ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಆ.20;

ರಾಜ್ಯ ಬಿಜೆಪಿ ಸರಕಾರದ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಮೊದಲ ಹಂತದಲ್ಲಿ 17 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪ್ರಮಾಣವಚನ ಸ್ವೀಕರಿಸಲಿರುವ ಸಚಿವರ ಅಂತಿಮ ಪಟ್ಟಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಮವಾರ ರಾತ್ರಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದ್ದಾರೆ.

ಜಾತಿ ಹಾಗೂ ಪ್ರದೇಶ ಆಧಾರದ ಮೇಲೆ ಸಂಪುಟ ರಚನೆ ಕಸರತ್ತನ್ನು ವರಿಷ್ಠರು ಪೂರ್ಣಗೊಳಿಸಿದ್ದಾರೆ. ಆದರೆ, ಯಡಿಯೂರಪ್ಪ ಅತ್ಯಾಪ್ತರು ಎಂದೆನಿಸಿಕೊಂಡ ಕೆಲವರು ಈ ಬಾರಿ ಸಂಪುಟದಿಂದ ಹೊರಗುಳಿದಿದ್ದು, ‘ಕ್ಲೀನ್‌’ ಕ್ಯಾಬಿನೆಟ್‌ ರಚನೆಗೆ ಹೈಕಮಾಂಡ್‌ ವಿಶೇಷ ಒತ್ತು ನೀಡಿದೆ ಎನ್ನಲಾಗುತ್ತಿದೆ.

ಇಂದು ಬೆಳಗ್ಗೆ 10.30ರಿಂದ 11.30ರ ನಡುವೆ 17 ಶಾಸಕರು ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ನೂತನ ಸಚಿವರ ಅಂತಿಮ ಪಟ್ಟಿ ಹೀಗಿದೆ : 

 1. ಗೋವಿಂದ ಕಾರಜೋಳ
 2. ಡಾ. ಅಶ್ವತ್ಥ ನಾರಾಯಣ
 3. ಲಕ್ಷ್ಮಣ ಸಂಗಪ್ಪ ಸಾವಡಿ
 4. ಕೆ.ಎಸ್‌.ಈಶ್ವರಪ್ಪ
 5. ಜಗದೀಶ್ ಶೆಟ್ಟರ್
 6. ಆರ್‌. ಅಶೋಕ್‌
 7. ಬಿ. ಶ್ರೀರಾಮುಲು
 8. ಸುರೇಶ್‌ ಕುಮಾರ್‌
 9. ವಿ ಸೋಮಣ್ಣ
 10. ಸಿ ಟಿ ರವಿ
 11. ಬಸವರಾಜ್ ಬೊಮ್ಮಾಯಿ
 12. ಕೋಟ ಶ್ರೀನಿವಾಸ್‌ ಪೂಜಾರಿ
 13. ಜೆ ಸಿ ಮಾಧುಸ್ವಾಮಿ
 14. ಸಿಸಿ ಪಾಟೀಲ್
 15. ಎಚ್ ನಾಗೇಶ್
 16. ಪ್ರಭು ಚೌಹಾಣ್‌
 17. ಶಶಿಕಲಾ ಜೊಲ್ಲೆ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.