ಕೆ.ಎನ್.ಪಿ.ವಾರ್ತೆ,ಗಜೇಂದ್ರಗಡ,ಜು.26;

ಸಮೀಪದ ನೆಲ್ಲೂರ ಗ್ರಾಮದ ಕನ್ನಡ ಶಾಲೆಯ ಹಿಂದಿನ ರಸ್ತೆ ಹಾಗೂ ಸುತ್ತಮುತ್ತಲು ಇರುವ ರಸ್ತೆಗಳಲ್ಲಿ ಸ್ವಲ್ಪ ಮಳೆಯಾದರೂ ನೀರು ಹೊಂಡದಂತೆ ನಿಲ್ಲುತ್ತದೆ.

ಸಾರ್ವಜನಿಕರ ಜೀವನ ಗುಂಡಿಮಯವಾಗಿದೆ. ಇದರಲ್ಲೇ ಜೀವನ ಸಾಗಿಸುವುದು ಅನಿವಾರ್ಯವಾಗಿದೆ. ವಾರ್ಡಿನ ಚುನಾಯಿತ ಸದಸ್ಯರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಜನರು ನಿತ್ಯ ಪರದಾಡುವಂತಾಗಿದೆ ಎಂದು ಗ್ರಾಮುದ ಯುವ ಮುಖಂಡರಾದ ಪ್ರಶಾಂತ ಗಾಳಿಪೂಜಿಮಠ, ವೀರಪ್ಪ ಗಟ್ಟಿ, ಶಿವಯ್ಯ ಕುರಹಟ್ಟಿ, ಶರಣಪ್ಪ ಮಡಿವಾಳರ ಗ್ರಾಮ ಪಂಚಾಯ್ತಿ ವಿರುದ್ಧ ಆರೋಪಿಸಿದರು.

ಈ ಓಣಿಯಲ್ಲಿ ಮಧ್ಯಮ ವರ್ಗದ ಹಾಗೂ ಬಡ ಜನರೇ ವಾಸಿಸುತ್ತಿದ್ದಾರೆ ಆದ್ದರಿಂದ ಮೂಲಸೌಕರ್ಯಗಳು ಮರೀಚಿಕೆಯಾಗಿವೆ. ಪ್ರಮುಖವಾಗಿ ಇಲ್ಲಿನ ರಸ್ತೆಗಳು ಅಭಿವೃದ್ಧಿಯಾಗಿಲ್ಲ. ನೀರು ಹರಿದು ಹೋಗಲು ಸುಸಜ್ಜಿತ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ನೀರು ರಸ್ತೆ ಮೇಲೆ ಹರಿಯುತ್ತದೆ.

ಪ್ರತಿನಿತ್ಯ ಶಾಲೆಗೆ ಹೋಗುವ ಪುಟ್ಟಮಕ್ಕಳು ಇಲ್ಲಿನ ರಸ್ತೆಯ ಮೇಲಿನ ನೀರಿನಲ್ಲಿ ಬಿದ್ದಿರುವ ಉದಾಹರಣೆಗಳು ಸಾಕಷ್ಟಿವೆ. ಈ ಕುರಿತು ಹಲವು ಬಾರಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಸರಿಪಡಿಸುವ ಗೋಜಿಗೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ರಸ್ತೆಯಲ್ಲೇ ನೀರು ಸಂಗ್ರಹವಾಗಿರುವುದರಿಂದ ಸೊಳ್ಳೆಗಳ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳ ಭೀತಿ ಸ್ಥಳೀಯ ವಾಸಸ್ಥರನ್ನು ಕಾಡಿದೆ. ಸಮಸ್ಯೆ ಗೊತ್ತಿದ್ದರೂ ಪರಿಹರಿಸಿದೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳು ಹಾಗೂ ಸ್ಥಳೀಯ ನಾಯಕರ ವಿರುದ್ಧ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವರದಿ : ಚಂದ್ರು ಎಂ. ರಾಥೋಡ್

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.