ಕೆ.ಎನ್.ಪಿ.ವಾರ್ತೆ,ಹೈದರಾಬಾದ್,ನ.04;

ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಅಪರಿಚಿತ ವ್ಯಕ್ತಿಯೊಬ್ಬ ಮಹಿಳಾ ತಹಶೀಲ್ದಾರ್‌ಗೆ ಅವರ ಕಚೇರಿಯಲ್ಲಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರಮೆಟ್ ಎಂಬಲ್ಲಿ ಈ ಕೃತ್ಯ ನಡೆದಿದ್ದು ಸೋಮವಾರ ಮಧ್ಯಾಹ್ನ ೧.೩೦ ರ ಸುಮಾರಿಗೆ ಮಾತನಾಡುವ ನೆಪದಲ್ಲಿ ತಹಶೀಲ್ದಾರ್‌ ಕೋಣೆ ಪ್ರವೇಶಿಸಿದ ವ್ಯಕ್ತಿ ತಹಶೀಲ್ದಾರ್‌ಗೆ ಬೆಂಕಿ ಹಚ್ಚಿ ಜೀವಂತ ಸುಟ್ಟುಹಾಕಿದ್ದಾನೆ. 

ತಹಶೀಲ್ದಾರ್ ವಿಜಯಾ ರೆಡ್ಡಿ ತನ್ನ ಕಚೇರಿಯಲ್ಲಿದ್ದಾಗ ಅಪರಾಧಿ ಒಳಗೆ ಹೋಗಿ ಅವರೊಂದಿಗೆ ಸ್ವಲ್ಪ ಸಮಯ ಮಾತಾಡಿದ. ನಂತರ ಆತ ತನ್ನೊಂದಿಗೆ ತಂದಿದ್ದ ಬಾಟಲಿಯನ್ನು ಹೊರತೆಗೆದು ತಹಶೀಲ್ದಾರ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಕೃತ್ಯ ನಡೆದ ಕೆಲವೇ ಸೆಕೆಂಡ್ ಗಳಲ್ಲಿ ಮಹಿಳಾ ತಹಶೀಲ್ದಾರ್ ದೇಹಕ್ಕೆ ಬೆಂಕಿ ಆವರಿಸಿದೆ. ಆಕೆ ಕೊಠಡಿಯಿಂದ ಹೊರಗೋಡಲು ಪ್ರಯತ್ನಿಸಿದರೂ ಅರ್ಧದಲ್ಲೇ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕೃತ್ಯ ನಡೆದ ವೇಳೆ ಊಟದ ವಿರಾಮವಿದ್ದ ಕಾರಣ ಕಚೇರಿಯಲ್ಲಿ ಜನಸಂದಣಿ ಕಡಿಮೆ ಇತ್ತು ಎನ್ನಲಾಗಿದೆ.

ನಡೆದಿದ್ದೇನೂ?

ಕೊಲೆಗಾರ ಸುಮಾರು ೩೦ ನಿಮಿಷಗಳ ಕಾಲ ಮಹಿಳಾ ತಹಶೀಲ್ದಾರ್‌ ಜತೆ ಮಾತುಕತೆ ನಡೆಸಿದ್ದಾನೆ. ಜಮೀನಿನ ಭಾಗದ ವಿಚಾರದಲ್ಲಿ ಇಬ್ಬರೂ ವಾಗ್ವಾದ ನಡೆಸಿದರು ಎಂಬ ಮಾಹಿತಿ ಇದ್ದು ಬಳಿಕ ಅವರ ಮೇಲೆ ಪೆಟ್ರೋಲ್ ಸುರಿದಿದ್ದಾನೆ. ಆಗ ಸಹಾಯಕ್ಕಾಗಿ ಆಕೆ ಮೊರೆ ಇಟ್ಟಾಗ ಸಿಬ್ಬಂದಿಯೊಬ್ಬರು ರಕ್ಷಿಸಲು ಬಂದಿದ್ದರು. ಆದರೆ ಅದು ಬಹಳ ತಡವಾಗಿದ್ದು ಬೆಂಕಿಯ ಕಾರಣ ಅವರಿಗೆ ಸಹ ಸುಟ್ಟ ಗಾಯಗಳಾಗಿದೆ. ಸಧ್ಯ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.