ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಏ.04;
ಸಾಂಸ್ಕೃತಿಕ ಹಾಗೂ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು.
ಜಗಳೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಚುಟುಕು ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಸಾಂಸ್ಕೃತಿಕ ಹಾಗೂ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ರಾಜಶೇಖರ್ ಗುಂಡು ಕಟ್ಟಿ, ಗಿಡಕ್ಕೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಚುಟುಕು ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷೆ ಗೀತಾ, ನಮ್ಮಲ್ಲಿ ಅಡಗಿರುವಂತಹ ಸೂಕ್ತ ಪ್ರತಿಭೆಗಳನ್ನು ಭಾವನಾತ್ಮಕ ಸಂಬಂಧಗಳನ್ನು ಗರಿ ಬಿಚ್ಚಿ ಕವಲೊಡೆದು ಅಕ್ಷರದ ಮೂಲಕ ಪದಗಳಿಂದ ಸಾಲುಪಡೆದು ಕವಿತೆಯಾಗಿ ಹುಟ್ಟಿಕೊಳ್ಳುತ್ತದೆ.
ಕವಿತೆಯನ್ನು ಯಾರು ಕೂಡ ಬಲವಂತವಾಗಿ ಬರಿಯಲು ಸಾಧ್ಯವಿಲ್ಲ. ಅದು ಸಹಜವಾಗಿ ನಮ್ಮ ಮನಸ್ಸಿನಲ್ಲಿ ಹುಟ್ಟುವಂತಹ ಭಾವನಾತ್ಮಕ ಸಂಬಂಧ. ಇಂತಹ ಭಾವನಾತ್ಮಕ ಸಂಬಂಧವನ್ನು ಕಟ್ಟಿದಾಗ ಓದುಗನ ಮನಸ್ಸು ತಟ್ಟುತ್ತದೆ ಎಂದು ಹೇಳಿದರು.
ಈ ವೇಳೆ ಪ್ರಾಂಶುಪಾಲರಾದ ಬಿ.ಕೆ. ಬಸವರಾಜ್, ವೀರಭದ್ರಪ್ಪ ತೆಲಗಿ, ಶಿಕ್ಷಕರಾದ ಶಾಂತವೀರಪ್ಪ, ದೊಡ್ಮನಿ ಲೋಕರಾಜ್, ಟಿ. ವಿಧ್ಯಶ್ರೀ, ಲಕ್ಷ್ಮಿ, ಕೆ.ಎಸ್. ವೀರಭದ್ರಪ್ಪ, ರಮೇಶ್ ಹೆಬ್ಬಾಳ್, ಅಪ್ಪಾಜಿ. ಎ, ಇಂದಿರಮ್ಮ, ಚಂದ್ರ ವಾಗೀಶ್, ಟಿ.ಎಚ್. ಸಾವಿತ್ರಮ್ಮ ಸೇರಿದಂತೆ ಇತರೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ಮಹಮ್ಮದ್ ಅಬ್ದುಲ್ ರಖೀಬ್