ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಮೇ.13;

ಜನ ಮನ ಫೌಂಡೇಶನ್ (ರಿ) ನ ಅಡಿಯಲ್ಲಿ ನೀಡಲಾಗುವ 2019 ರ ಸೂಪರ್ ಅಚೀವರ್ಸ್ ಸಿರೀಸ್ I ಅವಾರ್ಡ್ ಗೆ ಕಿಡ್ಸ್ ವಿಭಾಗದಲ್ಲಿ 04 ವರುಷದ ನೀತಿಕಾನಾಗ್ ಕೋರಿಶೆಟ್ಟರ ಆಯ್ಕೆಯಾಗಿದ್ದಾರೆ.

ಇವರು ನರಗುಂದ ತಾಲೂಕಿನ ಬಸವೇಶ್ವರ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪ್ಲೇಹೋಮ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ವಯಸ್ಸಿಗೂ ಮೀರಿದ ಪ್ರತಿಭೆಯನ್ನು ಹೊಂದಿದ್ದಾರೆ. 15 ರಿಂದ 20 ರೈಮ್ಸ್, 30 ವಚನಗಳನ್ನು ಸುಲಲಿತವಾಗಿ ಹೇಳುವ ನಿತಿಕಾನಾಗ್ 300 ಸಾಮಾನ್ಯಜ್ಞಾನ ಪ್ರಶ್ನೆಗಳಿಗೆ ಉತ್ತರ ನೀಡುವ ಸಾಮರ್ಥ್ಯ ಹೊಂದಿರುವಳು.

ಅಲ್ಲದೆ ರಾಜ್ಯಗಳ ಹೆಸರು, ಇಲ್ಲಿಯವರೆಗೆ ಆಯ್ಕೆಯಾದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಜ್ಞಾನಪೀಠ ಪುರಸ್ಕೃತರ ಹೆಸರು ಹೀಗೆ ಅನೇಕ ಬಗೆಯ ಮಾಹಿತಿಯನ್ನು ಥಟ್ ಅಂತ ಹೇಳುವ ಕಲೆಯನ್ನು ಹೊಂದಿದ್ದಾರೆ ಹಾಗಾಗಿ ಇವರ ಜಾಣ್ಮೆಗೆ ಸೂಪರ್ ಅಚೀವರ್ ಅವಾರ್ಡ್ ನ್ನು ನೀಡಲಾಗುವದು ಎಂದು ಫೌಂಡೇಶನ್ ನ ಸಂಸ್ಥಾಪಕರಾದ ಡಾ.ಅಂಬಿಕಾ ಹಂಚಾಟೆಯವರು ಮಾಹಿತಿ ಪ್ರಕಟಿಸಿರುತ್ತಾರೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.