ಕೆ.ಎನ್.ಪಿ.ಲೇಖನ;

ಭಾರತ ರತ್ನ ಪಡೆದವರಷ್ಟೇ ಭಾರತ ರತ್ನಗಳಲ್ಲಾ….ಈ ದೇಶದ ಮಣ್ಣಿಗಾಗಿ, ಈ ದೇಶದ ಸೇವೆಗಾಗಿ, ಈ ದೇಶದ ಏಳ್ಗೆಗಾಗಿ ತುಡಿಯುವ ಮಿಡಿಯುವ ಪ್ರತಿಯೊಂದು ಮನಸ್ಸುಗಳು ಭಾರತ ರತ್ನಗಳೆ ಎಂಬ ಗವಿಶ್ರೀಗಳ ಮಾತು ಅಕ್ಷರ ಸಹ ಸತ್ಯ..

ಇಲ್ಲಿ ನಾವು ಹೇಳಲು ಹೋರಟಿರುವದು ಒಂದು ಚಿಕ್ಕ ಗೋಬಿ ಮಂಚೂರಿ ಅಂಗಡಿ ನಡೆಸುವ ಒಬ್ಬ ಸಾಮಾನ್ಯ ಯುವಕ ಸುರೇಶ ಸಂಕನಾಳ ಕುರಿತು..

ಪ್ರತಿ ವರ್ಷ ಅಗಸ್ಟ್ 15 ಮತ್ತು ಜನವರಿ 26 ರಂದು ಶಾಲಾ ಹಾಗೂ ಕಾಲೇಜು ಮಕ್ಕಳಿಗೆ ಕ್ಯಾಮಲ್ ಪೇಂಟ್ ನಿಂದ ಕೆನ್ನೆ ಮತ್ತು ಕೈಗಳ ಮೇಲೆ ರಾಷ್ಟ್ರಧ್ವಜದ ಸಂಕೇತವನ್ನ ಹಚ್ಚೆ ಹಾಕುವ ಮೂಲಕ ಅವರಿಗೆ ದೇಶ ಪ್ರೇಮ ಮೂಡಿಸುವ ಕೆಲಸವನ್ನು ಸುರೇಶ ಸಂಕನಾಳ ಮಾಡುತ್ತಾರೆ.

ಸದ್ದಿಲ್ಲದೆ ಶುದ್ದ ಮನಸಿನಿಂದ ತಮ್ಮಿಂದಾಗುವಷ್ಟು ಚಿಕ್ಕ ಸೇವೆ ನೀಡುವರ ಸಾಲಿನಲ್ಲಿ ನಮ್ಮೂರ ಹುಡುಗ ಸುರಿ ಸಂಕನಾಳ : ಸ್ವಾಮಿ ನವಲಿ

ಅಂದಿನ ದಿನ ಶಾಲಾ ಕಾಲೇಜು ಮಕ್ಕಳೆಲ್ಲಾ ಇವರ ಹತ್ತಿರ ಹಚ್ಚೆ ಹಾಕಿಸಿಕೊಳ್ಳಲು ಒಡೋಡಿ ಬರುತ್ತಾರೆ., ಹಾಗೆ ಶಾಲಾ ಮಕ್ಕಳಿಗೆ ಸುರೇಶ ಸಂಕನಾಳ ಅಚ್ಚುಮೆಚ್ಚಿನ ಗೋಬಿ ಸುರೇಣ್ಣ. ಬಡ ಮಕ್ಕಳಿಗೆ ಆಗಾಗ ಉಚಿತವಾಗಿ ಗೋಬಿ ನೀಡಿದ್ದುಂಟು, ಊರಿನ ಯುವಕರಿಗೂ ಇವ ಸ್ನೇಹ ಜೀವಿ., ಅದೆನೇ ಇರಲಿ ಕಾರ್ಯ ಚಿಕ್ಕದಾಗಿದ್ದರು ರಾಷ್ಟ್ರ ಹಬ್ಬದ ದಿನದಂದು ಒಂದು ಗ್ರಾಮದಲ್ಲಿ ದೇಶದ ಕುರಿತಾದ ಜಾಗೃತಿ ಕಾರ್ಯಮಾಡುವ ಯುವ ಮನಸ್ಸು ಇದೆಯಲ್ಲ ಅದು ಶ್ಲಾಘನೀಯ..

ಇಂತದ್ದೆ ಅಲ್ಲದೆ ಗ್ರಾಮಗಳಲ್ಲಿ ಯಾವುದೇ ಸ್ವಾರ್ಥ ಮನೋಭಾವವಿಲ್ಲದೆ ಯುವ ಮಿತ್ರರು ಅನೇಕ ಸಣ್ಣ ಪುಟ್ಟ ರಾಷ್ಟ್ರ ನಿರ್ಮಾಣದ ಜಾಗೃತ ಕಾರ್ಯಗಳನ್ನ ಮಾಡುತ್ತಾ ಹೋದರೆ., ಭಾರತ ಮತ್ತೊಮ್ಮೆ ಸಶಕ್ತವಾಗುದರಲ್ಲಿ ಸಂದೇಹವೆ ಇಲ್ಲಾ., ಹಾಗಂತಾ ಎಲ್ಲಾ ಹಳ್ಳಿಯ ಯುವ ಜನತೆ ಪೇಂಟ್ ಬಡಿಬೇಕಾ ಎನ್ನುವದಲ್ಲಾ..,

ನಮ್ಮ ನಮ್ಮ ಗ್ರಾಮಗಳಲ್ಲಿ ನಲ್ಲಿ ನೀರು ಸೋರುತ್ತಿರುವದು ಕಂಡು ಬಂದರೆ ತಕ್ಷಣ ಅದನ್ನು ಬಂದ್ ಮಾಡುವದು., ಶಾಲಾ ಕಾಲೇಜು ಮಕ್ಕಳು ನಡು ರಸ್ತೆಯಲ್ಲಿ ಜುಜಾಡುತಿದ್ದರೆ ತಿಳಿ ಹೇಳುವದು., ನಮ್ಮೂರಿನ ಶಾಲೆಗಳಲ್ಲಿ ರಾತ್ರಿ ಸಮಯ/ರಜೆ ಸಮಯದಲ್ಲಿ ನಡೆಯುವ ಅನೈತಿಕತೆಗಳ ಬಗ್ಗೆ ತಡೆಹಿಡಿಯುವದು., ಮಧ್ಯಪಾನ ಕುರಿತು ಜಾಗೃತಿ., ರಸ್ತೆಗಳಲ್ಲಿ ಬಿದ್ದ ಒಡೆದ ಗಾಜು, ಕಲ್ಲು ಮುಳ್ಳುಗಳನ್ನ ತೆಗೆಯುವದು. ಕಲೆ ಸಂಸ್ಕೃತಿಗೆ ಸಹಕಾರ ನೀಡುವದು, ಕಷ್ಟದಲ್ಲಿರುವವರಿಗೆ ಚಿಕ್ಕ ಸಹಾಯ ಮಾಡುವದು ಮತ್ತು ಅನೇಕ ಸಣ್ಣ ಪುಟ್ಟ ಸ್ವಚ್ಚ ಕಾರ್ಯಗಳನ್ನ ಗ್ರಾಮದ ಯುವ ಜನತೆ ಮಾಡುತ್ತಾ ಹೋದರೆ ಅದೇ ಅವರು ದೇಶಕ್ಕೆ ನೀಡುವ ದೊಡ್ಡ ಕೊಡುಗೆಯಾಗಿ ನಿಲ್ಲುತ್ತದೆ.,

ಸ್ವಾಮಿ ವಿವೇಕಾನಂದರು ಹೇಳುವಂತೆ ಈ ದೇಶದ ಪರಿಶುದ್ಧ ಮನಸ್ಸಿನ ಯುವಕರೆ ಈ ದೇಶ ನಿರ್ಮಾಣದ ಆಸ್ತಿ ಎಂದಿದ್ದಾರೆ..,

ಹಾಗೇ ಮಹಾತ್ಮ ಗಾಂಧಿಜಿಯವರು ಕೂಡ ಹಳ್ಳಿಗಳ ಸಹಕಾರದಿಂದ ದೇಶದ ಅಭಿವೃದ್ದಿ ಸಾಧ್ಯ ಎಂದಿರುವ ಮಾತು ಸುಳ್ಳಲ್ಲಾ..

(ಸುರಿ ಎಂಬ ಯುವ ಮಿತ್ರನ ಕಾರ್ಯದೊಂದಿಗೆ ಇದು ಅನಿಸಿಕೆಯ ಅಭಿಪ್ರಾಯದ ಬರವಣಿಗೆಯಷ್ಟೆ., ಧನ್ಯವಾದಗಳು)

ವರದಿ : ಸ್ವಾಮಿ ನವಲಿ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.