ಕೆ.ಎನ್.ಪಿ,ಕವಿತೆ;

ಆತ್ಮೀಯರೇ, ಇಂದಿನ ಕೆ.ಎನ್.ಪಿ ಕವಿತೆ ವಿಭಾಗದಲ್ಲಿ ಬಸವರಾಜ ಕಾಸೆರವರ “ತವರು ಮತ್ತು ಅವಳು” ಶಾಯರಿಗಳನ್ನು ಪ್ರಕಟಿಸಲಾಗಿದೆ…ಸಹೃದಯರು ಶಾಯರಿಗಳನ್ನು ಓದಿರಿ.. ತಮ್ಮ ಅಮೂಲ್ಯವಾದ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ…

ತವರು ಮತ್ತು ಅವಳು

ಗಂಡನಿಗೆ ಹೇಳಿ ಕರೆದೊಯ್ಯವವನು
ಬರಬೇಕು ತಂಗಿ ನೀ ಹಬ್ಬಕ್ಕೆ

ಕಾಯ್ತಾ ಇರುವವಳು ಇನ್ನೂ
ಹಬ್ಬ ಮುಗಿದ ಮೇಲೂ ಒಲವು

ಕಳೆದವೂ ಎಷ್ಟು ವರ್ಷಗಳು
ಬತ್ತಲಿಲ್ಲ ತವರಿನೆಡೆಗಿನ ಆಸೆಗಣ್ಣುಗಳು


ತರತಾನ ಅಣ್ಣ ತವರಿಂದ ಬುತ್ತಿ
ತರತಾನ ಅಣ್ಣ ತವರಿಂದ ಬುತ್ತಿ

ಅದು ಬರಿ ಬುತ್ತಿಯಲ್ಲ
ತುಂಬು ವಾತ್ಸಲ್ಯದ ಕಟ್ಟು

ಚಡಪಡಿಸುವ ಅಕ್ಕರೆಯ ನವ ಸಡಗರ
ತುಡಿದು ಮಿಡಿಯುವ ಕರೆಯ ಸಂಚಲನ


ನಸುಕಿನಲ್ಲಿ ಎದ್ದು ಹೋಳಿಗೆ ರೊಟ್ಟಿಯ ತಟ್ಟಿ
ಹೊತ್ತಿನ ಜೊತೆಗೆ ಕಳಿಸಿದಳು ತವರಿಗೆ ಬುತ್ತಿ

ಕಂಡ ಅದನ್ನ ತಂಗಿಯ ನೆನೆದು
ಹೆಂಡತಿಯ ತವರಿಗೆ ಕಳಿಸ್ಯಾನು ಗೋಳಾಡಿ

ಓಡೋಡಿ ಕರೆ ತಂದಾನು ಹಬ್ಬದ ನಂತರ
ಮನೆ ಮಗಳ ಕಂಡವರು ಹಿಗ್ಗ್ಯಾರು ಹಿರಿಹರಿ


ಯುವರಾಣಿಯ ಹಾಗೆ ಮೆರೆದವಳು ಅವಳು
ಮೈಗೂಡಿ ಚುರುಕಾಗಿ ಉಲ್ಲಾಸ ಉತ್ಸಾಹಗಳು

ಮಹಾರಾಣಿ ಈಗ ಅವಳು ತನ್ನ ಮನೆಗೆ
ಆದರೂ ಹಂಬಲಿಸುವಳು ತವರ ಮಮತೆಗೆ

ಕಂಡರೂ ಏನೇನು ಎಲ್ಲಿಯೂ ಸಿಗದು
ತವರಿನ ಆನಂದ ಮತ್ತೆ ಆ ಅನುಬಂಧ


ನಾದಿನಿಯ ಕಂಡರೆ ಒಂದೇ ಸಮನೆ
ಎಲ್ಲಿರದ ಅಸಹನೆ ಅವಳಿಗೆ

ಬಂದಾಗ ಅವಳಿಗೂ ಒಬ್ಬಳು ಅತ್ತಿಗೆ
ಅರಿವಾಯಿತು ಆಡಿ ಬೆಳೆದ ತವರಿನ ಅಸಡ್ಡೆ

ಹೋಗದಿದ್ದರೂ ಅವಳು ಈಗ ತನ್ನ ತವರಿಗೆ
ಕರೆದು ನಾದಿನಿಗೆ ಮಾಡುವವಳು ಸತ್ಕಾರ


ವಯಸ್ಸಾದಂತೆ
ಸಡಿಲವಾಗುವುದಂತೆ ತವರಿನ ಬಂಧ

ಅಕ್ಕರೆಯಿಂದ ಮಮಕಾರದೆಡೆಗೆ
ಮತ್ತೊಂದು ಮಜಲಿನ ಪಯಣ

ಈಗವಳೇ ತವರು
ಅಲ್ಲಿಯೇ ಅವಳು ಅಪರಿಚಿತಳು


ಕಟ್ಟಿ ಹಾಕದೆ ಬಿಗಿಯು ಗೊಳಿಸದೆ
ಬೇಕಾದಂತೆ ಹರಿಯಬಿಟ್ಟಳು ಬಂಧಗಳ

ಅದಕ್ಕೆ ಏನೋ ಋಣಾನುಬಂಧವಂತೆ
ಹೌದೌದು ಅದು ಅವಳ ಮನದಿಚ್ಛೆಯಂತೆ

ಮತ್ತೆ ಮತ್ತೆ ಬಂದು ಎಲ್ಲಾ ಸಂಬಂಧಗಳು
ಕೂಡಿ ಬಿಡುತ್ತಿದ್ದವು ತವರಿನಲ್ಲಿಯೇ ಬಿಡದಂತೆ

-ಬಸವರಾಜ ಕಾಸೆ
ಮು| ಪೋ| ದೇವಾಪೂರ
ತಾ| ಜಿ| ವಿಜಯಪುರ
ಪಿನ್ ಕೋಡ್| 586125
ಸಂಪರ್ಕ ಸಂಖ್ಯೆ | 7829141150
pradeepbasu68@gmail.com

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.