ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಅ.30;

ನವೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಬ್ಯಾಂಕ್ ಸಿಬ್ಬಂದಿಗಳಿಗೆ ಸಾಲು ಸಾಲು ರಜೆ ಇದ್ದು, ಗ್ರಾಹಕರು ಆದಷ್ಟು ಬೇಗ ಬ್ಯಾಂಕ್ ವ್ಯವಹಾರಗಳನ್ನು ಮುಗಿಸಿಕೊಂಡರೆ ಒಳ್ಳೆಯದು. ಕೊನೆ ಕ್ಷಣದಲ್ಲಿ ಎಟಿಎಂನಲ್ಲೂ ಹಣ ಸಿಗಲಿಲ್ಲ ಎಂದು ದೂರುವುದು ತಪ್ಪುತ್ತದೆ. 

10 ದಿನಗಳ ಕಾಲ ಬ್ಯಾಂಕ್ ರಜೆ ಇರುವುದರಿಂದ ಹಬ್ಬದ ವೇಳೆಯಲ್ಲಿ ಹಣಕಾಸಿನ ಕೊರತೆ ಎದುರಾಗಬಹುದು. ಚೆಕ್ ಕ್ಲಿಯರೆನ್ಸ್, ನಗದು ಜಮೆಗೆ ತೊಂದರೆಯಾಗಬಹುದು. ಎ.ಟಿ.ಎಂ.ಗಳಲ್ಲಿಯೂ ಹಣದ ಕೊರತೆ ಉಂಟಾಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.

ಹೌದು, ನವಂಬರ್ ತಿಂಗಳಲ್ಲಿ ಕರ್ನಾಟಕ ರಾಜ್ಯೋತ್ಸವ, ದೀಪಾವಳಿ, ಈದ್ ಮಿಲಾದ್ ಜತೆಗೆ ವಾರದ ರಜೆಗಳು ಸೇರಿ ಬ್ಯಾಂಕ್‌ಗಳ ಬಾಗಿಲು ಒಟ್ಟು 10 ದಿನ ಮುಚ್ಚಿರುತ್ತವೆ.

ಪ್ರತಿ ಭಾನುವಾರ ಹಾಗೂ ತಿಂಗಳ ಎರಡನೇ ಮತ್ತು 4ನೇ ಶನಿವಾರದಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ನವೆಂಬರ್‌ನಲ್ಲಿ ಬರುತ್ತಿರುವ ಸಾಲು ಸಾಲು ರಜೆಗಳು ವಾರದ ಆರಂಭದಲ್ಲಿಯೇ ಬರುತ್ತಿರುವುದರಿಂದ ಈ ತಿಂಗಳಲ್ಲಿ ಹೆಚ್ಚು ದಿನ ಬ್ಯಾಂಕ್‌ ಕಾರ್ಯನಿರ್ವಹಿಸುವುದಿಲ್ಲ.

ಯಾವಾಗ ರಜೆ ?

ನ.1 (ಗುರುವಾರ) ಕರ್ನಾಟಕ ರಾಜ್ಯೋತ್ಸವ 

ನ.4 (ಭಾನುವಾರ)

ನ. 7,8 (ಬುಧವಾರ, ಗುರುವಾರ) ದೀಪಾವಳಿ 

ನ.10 (ಶನಿವಾರ) 2ನೇ ಶನಿವಾರ

ನ.11 (ಭಾನುವಾರ)

ನ.18 (ಭಾನುವಾರ)

ನ.21 (ಬುಧವಾರ) ಈದ್ ಮಿಲಾದ್ 

ನ.24 (ಶನಿವಾರ) 2ನೇ ಶನಿವಾರ

ನ.25 (ಭಾನುವಾರ)

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.