ಕೆ.ಎನ್.ಪಿ.ವಾರ್ತೆ,ನವದೆಹಲಿ,ಜ.30;
ಉಕ್ಕಿನ ಉತ್ಪಾದನೆಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಭಾರತವು ಜಪಾನ್ ದೇಶವನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ವಿಶ್ವದ ಅತಿ ಹೆಚ್ಚು ಉಕ್ಕು ಉತ್ಪಾದನಾ ರಾಷ್ಟ್ರಗಳ ಪಟ್ಟಿಯನ್ನು ವಿಶ್ವ ಉಕ್ಕು ಅಸೋಸಿಯೇಷನ್ ಪ್ರಕಟಿಸಿದ್ದು, ಜಪಾನ್ ಹಿಂದಿಕ್ಕಿದ ಭಾರತ ಈಗ ಜಾಗತಿಕವಾಗಿ ನಂ.2 ಸ್ಥಾನಕ್ಕೇರಿದೆ. 2018ರಲ್ಲಿ ಜಾಗತಿಕವಾಗಿ ಉಕ್ಕು ಉತ್ಪಾದನೆ ಶೇ 4.6ರಷ್ಟು ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ಶೇ 51ರಷ್ಟು ಪಾಲು ಹೊಂದಿರುವ ಚೀನಾ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
ಚೀನಾದ ಉಕ್ಕಿನ ಉತ್ಪಾದನೆಯು 2018ರಲ್ಲಿ ಶೇ.6.6ರಷ್ಟು ಏರಿಕೆಯಾಗಿದ್ದು, 92.8 ಕೋಟಿ ಟನ್‌ಗಳಿಗೆ ಏರಿಕೆಯಾಗಿದೆ. ಭಾರತವು 2018ರಲ್ಲಿ 10.65 ಕೋಟಿ ಟನ್ ಹಾಗೂ 2017ರಲ್ಲಿ 10.15 ಕೋಟಿ ಟನ್ ಉತ್ಪಾದಿಸಿತ್ತು.
ಇದರೊಂದಿಗೆ ಶೇ.4.9ರಷ್ಟು ಏರಿಕೆ ದಾಖಲಿಸಿತ್ತು. ಜಪಾನ್ 2018ರಲ್ಲಿ 10.43 ಕೋಟಿ ಟನ್ ಉತ್ಪಾದಿಸಿದ್ದು, 2017ಕ್ಕೆ ಹೋಲಿಸಿದರೆ ಶೇ.0.3ರಷ್ಟು ಇಳಿಕೆಯಾಗಿದೆ.
2018ರಲ್ಲಿ ಜಾಗತಿಕ ಕಚ್ಚಾ ಉಕ್ಕು ಉತ್ಪಾದನೆ 180 ಕೋಟಿ ಟನ್ ಆಗಿತ್ತು. ಉಕ್ಕು ಉತ್ಪಾದನೆಯಲ್ಲಿ ಅಮೆರಿಕ 4ನೇ ಸ್ಥಾನದಲ್ಲಿದೆ. (8.6 ಕೋಟಿ ಟನ್) ದಕ್ಷಿಣ ಕೊರಿಯಾ, ರಷ್ಯಾ, ಜರ್ಮನಿ, ಟರ್ಕಿ, ಬ್ರೆಜಿಲ್, ಇರಾನ್ ನಂತರದ ಸ್ಥಾನದಲ್ಲಿವೆ.
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.