ಕೆ.ಎನ್.ಪಿ.ವಾರ್ತೆ,ಮಹಿಸಗರ್,ಮೇ.06;

ತನಗೆ ಕಚ್ಚಿದ ಹಾವನ್ನು ತಾನೂ ಕಚ್ಚಿ ಸಾಯಿಸಿ 70 ವರ್ಷದ ವೃದ್ಧ ವ್ಯಕ್ತಿ ಮೃತಪಟ್ಟಿರುವ ವಿಲಕ್ಷಣ ಘಟನೆ ಗುಜರಾತ್ ನ ಮಹಿಸಗರ್ ನಲ್ಲಿ ನಡೆದಿದೆ.

ಪರ್ವತ್ ಗಾಲಾ ಬರಿಯಾ ಎಂಬ ರೈತ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿದೆ. ಇದರಿಂದ ಆಕ್ರೋಶಗೊಂಡ ರೈತ ಹಾವಿನ ಮೇಲೆ ಸೇಡು ತೀರಿಸಿಕೊಳ್ಳಲು ಅದನ್ನು ತಾನೂ ಕಚ್ಚಿದ್ದಾನೆ.

ಹತ್ತಿರದಲ್ಲೇ ಇದ್ದ ಸಂಬಂಧಿಕರು ಈ ಘಟನೆಯನ್ನು ನೋಡಿ ಹಾವನ್ನು ಅಲ್ಲೇ ದಹನ ಮಾಡಿ, ಹಾವು ಕಚ್ಚಿದ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಆತ ಬದುಕಿ ಉಳಿಯಲಿಲ್ಲ.

ತಕ್ಷಣದಲ್ಲೇ ಆ ರೈತನಿಗೆ ವೈದ್ಯಕೀಯ ಸೌಲಭ್ಯವೂ ಸಿಗಲಿಲ್ಲ. ಮೂರು ಆಸ್ಪತ್ರೆಗಳು ಅಲೆದರೂ ಸಹ ಸೂಕ್ತ ವೈದ್ಯಕೀಯ ಸೌಲಭ್ಯ ದೊರೆಯದೇ ಆತ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.