ಕೆ.ಎನ್.ಪಿ.ವಾರ್ತೆ,ನವದೆಹಲಿ,ಆ.22;

ಸಿಗರೇಟ್‌ ಮತ್ತು ಇತರೆ ತಂಬಾಕು ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಹೊಸ ಚಿತ್ರಸಹಿತ ಎಚ್ಚರಿಕೆಯನ್ನು ಪ್ರಕಟಿಸಬೇಕು. ಸೆ.1ರಿಂದಲೇ ಈ ಕ್ರಮ ಜಾರಿಗೆ ತರಬೇಕು ಎಂದು ಆರೋಗ್ಯ ಸಚಿವಾಲಯ ಆದೇಶಿಸಿದೆ.

‘ತಂಬಾಕಿನಿಂದ ಕ್ಯಾನ್ಸರ್‌ ಬರುತ್ತದೆ’, ‘ಯಾತನೆಯ ಸಾವಿಗೆ ತಂಬಾಕು ಕಾರಣ’ ಎನ್ನುವ ಅರ್ಥದ ಇಂಗ್ಲಿಷ್‌ ಸಂದೇಶಗಳನ್ನು ಕೆಂಪು ಬಣ್ಣದ ಹಿನ್ನೆಲೆಯಲ್ಲಿ ಬಿಳಿ ಬಣ್ಣದಲ್ಲಿ ಪ್ರಕಟಿಸಬೇಕು. ‘ಟೆಲಿಫೋನ್ ಕ್ವಿಟ್-ಲೈನ್ ಸಂಖ್ಯೆ ”QUIT TODAY CALL 1800-11-2356’ ‘ ಎಂಬುದಾಗಿ ಕಪ್ಪು ಹಿನ್ನೆಲೆಯ ಮೇಲೆ ಬಿಳಿ ಅಕ್ಷರದಲ್ಲಿ ಪ್ರಕಟಿಸಬೇಕು. ಇದು ಕಡ್ಡಾಯವಾಗಿದ್ದು, ಸಿಗರೇಟ್‌ ಮತ್ತು ತಂಬಾಕು ಪ್ಯಾಕೆಟ್‌ಗಳ ಮೇಲೆ ಪ್ರಕಟಿಸಬೇಕು. 

ತಂಬಾಕು ಬಿಡಬೇಕು ಎಂದು ಬಯಸುವ ಜನರು ಪ್ಯಾಕೆಟ್‌ ಮೇಲಿರುವ ಸಂಖ್ಯೆಗೆ ಕರೆ ಮಾಡಿದರೆ, ಆನ್‌ಲೈನ್‌ ಮೂಲಕ ನೆರವು ನೀಡುವ ವ್ಯವಸ್ಥೆ ರೂಪಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲಿನಿಂದಲೂ ಎಚ್ಚರಿಕೆಯ ಸಂದೇಶಗಳನ್ನು ಪ್ರಕಟಿಸುವ ಪರಿಪಾಠ ಜಾರಿಯಲ್ಲಿದೆ. ಆದರೆ, ಚಿತ್ರಗಳ ಮೂಲಕ ತಂಬಾಕು ಸೇವನೆಯ ಅಪಾಯ ಬಿಂಬಿಸುವ ಕ್ರಮ ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ಬಂದಿದೆ.

ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ನಿಯಮಗಳು, 2008 ರಲ್ಲಿ ತಿದ್ದುಪಡಿ ಮಾಡುವ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ತಂಬಾಕು ಉತ್ಪನ್ನಗಳಿಗೆ ನಿರ್ದಿಷ್ಟಪಡಿಸಿದ ಆರೋಗ್ಯ ಎಚ್ಚರಿಕೆಗಳನ್ನು ತಿಳಿಸಿದೆ.

ನಿಗದಿತ ಆರೋಗ್ಯ ಎಚ್ಚರಿಕೆ ಜಾರಿಗೆ ಬರುವ ದಿನಾಂಕದೊಂದಿಗೆ ಎರಡು ಚಿತ್ರಗಳನ್ನು ಸೂಚಿಸಲಾಗಿದೆ, ಪ್ರಾರಂಭದ ದಿನಾಂಕದಿಂದ 12 ತಿಂಗಳುಗಳು ಪೂರ್ಣಗೊಂಡ ನಂತರ ತಯಾರಿಸಿದ ಅಥವಾ ಆಮದು ಮಾಡಿಕೊಳ್ಳುವ ಎಲ್ಲಾ ತಂಬಾಕು ಉತ್ಪನ್ನಗಳಿಗೆ ಈ ನಿಯಮಾವಳಿ ಅನ್ವಯಿಸುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

‘ಟೆಲಿಫೋನ್ ಕ್ವಿಟ್-ಲೈನ್ ಸಂಖ್ಯೆ ”QUIT TODAY CALL 1800-11-2356’ ‘ ಸಹ ಆರೋಗ್ಯದ ಎಚ್ಚರಿಕೆಯ ಒಂದು ಭಾಗವಾಗಿದೆ. ಇದು ತಂಬಾಕು ಬಳಕೆದಾರರಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ ಮತ್ತು ನಡವಳಿಕೆಯ ಬದಲಾವಣೆಯನ್ನು ಉಂಟುಮಾಡಲು ಅವರಿಗೆ ಸಮಾಲೋಚನೆ ಸೇವೆಗಳಿಗೆ ಅವಕಾಶ ಒದಗಿಸುತ್ತದೆ. ಧೂಮ ಮತ್ತು ಧೂಮ ರಹಿತ ತಂಬಾಕು ಉತ್ಪನ್ನಗಳಿಗೆ ಸಾಮಾನ್ಯ ನಿರ್ದಿಷ್ಟ ಆರೋಗ್ಯ ಎಚ್ಚರಿಕೆ ಇರುತ್ತದೆ” ಎಂದು ಸಚಿವಾಲಯ ಹೇಳಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.