ಕೆ.ಎನ್.ಪಿ.ವಾರ್ತೆ,ಮುಂಡರಗಿ,ಜ.04;

ಸಾವಿತ್ರಿಬಾಯಿ ಫುಲೆ ಅವರು ಭಾರತದ ಮೊಟ್ಟಮೊದಲ ಶಿಕ್ಷಕಿಯಾಗಿ, ಸಾಮಾಜಿಕ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿ, ಮಹಿಳೆಯರು ಮನೆಯಿಂದ ಹೊರಬಂದು ಸಾಮಾಜಿಕ ಚಳವಳಿಯಲ್ಲಿ ಪಾಲ್ಗೊಳ್ಳಲು ಹಿಂಜರಿಯುತ್ತಿದ್ದ ಕಾಲದಲ್ಲಿ ಪತಿ ಜ್ಯೋತಿಬಾ ಫುಲೆ ಜೊತೆಗೂಡಿ 14 ಶಾಲೆಗಳನ್ನು ಸ್ಥಾಪಿಸಿ ಸಮಾಜ ಸುಧಾರಿಸಿದ ಮಹಾತಾಯಿ ಸಾವಿತ್ರಿಬಾಯಿ ಫುಲೆ ಮೊದಲ ಮಹಿಳೆ ಎಂದು ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಆಚರಣೆಯಲ್ಲಿ ಮಂಜುನಾಥ ಇಟಗಿ ಮಾತನಾಡಿದರು.

ನಗರದಲ್ಲಿ ಕನ್ನಡ ಕ್ರಾಂತಿ ಸೇನೆ ಮತ್ತು ವಿವೇಕ ಸಂಪತ್ ಸೇವಾ ಕೇಂದ್ರ ಸಹಯೋಗದಲ್ಲಿ ಭಾರತದ ಮೊಟ್ಟಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ಗುರುವಾರ ವಿವೇಕ ಸಂಪತ್ ಸೇವಾ ಕೇಂದ್ರದಲ್ಲಿ ಆಚರಿಸಲಾಯಿತು.

ಸ್ತ್ರೀಯರು ಸಹ ಪುರುಷರಂತೆ ಶಿಕ್ಷಣ ಪಡೆಯಬೇಕು ಎಂಬುದು ಈ ದಂಪತಿಗಳ ಬಯಕೆ. ಬಾಲ್ಯ ವಿವಾಹ, ಸತಿ ಸಹಗಮನ, ವಿಧವೆಯರಿಗೆ ಕೇಶ ಮುಂಡನ ಮುಂತಾದ ಸಾಮಾಜಿಕ ಅನಿಷ್ಟ ಪದ್ದತಿಗಳ ವಿರುದ್ಧ ಹೋರಾಟ ನಡೆಸಿದ ಅವರು, ಮಹಿಳೆಯರಿಗಾಗಿ ಶಾಲೆಗಳು, ಅಬಲಾಶ್ರಮಗಳನ್ನು ಸ್ಥಾಪಿಸಿದರು.

ಮಹಾರಾಷ್ಟ್ರದ ಕ್ಷಾಮ ಪೀಡಿತ ಪ್ರದೇಶದಲ್ಲಿ, ಪ್ಲೇಗ್ ಪೀಡಿತ ರೋಗಿಗಳ ಸೇವೆ ಸಲ್ಲಿಸಿದ ಅವರು ಧೀಮಂತ ಮಹಿಳೆ. ಅವರಿದ್ದ ಕಾಲ, ಅವರು ಎದುರಿಸಿದ ಸವಾಲುಗಳು, ಅವರು ಮಾಡಿದ ಕಾರ್ಯ, ಅವರ ವ್ಯಕ್ತಿತ್ವ ನಮಗೆಲ್ಲರಿಗೂ ಸ್ಪೂರ್ತಿ ತುಂಬಲಿ ಎಂದು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಂಜುನಾಥ ಇಟಗಿ ಮಾತನಾಡಿರು.

ಚಿಕ್ಕವಯಸ್ಸಿನಲ್ಲಿ ಮಹಿಳೆಯರು ಶಿಕ್ಷಣವಂತರಾಗಬೇಕು ಎಂಬುದು ಅವರ ಚಿಂತನೆಗಳು ಆಗಿದ್ದವು, ಮಹಿಳೆಯರು ಶಿಕ್ಷಣ ಕಲಿಯುವಾಗ ಸ್ತ್ರೀಯರ ಮೇಲೆ ಸಗಣಿ ಎರಚುವ ಶೋಷಿತ ದಿನಗಳಲ್ಲಿ ಭಾರತ ಮೊಟ್ಟಮೊದಲ ಶಿಕ್ಷಕಿಯಾಗಿ ಈ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಕನ್ನಡ ಕ್ರಾಂತಿ ಸೇನೆ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಮುಧೋಳ ಹೇಳಿದರು.

ಇದೇ ವೇಳೆ ಅಡಿವೆಪ್ಪ ಛಲವಾದಿ, ರಾಮಚಂದ್ರ ಡೋಣ್ಣಿ. ಪವನ ಛೋಪ್ರಾ, ಜಲಾಲ ಕೊಪ್ಪಳ, ಪ್ರಶಾಂತ್ ಕುಬಸದ, ಮನೋಜ ಗುಂಡಿಕೇರಿ, ಜೋಳದ ಇತರರು ಭಾಗವಹಿಸಿದ್ದರು.

ವರದಿ : ಕೋಗಳಿ ಶೇಖರ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.