ಕೆ.ಎನ್.ಪಿ.ವಾರ್ತೆ,ಹಾವೇರಿ,ನ.30;

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ ದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಹಲಗೇರಿ ಇಂದು ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ ದ ಹಾರೋಗೊಪ್ಪ, ಬಿಲ್ಲಳ್ಳಿ, ದಂಡಿಗೆಹಳ್ಳಿ, ಕೂಲಿ, ತುಮ್ಮಿನಕಟ್ಟಿ ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ಮನೆಮನೆಗೆ ತೆರಳಿ ಮತಯಾಚಿಸಿದರು.

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ : ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಹಲಗೇರಿ ಭರ್ಜರಿ ಮತಯಾಚನೆ

ಈ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಣೆಬೆನ್ನೂರು ಮತ ಕ್ಷೇತ್ರದ ಶಾಸಕರಾಗಿ ಅನರ್ಹಗೊಂಡ ಆರ್ ಶಂಕರ್, ಮತ ಕ್ಷೇತ್ರದ ಜನತೆಯಿಂದ ಛೀಮಾರಿಗೆ ಒಳಗಾಗಿರುವ ಆರ್ ಶಂಕರ್, ಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಶ್ರಮಿಸಿದ್ದಾರೆ ಎಂದು ಮತದಾರಿಗೆ ಗೊತ್ತಿದೆ.

ಕ್ಷೇತ್ರದ ಅಭಿವೃದ್ಧಿಗೋಸ್ಕರ ಅಥವಾ ರೈತರ ಸಾಲ ಮನ್ನಾಗೋಸ್ಕರ, ನಿರುದ್ಯೋಗಿ ಯುವಕರಿಗಾಗಿ ಬೃಹತ್ ಕೈಗಾರಿಕೆ, ಕಾರ್ಖಾನೆ ಸ್ಥಾಪಿಸುವ ಗೋಸ್ಕರ ಶಾಸಕ ಸ್ಥಾನ ಬಿಟ್ಟವರಲ್ಲ ಅವರು ಪಕ್ಷಾಂತರಗೊಂಡು ಸ್ವಂತ ಅಭಿವೃದ್ಧಿಗಾಗಿ ಬಿಜೆಪಿ ಸೇರಿಕೊಂಡು ಕ್ಷೇತ್ರಕ್ಕೆ ಅನ್ಯಾಯವೆಸಗಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ತಂಭವಾದ ಜನ ಇದ್ದಾರೆ. ಕ್ಷೇತ್ರದ ಮತದಾರ ಬಾಂಧವರು ಈ ಬಾರಿ ಇತಿಹಾಸ ಸೃಷ್ಟಿ ಮಾಡಲಿದ್ದಾರೆ.

ಕುಮಾರಸ್ವಾಮಿಯವರು ಕೈಗೊಂಡ ಯೋಜನೆಗಳಿಂದ ಕ್ಷೇತ್ರದ ಮತದಾರರು ನಮಗೆ ಅಪಾರವಾದ ಬೆಂಬಲ ನೀಡುತ್ತಿದ್ದಾರೆ.

ಮತಕ್ಷೇತ್ರ ನನ್ನ ಆಯ್ಕೆಯಿಂದ ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ಜನಪರ ಕೆಲಸಗಳನ್ನು ಮಾಡಲು ಅವಕಾಶ ನೀಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಕೆ.ಎಸ್. ಸಿದ್ದಬಸಪ್ಪ ಯಾದವ್, ರಾಜ್ಯ ಕಾರ್ಯದರ್ಶಿಯಾದ ಶಿವಕುಮಾರ್ ಮಠದ, ಶ್ರೀಶೈಲ ಹಿರೇಬಿದರಿ,
ದಿನೇಶ್ ಪಾಟೀಲ್, ಶಂಕ್ರಣ್ಣ ಹಾದಿಮನಿ, ಮಲ್ಲೇಶಪ್ಪ ಹಲಗೇರಿ, ತಿಮ್ಮಣ್ಣ ವೆಂಕಣ್ಣನವರ, ಉಜ್ಜನಗೌಡ ಲಿಂಗದಳ್ಳಿ, ಹೇಮಾ ರಾಣಿಬೆನ್ನೂರ್, ಪ್ರಶಾಂತ್ ಪಾಟೀಲ್, ಶಶಿಕಲಾ ವರುಣ್ ಕಾರ್ಯಕರ್ತರು ಮತಯಾಚನೆಯಲ್ಲಿ ಭಾಗವಹಿಸಿದ್ದರು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.