ಕೆ.ಎನ್.ಪಿ.ವಾರ್ತೆ,ಧಾರವಾಡ,ನ.10;
ಹಜರತ್ ಟಿಪ್ಪು ಸುಲ್ತಾನ್ ಜಾತಿ, ಧರ್ಮ ಮೀರಿ ಬೆಳೆದ ವ್ಯಕ್ತಿ. ಸರ್ವ ಜನಾಂಗದಿಂದಲೂ ಗೌರವಿಸಲ್ಪಡುವ ಟಿಪ್ಪು ಸುಲ್ತಾನರು ಕನ್ನಡ ನಾಡಿನ ಆಸ್ತಿ. ಸೂರ್ಯಚಂದ್ರರು ಇರುವವರೆಗೂ ಅಜರಾಮರ ಎಂದು ಶಾಸಕ ಸಿ.ಎಸ್. ಶಿವಳ್ಳಿ ಹೇಳಿದರು.
ನಗರದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಮೊದಲಿನಿಂದಲೂ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತಿದೆ. ಆದರೆ ಸರಕಾರಿ ಕಾರ್ಯಕ್ರಮವಾಗಿ ಜಯಂತಿಯನ್ನು ಆಚರಿಸಲು ಆರಂಭಿಸಿದಾಗಿನಿಂದ ಕೆಲವರು ಅನಾವಶ್ಯಕವಾಗಿ ವಿರೋಧಿಸುತ್ತಿದ್ದಾರೆ. ಟಿಪ್ಪು ಮತಾಂದನೆಂದು, ಜಾತಿವಾದಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಟಿಪ್ಪು ತನ್ನ ಆಸ್ಥಾನದಲ್ಲಿ ದಿವಾನ್ ಪೂರ್ಣಯ್ಯರಿಗೆ ಉನ್ನತ ಹುದ್ದೆ ಕೊಟ್ಟಿದ್ದನು. ಶೃಂಗೇರಿ ದೇವಸ್ಥಾನಗಳಿಗೆ ಉಂಬಳಿ ನೀಡಿ ಗೌರವ ಸಲ್ಲಿಸಿದ್ದನು. ಶ್ರೀರಂಗನಾಥನಿಗೆ ನಿತ್ಯ ಭಕ್ತಿ ಪೂರ್ವಕ ನಮಿಸಿ ಜೀರ್ಣೋದ್ದಾರಕ್ಕೆ ಶ್ರಮಿಸಿದ್ದನು. ಅವನ ಜಾತ್ಯತೀತ ನಿಲುವಿಗೆ ಮತ್ತು ಸರ್ವರಲ್ಲಿ ಸಮಾನತೆ ಕಂಡಿದ್ದಕ್ಕೆ ಸಾಕ್ಷಿಯಾಗಿದೆ.
ಟಿಪ್ಪು ಸುಲ್ತಾನ್ ಬ್ರಿಟೀಷ್ ವಿರೋಧಿಯಾಗಿದ್ದ. ಸ್ವಾತಂತ್ರ್ಯದ ಕನಸು ಕಂಡ ಪ್ರಥಮ ಸೇನಾನಿ. ಅಪ್ರತಿಮ ಧೀರನಾಗಿದ್ದನು. ಟಿಪ್ಪು ಸುಲ್ತಾನ್, ಕಿತ್ತೂರು ರಾಣಿ ಚನ್ನಮ್ಮ, ಸಂಗೋಳ್ಳಿ ರಾಯಣ್ಣ, ವೀರ ಮದಕರಿನಾಯಕ ಮುಂತಾದ ಮಹಾನ ಚೇತನಗಳು ನಮ್ಮ ರಾಷ್ಟ್ರದ ಆಸ್ತಿ. ಟಿಪ್ಪು ಸುಲ್ತಾನ್ ಎಂದೂ ಹಿಂದೂ ವಿರೋಧಿ ಆಗಿರಲಿಲ್ಲ. ಅಪಪ್ರಚಾರ ಮಾಡಲಾಗುತ್ತಿದೆ.
ಇತಿಹಾಸ, ಸ್ಮಾರಕ, ದಾಖಲೆ ಕುರುಹುಗಳನ್ನು ಅವಲೋಕಿಸಿದಾಗ ಎಲ್ಲವನ್ನು ಮೀರಿದ ಮತ್ತು ಸರ್ವರು ಒಪ್ಪಿತ ವ್ಯಕ್ತಿತ್ವವನ್ನು ಟಿಪ್ಪು ಸುಲ್ತಾನರು ಹೊಂದಿರುವುದು ನಮಗೆ ಮನವರಿಕೆ ಆಗುತ್ತದೆ.
ಶಾಸಕ ಅಬ್ಬಯ್ಯ ಪ್ರಸಾದ ಮಾತನಾಡಿ, ಇಂದು ಇತಿಹಾಸ ತಿರುಚುವ ಕಾರ್ಯ ನಡೆಯುತ್ತಿದೆ. ಇದು ವಿಷಾದನೀಯ. ಟಿಪ್ಪು ಸುಲ್ತಾನ್ ಒರ್ವ ಶೂರ, ಧೀರ ನಾಯಕ. ಜಾತಿ, ಧರ್ಮದ ಹೆಸರಲ್ಲಿ ಟಿಪ್ಪು ಅಂತಹ ಪರಮ ದೇಶಭಕ್ತನನ್ನು ಗುರುತಿಸಬಾರದು. ಇದನ್ನು ಮೀರಿದ ವ್ಯಕ್ತಿತ್ವ ಅವರದಾಗಿತ್ತು. ನಾಡಿನಲ್ಲಿ ಕೋಮುಸೌಹಾರ್ಧತೆ, ಸಾಮರಸ್ಯ ಕಾಪಾಡಿ, ಬೆಳಸಿ, ಇತರರಿಗೆ ಮಾದರಿಯಾಗಿದ್ದ ಟಿಪ್ಪು ಸುಲ್ತಾನರನ್ನು ಪ್ರತಿಯೊಬ್ಬ ಕನ್ನಡಿಗ ಹೆಮ್ಮೆಯಿಂದ ಗೌರವಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ದೀಪಾ ಚೋಳನ್, ರಾಜ್ಯ ಪ್ರಶಸ್ತಿ ಪುರಸ್ಕೃತ ಇತಿಹಾಸ ತಜ್ಞ ಡಾ. ಎಮ್.ವೈ. ಸಾವಂತ, ನಗರ ಪೊಲೀಸ್ ಆಯುಕ್ತ ಎಮ್.ಎನ್. ನಾಗರಾಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ., ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಎಸ್.ಜಿ.ಕೊರವರ, ಉಪವಿಭಾಗಾಧಿಕಾರಿ ಮಹ್ಮಮದ ಜುಬೇರ, ಎ.ಸಿ.ಪಿ. ಎಂ.ಎನ್.ರುದ್ರಪ್ಪ, ತಹಶೀಲ್ದಾರ ಪ್ರಕಾಶ ಕುದರಿ ಸೇರಿದಂತೆ ಇನ್ನಿತರರು ಇದ್ದರು.
ವರದಿ : ಚಂದ್ರು ಹಿರೇಮಠ ಧಾರವಾಡ
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.