ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಆ.11;

ತುಂಗಭದ್ರಾ ಜಲಾಶಯದಿಂದ ನದಿಗೆ 1.30 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ನವವೃಂದಾವನ ಗಡ್ಡೆಯಲ್ಲಿ ಇಬ್ಬರು ಕಾವಲುಗಾರರು ಸಿಲುಕಿ ಹಾಕಿಕೊಂಡಿದ್ದಾರೆ. ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಬಳಿಯ ನವವೃಂದಾವನದಲ್ಲಿ ಕಾವಲುಗಾರರಾದ ಉಡಚಪ್ಪ ಹಾಗೂ ರಾಘವೇಂದ್ರ ಸಿಲುಕಿ ಹಾಕಿಕೊಂಡಿದ್ದಾರೆ.

ಇತ್ತೀಚೆಗೆ ವ್ಯಾಸರಾಜ ವೃಂದಾವನ ಧ್ವಂಸ ಮಾಡಿದಾಗಿನಿಂದ ನೇಮಕಗೊಂಡಿದ್ದ ಕಾವಲುಗಾರರು ಎಂದಿನಂತೆ ನಿನ್ನೆ ರಾತ್ರಿ ನವವೃಂದಾವನ ಗಡ್ಡೆ ಕಾಯಲು ಹೋಗಿದ್ದರು.

ಬೆಳಗ್ಗೆ ಆಗುವುದರೊಳಗೆ ನದಿಗೆ 1.30 ಲಕ್ಷ ಕ್ಯೂಸೆಕ್ ಬಿಡಲಾಗಿದೆ. ನೀರಿನ ರಭಸದ ಹಿನ್ನೆಲೆಯಲ್ಲಿ ವಾಪಸ್ ಆನೆಗೊಂದಿಗೆ ಬರಲಾರದೆ ಪರದಾಟ ನಡೆಸಿದ್ದಾರೆ. ಬೋಟ್ ಮೂಲಕ ಕಾವಲುಗಾರರನ್ನು ಕರೆತರುವ ಪ್ರಯತ್ನ ಮುಂದುವರಿದಿದೆ.

ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಸುಮಾರು 200 ಪ್ರವಾಸಿಗರು ಸಿಲುಕಿದ್ದಾರೆ. ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನದಿಗೆ ನೀರು ಬಿಡಲಾಗಿದೆ. ‌ಗಡ್ಡೆಯಲ್ಲಿ ವಿದೇಶಿಯರು ಸೇರಿದಂತೆ ಸುಮಾರು 200 ಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದರು.

ನದಿಗೆ ನೀರು ಬಿಡುವ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ನಿನ್ನೆ ಪ್ರವಾಸಿಗರ ಕಾರು, ಬೈಕ್ ಸೇರಿದಂತೆ ವಾಹನಗಳನ್ನು ನಡುಗಡ್ಡೆಯಿಂದ ಹೊರಗೆ ಸಾಗಿಸಲಾಗಿದೆ. ಪ್ರವಾಸಿಗರು ಸುರಕ್ಷಿತವಾಗಿದ್ದು, ವಾಪಸ್ ತೆರಳಬೇಕು ಎನ್ನುವರಿಗೆ ಬೋಟ್ ಮೂಲಕ ಕಳುಹಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.