ಕೆ.ಎನ್.ಪಿ.ವಾರ್ತೆ,ಕಾರವಾರ,ಸೆ.02;

ಪ್ರಕರಣವೊಂದಕ್ಕೆ ಸಂಬಂಧಿಸಿ ಮಾಹಿತಿ ಕಲೆ ಹಾಕಲು ತೆರಳಿದ್ದ ಕಾರವಾರ ಡಿವೈಎಸ್​ಪಿ ಶಂಕರ್​ ಮಾರಿಯಾಳ್​ ಸೇರಿ ಕೆಲ ಪೋಲೀಸ್ ಅಧಿಕಾರಿಗಳು ಕಾಳಿ ನದಿಯ ಅಂಚಿನ ಕಾಡಿನಲ್ಲಿ ನಾಪತ್ತೆಯಾಗಿರುವ ಘಟನೆ ಭಾನುವಾರ ರಾತ್ರಿ ವರದಿಯಾಗಿದೆ.

ಈ ಸಂಬಂಧ ಶೋಧ ಕಾರ್ಯ ನಡೆಯುತ್ತಿದ್ದು ಕಾಳಿ ನದಿಯ ಸೆಳವಿಗೆ ಸಿಕ್ಕಿರಬಹುದು ಇಲ್ಲವೆ ಕಾಡಿನಲ್ಲಿ ದಾರಿ ತಪ್ಪಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ತನಿಖೆಯ ಸಂಬಂಧ ಕೆಲ ಸಿಬ್ಬಂದಿಗಳೊಡನೆ ವಾಹನದಲ್ಲಿ ಬಾರೆ ಗ್ರಾಮದ ಅರಣ್ಯ ಪ್ರದೇಶಕ್ಕೆ ತೆರಳಿದ್ದ ಡಿವೈಎಸ್​ಪಿ ಶಂಕರ್​ ಮಾರಿಯಾಳ್ ಹಾಗೂ ತಂಡದ ಕೆಲ ಸದಸ್ಯರು ನಾಪತ್ತೆಯಾಗಿದ್ದಾರೆ. ಸ್ಥಳದಲ್ಲಿ ಮೊಬೈಲ್ ವಾಕಿ ಟಾಕಿ ಸಿಗ್ನಲ್ ಗಳೂ ಸಿಕ್ಕದ ಕಾರಣ ಮಲ್ಲಾಪುರ ಹಾಗೂ ಕದ್ರ ಪೋಲೀಸರು ಕೋಬಿಂಗ್ ನಡೆಸಿ ಶೋಧಕಾರ್ಯಾಚರಣೆ ನಡೆಸುತ್ತಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.