ಕೆ.ಎನ್.ಪಿ.ವಾರ್ತೆ,ಗಂಗಾವತಿ,ಸೆ.27;

ಶಹೀದ್ ಭಗತ್ ಸಿಂಗ್‍ರ 111ನೇಯ ಜನ್ಮದಿನಾಚರಣೆ ಅಂಗವಾಗಿ ಸಿ.ಪಿ.ಐ.ಎಂ.ಎಲ್ ಪಕ್ಷದ ಅಂಗ ಕಾರ್ಮಿಕ ಸಂಘಟನೆಗಳು ನಾಳೆ ಸಿ.ಬಿ.ಎಸ್ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದವರೆಗೆ ಬೃಹತ್ ರ್ಯಾಲಿ ನಡೆಸಿ, ಕೊಪ್ಪಳ ಜಿಲ್ಲೆಯ ಕಾರ್ಮಿಕರ ಸಮಸ್ಯೆಗಳ ಬಗ್ಗೆ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿವೆ.

ಹಕ್ಕೋತ್ತಾಯಗಳು:

1) ಕರ್ನಾಟಕ ರಾಜ್ಯದ ಎಲ್ಲಾ ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು. ತ್ಯಾಜ್ಯ ಸಾಗಿಸುವ ವಾಹನಗಳ ಚಾಲಕರನ್ನು ಪೌರಕಾರ್ಮಿಕರನ್ನಾಗಿ ಗುರುತಿಸಬೇಕು. ರಾಜ್ಯದಲ್ಲಿ ಬಾಕಿ ಇರುವ ಏಳು ತಿಂಗಳ ವೇತನವನ್ನು ಕೂಡಲೇ ಪಾವತಿಸಬೇಕು.
2) ಕೃಷಿ ಕಾರ್ಮಿಕರ ರಕ್ಷಣೆಗಾಗಿ ಹೊಸ ಕಾಯ್ದೆಯನ್ನು ರೂಪಿಸಿ, ಪರಿಹಾರಗಳನ್ನು ಹೆಚ್ಚಿಸಬೇಕು. ಕೃಷಿ ಕೆಲಸದಲ್ಲಿ ಮೃತಪಟ್ಟವರಿಗೆ ರೂ. 10/- ಲಕ್ಷಗಳ ಪರಿಹಾರ ನೀಡಬೇಕು.
3) ಹೋಟಲ್ ಕಾರ್ಮಿಕರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸಬೇಕು. ಕನಿಷ್ಟ ಕೂಲಿ ಜಾರಿಗೊಳಿಸಿ, ಕಾರ್ಮಿಕರಿಗೆ ನ್ಯಾಯಕೊಡಬೇಕು.
4) ನಷ್ಟಕ್ಕೊಳಗಾದ ಅಕ್ಕಿಗಿರಣಿಗಳನ್ನು ಪುನಃಶ್ಚೇತನಗೊಳಿಸಿ, ಕಾರ್ಮಿಕರಿಗೆ ಭದ್ರತೆ ನೀಡಬೇಕು.
5) ಆಟೊ ಟೆಕ್ನಿಷಿಯನ್‍ಗಳಿಗೆ ವರ್ಕ್‍ಶಾಪ್‍ಗಳನ್ನು ನಡೆಸಲು ನಿವೇಶನ ಮಂಜೂರು ಮಾಡಬೇಕು. ನೆನೆಗುದಿಗೆ ಬಿದ್ದ ಆಟೋನಗರ ಯೋಜನೆಯಲ್ಲಿನ ಮೂಲ ಸದಸ್ಯರಿಗೆ ನಿವೇಶನ ಕೂಡಲೇ ಒದಗಿಸಬೇಕು.
6) ಬೀದಿ ವ್ಯಾಪಾರಿಗಳ ಕಲ್ಯಾಣ ಸಮಿತಿ ರಚಿಸಿ, ಜೀವನ ಭದ್ರತೆ ನೀಡಬೇಕು.
7) ಕಟ್ಟಡ ಕಾರ್ಮಿಕರ ಯೋಜನೆಗಳನ್ನು ಪಾರದರ್ಶಕವಾಗಿ ಜಾರಿಗೊಳಿಸಬೇಕು. ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕಾನೂನುಬದ್ಧ ಸಹಾಯ ಬಿಡುಗಡೆ ಮಾಡಬೇಕು.
8) ಸೆ.22 ರಂದು ಹುಲಿಹೈದರ್ ಗ್ರಾಮದಲ್ಲಿ ವಾಲ್ಮೀಕಿ ಮೂರ್ತಿಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಅಮಾಯಕರಿಗೆ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಮುತುವರ್ಜಿವಹಿಸಬೇಕು.
9) ಬಲದಂಡೆ ಕಾಲುವೆಯಲ್ಲಿ ಮರಣ ಹೊಂದಿದ ನವಲಿ ಗ್ರಾಮದ ಐದು ಜನ ಕೃಷಿ ಮಹಿಳಾ ಕಾರ್ಮಿಕರಿಗೆ ಒಬ್ಬೊಬ್ಬರಿಗೆ ರೂ. 10 ಲಕ್ಷಗಳಂತೆ ಪರಿಹಾರ ಹಾಗೂ 02 ಎಕರೆ ಭೂಮಿ ಮಂಜೂರು ಮಾಡಬೇಕು.
10) ನೆನೆಗುದಿಗೆ ಬಿದ್ದ “ಕಾಯಕನಗರ” ಯೋಜನೆಯನ್ನು ಜಾರಿಗೊಳಿಸಿ ಗುಡಿಕೈಗಾರಿಕೆಗಳನ್ನು ಕುಶಲ ಕಾರ್ಮಿಕರಿಗೆ ನಿವೇಶನಗಳನ್ನು ಹಂಚಬೇಕು.
ಮೇಲಿನ ಹಕ್ಕೋತ್ತಾಯಗಳನ್ನು ಸರ್ಕಾರ ಪರಿಶೀಲಿಸಿ, ಕಾರ್ಮಿಕರಿಗೆ ನ್ಯಾಯಕೊಡುವವರೆಗೂ ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷ ಹಾಗೂ ಅಂಗ ಕಾರ್ಮಿಕ ಸಂಘಟನೆಗಳು ರಾಜೀರಹಿತ ಹೋರಾಟ ಮಾಡುತ್ತವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸರ್ಕಾರವನ್ನು ಎಚ್ಚರಿಸಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.