ಕೆ.ಎನ್.ಪಿ.ವಾರ್ತೆ,ಗಂಗಾವತಿ,ಏ.05;

ತಾಲೂಕಿನ ಡಣಾಪೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಉಗಾದಿ ಹಬ್ಬದ ಪ್ರಯುಕ್ತ ಶ್ರೀ ಆಸುಬಂಡೇಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆಯಿಂದ ನಾನಾ ಬಗೆಯ ಪೂಜಾ ಪುನಸ್ಕಾರಗಳು ನೆರವೇರಿದವು.

ಬೆಳಿಗ್ಗೆ ದೇವಾಲಯದಿಂದ ಶ್ರೀ ಆಸುಬಂಡೇಶ್ವರ ದೇವರ ಮೂರ್ತಿಗಳನ್ನು, ಕೊನಕೊಂಡಲದ ಶ್ರೀ ಆಸುಬಂಡೇಶ್ವರ ಮೂರ್ತಿಗಳನ್ನು, ನಮ್ಮೂರ ಆರಾಧ್ಯ ದೈವವಾಗಿರುವ ಶ್ರೀ ಮಾರುತೇಶ್ವರ ಮೂರ್ತಿಯನ್ನು ಹಾಗೂ ದುರ್ಗಾದೇವಿ ಪಲ್ಲಕ್ಕಿಯನ್ನು ಕಳಸ, ಕುಂಭ, ಡೊಳ್ಳು ಕುಣಿತ ಸೇರಿದಂತೆ ನಾನಾಬಗೆಯ ಮಂಗಳವಾದ್ಯಗಳೊಂದಿಗೆ ಗಂಗೆಯ ಸ್ಥಳಕ್ಕೆ ತೆರಳಿ ಮೂರ್ತಿಗಳನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಿ, ಊರ ರಾಜ ಬೀದಿಗಳಲ್ಲಿ ಮೆರವಣಿಗೆ ಸಾಗಿ ದೇವಸ್ಥಾನಕ್ಕೆ ಆಗಮಿಸಿತು. ಡೊಳ್ಳು ಕುಣಿತ ನೋಡುಗರನ್ನು ಬೆರಗುಗೊಳಿಸಿತ್ತು. ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

ಈ ವೇಳೆ ಪೂಜಾರಿಗಳಾದ ಶ್ರೀಬಂಡೇಪ್ಪ, ಹನುಮಂತಪ್ಪ ಕಮೀಟಿ ಸದಸ್ಯರಾದ ಆನಂದಪ್ಪ, ಶೇಖರಪ್ಪ.ಕೆ, ಬಸಪ್ಪ, ಈರಪ್ಪ, ಪಂಪಾಪತಿ.ಟಿ, ಶರಣಪ್ಪ, ಹೊನ್ನುರಪ್ಪ, ನಾಗಪ್ಪ, ಭುವನೇಶಪ್ಪ, ಈರಪ್ಪ, ಅಂಜನೇಯ್ಯ, ಹನುಮೇಶ.ಕೆ, ಹುಲ್ಲೇಶಪ್ಪ, ಕೆಂಚಪ್ಪ, ಹನುಮಯ್ಯ, ಭಿರಪ್ಪ, ಶಿವಣ್ಣ, ವೆಂಕಟೇಶ, ಅಮರೇಶ, ವೀರೇಶ, ಕೊನಕೊಂಡಲದ ಭಕ್ತಾದಿಗಳು ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಇದ್ದರು.

ವರದಿ : ಹನುಮೇಶ್ ಭಾವಿಕಟ್ಟಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.