ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಆ.02;

ದಾವಣಗೆರೆ ಸಾಹಿತ್ಯ ವಲಯದಲ್ಲಿ ಗಿರಿಜಕ್ಕ ಎಂದೇ ಚಿರಸ್ಮರಣೀಯರಾಗಿರುವ ಸಾಹಿತ್ಯ ಕನ್ನಿಕೆ ಟಿ ಗಿರಿಜ ಅವರ ಬದುಕು – ಬರಹ ಕುರಿತ ಕವನ ಸಂಕಲನ ಹೊರ ತರುವ ಹಿನ್ನೆಲೆಯಲ್ಲಿ ಆಪ್ತ ಒಡನಾಡಿಗಳು, ಅಭಿಮಾನಿಗಳು ಹಾಗೂ ಸಾಹಿತ್ಯಾಸಕ್ತರಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ.

18 ಕ್ಕೂ ಹೆಚ್ಚು ಸಾಮಾಜಿಕ ಮತ್ತು ಐತಿಹಾಸಿಕ ಕಾದಂಬರಿ, ಭಾರತದ ನದಿಗಳು, ಚಿತ್ರದುರ್ಗ – ದಾವಣಗೆರೆ ಜಿಲ್ಲಾ ದರ್ಶನಿಗಳಂತಹ ಸಂಶೋಧನಾ ಕೃತಿಗಳು, ಕೆಲವು ಜೀವನ ಚರಿತ್ರೆ, ಆತ್ಮ ಕಥನಗಳು, ಸ್ಥಳ ಪುರಾಣಗಳು, 13 ವರ್ಷಕ್ಕೂ ಹೆಚ್ಚು ಕಾಲ ಅಂಕಣಕಾರ್ತಿಯಾಗಿ ಸಾವಿರಾರು ಲೇಖನಗಳು ಸೇರಿದಂತೆ ಸಾಹಿತ್ಯ ಲೋಕಕ್ಕೆ ಅವರು ನೀಡಿರುವ ಕೊಡುಗೆ ಅಪಾರ. ತೆರೆದ ಪುಸ್ತಕದಂತಿದ್ದ ಅವರ ಬದುಕು – ಬರಹ ಯುವ ಪೀಳಿಗೆಗೆ ಮಾದರಿಯೇ ಸರಿ.

ಕಾವ್ಯ ನಮನ ಸಲ್ಲಿಸುವ ಈ ಅವಕಾಶವನ್ನು ಅವರ ಆಪ್ತ ಒಡನಾಡಿಗಳು, ಅಭಿಮಾನಿಗಳು, ಸಾಹಿತ್ಯಾಸಕ್ತರು ಬಳಸಿಕೊಳ್ಳಬಹುದು. ಕವನ 20 ಸಾಲಿನ ಮಿತಿಯೊಳಗಿರಲಿ. ಅತ್ಯುತ್ತಮ ಎನಿಸುವ 60 ಕವನಗಳನ್ನು ಆಯ್ಕೆ ಮಾಡಿ ಗಿರಿಶೈಲ ಪ್ರಕಾಶನದಿಂದ ಸಂಕಲನ ಪ್ರಕಟಿಸಲಾಗುವುದು. ಕವನಗಳನ್ನು ನುಡಿ ಅಥವಾ ಯುನಿಕೋಡ್ ತಂತ್ರಾಂಶದಲ್ಲಿ ಟೈಪಿಸಿ ಮೊ. ಸಂ : 8867702396 ಗೆ ದಿನಾಂಕ : 10/08/2019 ರ ಒಳಗೆ ಕಳಿಸುವಂತೆ ಟಿ. ಗಿರಿಜ ಕುಟುಂಬದ ಶ್ರೀಮತಿ ಟಿ. ಎಸ್. ಶೈಲಜಾ ಅವರು ತಿಳಿಸಿದ್ದಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.