ಕೆ.ಎನ್.ಪಿ.ವಾರ್ತೆ,ನವದೆಹಲಿ,ಏ.27;

ಶೀಘ್ರದಲ್ಲಿಯೇ 20 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಘೋಷಿಸಿದೆ.

“ರೂ 20 ನೋಟಿನ ಬಣ್ಣ ಹಸಿರು ಮಿಶ್ರಿತ ಹಳದಿಯಾಗಿರಲಿದ್ದು ನೋಟಿನ ಹಿಂಬಾಗದಲ್ಲಿ ಎಲ್ಲೋರಾ ಗುಹೆಗಳ ಚಿತ್ರವಿರಲಿದೆ. ಇದು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಚಿತ್ರಿಸುತ್ತದೆ” ಎಂದು ಆರ್ ಬಿಐ ಹೇಳಿದೆ.

ಇನ್ನು ಈ ಹೊಸ ನೋಟು ಚಲಾವಣೆಗೆ ಬಂದ ನಂತರ ಸಹ ಹಳೆಯ 20 ರೂ. ನೋಟುಗಳು ಹಾಗೆಯೇ ಚಲಾವಣೆಯಲ್ಲಿರಲಿದ್ದು ಇದಕ್ಕೆ ಯಾವ ಕಾನೂನಿನ ಅಡ್ಡಿ ಇರುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.

ಹೊಸ ನೋಟಿನಲ್ಲಿ ಜ್ಯಾಮಿತಿಯ ವಿನ್ಯಾಸಗಳನ್ನು ಚಿತ್ರಿಸಲಾಗಿದ್ದು ನೋಟಿನ ಎರಡೂ ಭಾಗಗಳಲ್ಲಿ ಬೇರೆ ಬೇರೆ ಮಾದರಿಯ ಚಿತ್ತಾರವಿರಲಿದೆ. ಹೊಸ ನೋಟು 63 ಎಂಎಂ x 129 ಎಂಎಂ ಅಳತೆ ಹೊಂದಿರಲಿದೆ ಎಂದು ತಿಳಿಸಿದೆ.

ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧಿಯ ಭಾವಚಿತ್ರವನ್ನು ಹೊಂದಿ ಸೂಕ್ಷ್ಮ ಅಕ್ಷರಗಳಲ್ಲಿ ‘ಆರ್ಬಿಐ’, ‘ಭಾರತ್’, ‘ಇಂಡಿಯಾ’ ಮತ್ತು ’20 ‘ ಎಂದು ಬರೆಯಲಾಗಿದೆ. ಆರ್ ಬಿಐ ಲಾಂಛನದೊಂದಿಗೆ ಗವರ್ನರ್ ಸಹಿ, ಸಹ ನೋಟಿನಲ್ಲಿ ಇರಲಿದೆ. ಗಾಂಧಿ ಭಾವಚಿತ್ರದ ಬಲಭಾಗದಲ್ಲಿ – ಅಶೋಕ ಸ್ಥಂಭ, ಮತ್ತು ಎಲೆಕ್ಟ್ರಾಟೈಪ್ ನಲ್ಲಿ 20 ಎಂದು ಮುದ್ರಿಸಲಾಗಿದೆ..

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.