ಕೆ.ಎನ್.ಪಿ.ವಾರ್ತೆ,ಮುಂಡರಗಿ,ಡಿ.16;

ರೈತರ ಬಾಳಿನ ಭರವಸೆಯ ಯೋಜನೆ ಹಾಳಾಗುವ ಹಂತ ತಲುಪಿದೆ. ಕೃಷ್ಣ ಜಲಭಾಗ್ಯ ನಿಗಮದಿಂದ ಸಿಂಗಟಾಲೂರ ಏತ ನೀರಾವರಿಯ ಸೂಕ್ಷ್ಮ ಹನಿ ನೀರಾವರಿಯ ಯೋಜನೆ ಆರಂಭಕ್ಕೂ ಮನ್ನವೇ ಹಾಳಾಗಿರುವ ಎಲ್ಲ ಸ್ಪಷ್ಟ ಸೂಚನೆಗಳು ಗೋಚರಿಸುತ್ತಿವೆ ಎಂದು ಹೋರಾಟಗಾರ, ಮಾಜಿ ರಾಜ್ಯ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ವೈಎನ್.ಗೌಡರು ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಟಫಿಮ್ ಮತ್ತು ಮೇಘಾ ಕಂಪನಿಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡು, ಜನಪ್ರತಿನಿಧಿಗಳು, ಕೃಷ್ಣ ಜಲಭಾಗ್ಯದ ಭಾರಿ ನೀರಾವರಿ ನಿಗಮದ ಅಧಿಕಾರಿಗಳು, ಸರ್ಕಾರದ ಮೈತ್ರಿಯಿಂದ ಬಯಲುನಾಡು ಮತ್ತು ಬರದನಾಡಿಗೆ ವರದಾನವಾಗಬೇಕಾದ ನೀರಾವರಿ ಯೋಜನೆಗಳು, ಮಂತ್ರಿಗಳು ಶಾಸಕರು, ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಮೈಯಲು ಒಳ್ಳೆಯ ಹುಲ್ಲುಗಾವಲು ಆಗಿದೆ.

ಮೆಟಪಿಮ್ ಮತ್ತು ಮೇಘಾ ಕಂಪನಿಗಳು ಮೂಲಗುತ್ತಿಗೆದಾರರಾದರು ಉಪಗುತ್ತಿಗೆದಾರರಿಗೆ ಕಾಮಗಾರಿ ನೀಡಿ, ಮುಂಡರಗಿ, ಯಲಬುರ್ಗ, ಗದಗ, ಕೊಪ್ಪಳ, ತಳಕಲ್ಲು ಭಾಗದ ರೈತರ ಹೊಲಗಳಲ್ಲಿ ಬೇಕಾಬಿಟ್ಟಿಯಾಗಿ ಮನಬಂದಂತೆ ಕಾಮಗಾರಿ ಮಾಡಿದ್ದಾರೆ.

ರೈತರ ಹೊಲಗಳ ಬದುವಿನ ಅಂಚಿನಲ್ಲಿ ಮಾಡಬೇಕಾದ ಪೈಪ್ ಲೈನ್ ನನ್ನು ಉಪಗುತ್ತಿಗೆದಾರರು ತಮ್ಮ ಲಾಭಕ್ಕೆ ಹೊಲದ ಮಧ್ಯಭಾಗದಲ್ಲಿ ಪೈಪ್ ಹಾಕಿ, ಮಣ್ಣು ಮುಚ್ಚದೆ ಕಾಮಗಾರಿ ಅಪೂರ್ಣಗೊಳಿಸಿ ಉಳುಮೆ ಮಾಡಲು ರೈತರಿಗೆ ತೊಂದರೆ ಆಗುವಂತೆ ಮಾಡಿದ್ದಾರೆ.

ಮುಂದಾಲೋಚನೆ ಇಲ್ಲದೆ ವೆಂಕಟಪುರ, ಕಲಿಕೇರಿ ಭಾಗದ ಹೊಲಗಳಲ್ಲಿ ಗುತ್ತಿಗೆದಾರರು ಪೈಪಲೈನ್ ಮಾಡಿ, ಈಗ ಈ ಏರಿಯಾ ನೀರಾವರಿ ಅಚ್ಚುಕಟ್ಟು ಪ್ರದೇಶಕ್ಕೆ ಬರುವುದಿಲ್ಲ ಎಂದು ಹಾಕಿದ ಪೈಪ್ ಅನ್ನು ತೆರುವುಗೊಳಿಸಿದ ಉದಾಹರಣೆಗಳಿವೆ ಎಂದರು.

ಕಾಮಗಾರಿಯ ಗುಣಮಟ್ಟದ ಪರಿಶೀಲನೆ ಇಲ್ಲ :

ಸುಮಾರು 5178 ಕೋಟಿ ರೂ.ಯೋಜನೆಯಲ್ಲಿ 4000 ಕೋಟಿ ರೂ. ಹನಿನೀರಾವರಿಗೆ, ಉಳಿದ 1178 ಕೋಟಿ ರೂ. ಕಾಲುವೆ ಮುಖಾಂತರ ನೀರಾವರಿ ಯೋಜನೆಗೆ ಮುಂಜೂರಾದ ಹಣ ಗೋಲ್ ಮಾಲ್ ಆಗಿದೆ.

ಮುಂಡರಗಿ, ಗದಗ, ಯಲಬುರ್ಗ, ಕೊಪ್ಪಳ ತಾಲೂಕುಗಳಲ್ಲಿ ನಾಲ್ಕು ಪ್ಯಾಕೇಜ್ ಕಾಮಗಾರಿ ನಡೆದಿವೆ. ಸ್ಥಳೀಯ ಸರ್ವೆದಾರರಿಂದ ಸರ್ವೆ ಮಾಡದೆ, ರೈತರ ಗಮನಕ್ಕೆ ತರದೆ, ರಾತ್ರೋರಾತ್ರಿ ಪೈಪ್ ಲೈನ್ ಕೆಲಸ ಮಾಡಿದ್ದಾರೆ.

ಹಿರೇವಟ್ಟಿ, ಹಾರೂಗೇರಿ, ರೈತರ ವಿರೋಧವಿದ್ಧರು ಅಕ್ರಮ ಯೋಜನೆಗೆ ಹುನ್ನಾರ ನಡೆಸಿದ್ದಾರೆ. ಹಿಂದಿನ ಮಂತ್ರಿಗಳು, ಶಾಸಕರು, ಅಧಿಕಾರಿಗಳು ಇತ್ತ ಕಡೆ ಗಮನಹರಿಸಿಲ್ಲ. ಕಾಮಗಾರಿ ಯೋಜನೆಗೆ ಸಂಬಂಧಿಸಿದವರು ಈ ಭಾಗದ ರೈತರ ಬಾಯಿ ಮುಚ್ಚಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಹುನುಗುಂದ ತಾಲೂಕಿನ ರಾಮ್ತಾಳ ಏತ ನೀರಾವರಿಯು ಒಂದು ವರ್ಷಕಳಿದಿಲ್ಲ ಯೋಜನೆ ಕಾಮಗಾರಿ ಹಾಳಾಗಿ ಹಳ್ಳಹಿಡಿದಿದೆ. ರೈತರು ಮುಂದಿನ ದಿನಗಳಲ್ಲಿ ಪಶ್ಚಾತಾಪ ಪಡಬೇಕಾಗುತ್ತೆ. ರೈತರು ಜಾಗೃಕರಾಗಬೇಕು ಎಂದು ಹೇಳಿದರು ಮತ್ತು ಸಿಬಿಐ ತನಿಖೆಗೆ ಸರ್ಕಾರ ಮುಂದಾಗಬೇಕು ಎಂದರು.

ಕಾವೇರಿ ನೀರಾವರಿ ನಿಗಮ, ಕೃಷ್ಣ ನೀರಾವರಿ ನಿಗಮದ ಅಕ್ರಮ ಕಾಮಗಾರಿಯನ್ನು ಸಿಬಿಐಗೆ ಒಪ್ಪಿಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಅದೇ ರೀತಿ ಸಿಂಗಟಾಲೂರ ಏತನೀರಾವರಿ ಯೋಜನೆಯ ಭ್ರಷ್ಟಾಚಾರ, ಕಳಪೆ ಮತ್ತು ಅಕ್ರಮ ಕಾಮಗಾರಿಯ ಗೋಲ್ಮಾಲ್‍ನ್ನು ಸಿಬಿಐಗೆ ಮತ್ತು ಲೋಕಾಯುಕ್ತರಿಗೆ ಒಪ್ಪಿಸಲು ಜಿಲ್ಲಾಉಸ್ತುವಾರಿ ಸಚಿವರು, ಶಾಸಕರು, ಮುಖ್ಯಮಂತ್ರಿಗಳು ಮುಂದಾಗಬೇಕು.

ರೈತರ ಸಭೆ ಕರೆದು ಅವರ ಸಮ್ಮುಖದಲ್ಲಿ ಅಧಿಕೃತ ಸರ್ಕಾರಿ ಅಧಿಕಾರಿಗಳು, ಭಾರಿ ನೀರಾವರಿ ನಿಗಮದ ಅಧಿಕಾರಿಗಳು ರೈತರ ಬಾಳಿನ ಭರವಸೆಯ ಯೋಜನೆಯನ್ನು ಹುಸಿ ಮಾಡದೆ ಸರ್ಕಾರ ಬೆಳಕು ಚೆಲ್ಲಬೇಕಾಗಿದೆ.

ಹಾಳಾಗುವ ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತ್ತಿನಲ್ಲಿ ಇಡಬೇಕು, ಗುತ್ತಿಗೆದಾರರನ್ನು ಬ್ಲಾಕ್ ಲೀಸ್ಟ್ ಗೆ ಇಡಬೇಕು, ಗುಣಮಟ್ಟದ ಕಾಮಗಾರಿ ಅಗಬೇಕು. ರೈತರ ಬರದ ನಾಡಿಗೆ ಫಲ ದೊರೆಯಬೇಕು ಎಂದು ತಿಳಿಸಿದರು. 

ವರದಿ : ಕೋಗಳಿ ಶೇಖರ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.