ಕೆ.ಎನ್.ಪಿ.ವಾರ್ತೆ,ಹಾವೇರಿ,ಡಿ.13;

ಇಂದಿನ ಆಧುನಿಕ ಯುಗದಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಯುವಸಮುದಾಯದ ಪ್ರಮುಖ ಕರ್ತವ್ಯವಾಗಿದೆ ಎಂದು ಹಾಲಸ್ವಾಮಿ ಮಠದ ಸಣ್ಣ ಹಾಲಶಿವಯೋಗಿಗಳು ಹೇಳಿದರು.

ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಮೈಲಾರಲಿಂಗೇಶ್ವರ ಕಾರ್ತಿಕೋತ್ಸವದ ಅಂಗವಾಗಿ, ಬಸವೇಶ್ವರ ಅಭಿವೃದ್ಧಿ ಯುವಕ ಮಂಡಳಿಯವರು ಆಯೋಜಿಸಿದ್ದ ಭಾರೀ ಸವಾಲ್ ಜವಾಬ್ ಭಜನಾ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಟಿವಿ, ಧಾರಾವಾಹಿ, ಮೊಬೈಲ್ ಫೋನ್ ಗಳಿಂದ ಜಾನಪದ ಕಲೆಗಳು ಪ್ರೋತ್ಸಾಹದ ಕೊರತೆಯಿಂದ ನಶಿಸಿ ಹೋಗುತ್ತಿವೆ. ನಮ್ಮ ದೇಶೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಇಂದಿನ ಯುವ ಸಮುದಾಯದ ಪ್ರಮುಖ ಜವಾಬ್ದಾರಿಯಾಗಿದೆ.

ದಿನ ನಿತ್ಯದ ಸಾಂಸಾರಿಕ ಜೀವನದ ಜಂಜಾಟದಿಂದ ಬಸವಳಿದಿರುವ ಮನಸ್ಸುಗಳಿಗೆ ಇಂತಹ ಕಾರ್ಯಕ್ರಮಗಳಾದ ನಾಟಕ, ಬಯಲಾಟ, ಭಜನೆ, ಡೊಳ್ಳು ಪದ ಸೇರಿದಂತೆ ಇನ್ನಿತರ ಜಾನಪದ ಕಲಾ ಪ್ರಕಾರಗಳು ಮುದ ನೀಡಲಿವೆ ಎಂದು ಹೇಳಿದರು.

ನಂತರ ಪ್ರಥಮ ಬಹುಮಾನ ಪಡೆದ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕ ಬೀರವಳ್ಳಿ ಗ್ರಾಮದ ಕಲ್ಮೇಶ್ವರ ಭಜನಾ ಸಂಘ ಹಾಗೂ ದ್ವಿತೀಯ ಬಹುಮಾನ ಪಡೆದ ಮಿಶ್ರಿಕೋಟೆಯ ಕರಿಯಮ್ಮದೇವಿ ಭಜನಾ ಸಂಘಗಳ ನಡುವೆ ನಡೆದ ಭಾರೀ ಸವಾಲ್ ಭಜನಾ ಸ್ಫರ್ಧೆ ನೆರೆದವರ ಮನರಂಜಿಸುವಲ್ಲಿ ಯಶಸ್ವಿಯಾದವು.

ಕಾರ್ಯಕ್ರಮದಲ್ಲಿ ಪ್ರೋತ್ಸಾಹಕರಾದ ಹಾಲಪ್ಪ ಜಿಡ್ಡಿಬಾಗಿಲ, ಪುಟ್ಟಪ್ಪ ಕೋಡಿಹಳ್ಳಿ, ಶಂಕರ್ ಬಾಲಕ್ಕನವರ, ಬಸಪ್ಪ ಬಂಕಾಪುರ, ಪರಮೇಶ್ ಲೆಕ್ಕನಗೌಡ್ರ, ಶಿವಲಿಂಗಪ್ಪ ದಾಸಣ್ಣನವರ, ಗಣೇಶ ಕೋಡಿಹಳ್ಳಿ, ಗುಡ್ಡಪ್ಪ ಜಕ್ಕಲಿ, ಹೇಮಣ್ಣ ಪೂಜಾರ ಸೇರಿದಂತೆ ಬಸವೇಶ್ವರ ಅಭಿವೃದ್ಧಿ ಸಂಘದ ಯುವಕರು, ಸುತ್ತ ಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುರೇಶ್ ಕೋಳೂರ ಸ್ವಾಗತಿಸಿ, ಬಸವರಾಜ ಕನಕಪ್ಪನವರ ನಿರೂಪಿಸಿದರು.

ವರದಿ : ಮಂಜುನಾಥ ಆರ್ ಡಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.