನ ಜ್ಯೋತಿ ಪ್ರೌಢಶಾಲೆ ಚಿಟಗುಪ್ಪಾ ರವರ ಸಹಯೋಗದಲ್ಲಿ ಜ್ಞಾನ ಜ್ಯೋತಿ ಪ್ರೌಢಶಾಲೆ ಆವರಣದಲ್ಲಿ ನಿನ್ನೆ ಅದ್ದೂರಿಯಾಗಿ ನಡೆದ “ವಚನ ದಿನ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ” ದಲ್ಲಿ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಅನಿಲಕುಮಾರ ಸೀರಮುಂಡೆ ಶಿಕ್ಷಕರು ಹಳಕಟ್ಟಿಯವರು ವಚನ ಸಾಹಿತ್ಯ ಉಳಿಸಿ, ಬೆಳೆಸಿದ 
ಕುರಿತು ಮಾತನಾಡಿದರು, ನಂತರ ರಮೇಶ್ ಸಲಗರ್ ಶಿಕ್ಷಕರು ಮಕ್ಕಳು ವಚನ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಳ್ಳಲು ಮತ್ತು ಶರಣರ ಜೀವನದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನ ಮಾಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶರಣ ಸಾಹಿತ್ಯ ಚಿಂತಕರಾದ ಚಂದ್ರಶೇಖರ್ ತಂಗಾ ಅವರು ಶರಣರು ಚಳುವಳಿಯ ಮೂಲಕ ಸತ್ಯವನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಮಾಡಿದ್ದಾರೆ ಹಾಗಾಗಿ ತಾವೆಲ್ಲರೂ ಆ ದಿಸೆಯಲ್ಲಿ ಮುನ್ನುಗ್ಗಿ ಹೋಗಬೇಕೆಂದು ಕರೆ ನೀಡಿದರು.

ಜ್ಞಾನ ಜ್ಯೋತಿ ಪ್ರೌಢಶಾಲೆ ಕಾರ್ಯದರ್ಶಿಗಳಾದ ಅರವಿಂದ್ ಗಾದಾ ರವರು ಬಸವಣ್ಣನವರ ವಿಚಾರಧಾರೆಗಳನ್ನು ಎಲ್ಲಾ ಜನಾಂಗದವರು ಒಪ್ಪಿಕೊಂಡು ಆದರ್ಶ ಸಮಾಜ ನಿರ್ಮಾಣ ಮಾಡಲು ಕರೆ ನೀಡಿದರು.

ವಚನ ಸಾಹಿತ್ಯ ಮತ್ತು ಜೀವನ ಮೌಲ್ಯಗಳ ಕುರಿತು ಶರಣ ತತ್ವ ಚಿಂತಕಿ ಶರಣೆ ಇಂದುಮತಿ ಉಡಬಾಳ ರವರು ಮಾತನಾಡುತ್ತಾ, ಮಕ್ಕಳು ದೇವರ ಸಮಾನರು. ಹೀಗಾಗಿ ಸುಳ್ಳು ಹೇಳುವ ಕೆಲಸ ಮಾಡಬೇಡಿ ಮತ್ತು ಇಂದಿನ ತಂತ್ರಜ್ಞಾನ ಯುಗದ ಮೊಬೈಲ್, ಇಂಟರ್ನೆಟ್ ಗಳನ್ನು ಅತಿಯಾಗಿ ಬಳಸಬೇಡಿ ಎನ್ನುತ್ತಾ ವಚನ ಸಾಹಿತ್ಯದಲ್ಲಿ ನಮ್ಮ ಜೀವನದ ಉದ್ದಾರ ಇದೆ. ಪ್ರತಿದಿನವೂ ಒಂದು ವಚನ ಓದುವ ಮೂಲಕ ಶರಣರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಜೀವನವನ್ನು ನಡೆಸೋಣ ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.

ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ್ದ ಮತ್ತು ಜ್ಞಾನ ಜ್ಯೋತಿ ಸಂಸ್ಥೆಯ ಮುಖ್ಯಸ್ಥರಾದ ಸೂರ್ಯಕಾಂತ ಮಠಪತಿಯವರು ಮಾತನಾಡಿ, ಶರಣ ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಹಾಗೂ ಪರಿಷತ್ತು ಮಾಡುವ ಸಮಾಜಮುಖಿ ಸೇವೆಯಲ್ಲಿ ನಾವು ಸಹ ಪಾಲ್ಗೊಂಡು ಶರಣರ ಸೇವೆಯನ್ನು ಮಾಡುತ್ತೆವೆಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಂಗಮೇಶ ಎನ್ ಜವಾದಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶರಣ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಎನ್. ಎಸ್. ಮಲಶೆಟ್ಟಿ ಸ್ವಾಗತ ಕೋರಿದರು. ಶಿಕ್ಷಕಿ ಶ್ರೀಮತಿ ಸವಿತಾ ಸಿ ಪಾಟೀಲ್ ಸಂಚಾಲನೆ ನೀಡಿದರು.

ಶ್ರೀನಿವಾಸ ಕುಲಕರ್ಣಿ ಶರಣು ಸಮರ್ಪಣೆಯನ್ನು ನೆರವೇರಿಸಿದರು ಮತ್ತು ಶ್ರೀಮತಿ ಸಾವಿತ್ರಿ ಮೂತ್ತಲಗೇರಿಯವರು ವಚನ ಗಾಯನವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೊಪಾಧ್ಯಾಯಕಿ ಶ್ರೀಮತಿ ವಿಮಲಾಬಾಯಿ ದುದಗುಂಡಿ, ಶಿಕ್ಷಕರು, ಗಣ್ಯ ನಾಗರಿಕ ಬಂಧುಗಳು, ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ : ಸಂಗಮೇಶ ಎನ್ ಜವಾದಿ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಚಿಟಗುಪ್ಪಾ ತಾಲೂಕು ಅಧ್ಯಕ್ಷರು
9663809340

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.