ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಏ.04;
ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.
ಜಗಳೂರು ಪಟ್ಟಣದಲ್ಲಿ ಪ್ರೇರಣ ಸಮಾಜ ಸೇವಾ ಸಂಸ್ಥೆ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ, ಹಿರಿಯ ನಾಗರಿಕರ ಸಂಘ, ಅಲ್ ಫಾತೀಮಾ ಸಂಸ್ಥೆ, ಧ್ಯಾನ ಜೋತಿ ಟ್ರಸ್ಟ್ ಮತ್ತು ಎಂ.ಆರ್.ಟಿ. ಗ್ರಾಮಾಂತರ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಜೆ.ಎಂ.ಎಫ್.ಸಿ ಮತ್ತು ಸಿವಿಲ್ ನ್ಯಾಯಾಧೀಶರಾದ ಎಂ.ಮಹೇಂದ್ರ, ಗಿಡಕ್ಕೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಮನುಷ್ಯನ ದೇಹದಲ್ಲಿ ಯಾವುದಾದರೂ ಅಂಗವಿಲ್ಲದೆ ಹೋದರು ಜೀವನ ನಡೆಸಬಹುದು. ಆದರೆ ಕಣ್ಣುಗಳು ಇಲ್ಲದೆ ಹೋದರೆ ಜೀವನ ನಡೆಸುವುದು ಕಷ್ಟ.
ಹಿಂದಿನ ಕಾಲದಲ್ಲಿ ಹಿರಿಯರಿಗೆ ಎಷ್ಟು ವಯಸ್ಸಾದರೂ ಕಣ್ಣುಗಳು ಚೆನ್ನಾಗಿ ಕಾಣುತ್ತಿದ್ದವು. ಆದರೆ ಈಗಿನ ದಿನಮಾನಗಳಲ್ಲಿ ಇಂದಿನ ಆಹಾರ ಪದ್ದತಿಗಳು ಸರಿಯಿಲ್ಲದ ಕಾರಣ ಸಣ್ಣ ವಯಸ್ಸಿನಲ್ಲಿ ಕಣ್ಣಿನ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಶಿಬಿರಗಳನ್ನು ಮಾಡುವುದರ ಮೂಲಕ ಬಡವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಈ ವೇಳೆ ತಾಲೂಕು ವೈದ್ಯಾಧಿಕಾರಿ ಡಾ.ನಾಗರಾಜ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರಾದ ಡಾ. ಪಿ.ಎಸ್. ಅರವಿಂದ್, ಪ್ರೇರಣ ಸಮಾಜ ಸೇವ ಚರ್ಚ್ ಫಾದರ್ ವಿಲಿಯಮ್ ಮೀರಾಂದ, ಡಾ. ನಾಗರಾಜ್, ವಕೀಲರ ಸಂಘದ ಅಧ್ಯಕ್ಷ ಬಸವರಾಜ್, ಹಿರಿಯ ವಕೀಲರಾದ ಪರಮೇಶ್ವರಪ್ಪ, ವಕೀಲರಾದ ತಿಪ್ಪೇಸ್ವಾಮಿ, ಹಿರಿಯ ನಾಗರಿಕ ಸಂಘದ ಅಧ್ಯಕ್ಷ ವಿಠ್ಠಲ ಶ್ರೇಷ್ಠಿ, ಅಲ್ ಫಾತೀಮ ಸಂಸ್ಥೆ ಕಾರ್ಯದರ್ಶಿ ಶಾಹಿನಾ ಬೇಗಂ ಸೇರಿದಂತೆ ಇತರ ವಕೀಲರು ಮತ್ತು ಸಾರ್ವಜನಿಕರು ಹಾಜರಿದ್ದರು.
ವರದಿ : ಮಹಮ್ಮದ್ ಅಬ್ದುಲ್ ರಖೀಬ್