ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಜು.21;
ರೈತರು ಭಿಕಾರಿಗಳಲ್ಲ ನಮಗೆ ಸಾಲಮನ್ನಾ ಮಾಡುವ ಅವಶ್ಯಕತೆಯೂ ಇಲ್ಲ, ಸರ್ಕಾರವು ನಾವು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡಲಿ ಸಾಕು. ಬ್ಯಾಂಕ್‍ಗಳಲ್ಲಿ ಬಡ್ಡಿ ಬಿಡುವ ಅವಶ್ಯಕತೆ ಇಲ್ಲ. ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಲಿ ಎಂದು ರೈತರ ಜಿಲ್ಲಾಧ್ಯಕ್ಷರಾದ ಐನಾಥ್ ರೆಡ್ಡಿ ಹೇಳಿದರು.
ಅಖಂಡ ಕರ್ನಾಟಕ ರೈತಸಂಘ ಹಾಗೂ ತುಂಗಭದ್ರ ರೈತ ಸಂಘದ ಜಂಟಿ ಆಶ್ರಯದಲ್ಲಿ ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ನಡೆದ ರಾಜ್ಯ ರೈತ ಸಮಾವೇಶವನ್ನು ಅನೇಕ ರೈತ ಮುಖಂಡರು, ಮಠಾಧೀಶರು, ಸಮಾಜ ಚಿಂತಕರು ಹಾಗೂ ನೀರಾವರಿ ಅಧಿಕಾರಿಗಳು ಉದ್ಘಾಟನೆ ಮಾಡಿದರು.
ಬೆಳಿಗ್ಗೆ ನಗರ ದೇವತೆ ಶ್ರೀಕನಕದುರ್ಗಮ್ಮದೇವಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಬಸವಭವನದಲ್ಲಿ ನಡೆದ ಸಮಾವೇಶಕ್ಕೆ ಕಾಲ್ನಡಿಗೆಯಲ್ಲಿ ಬಂದರು.
ಅನೇಕ ಜಿಲ್ಲೆಗಳಿಂದ ಬಂದ ಸಾವಿರಾರು ರೈತರು, ರೈತಮುಖಂಡರು, ಸಮಾವೇಶದಲ್ಲಿ ಭಾಗವಹಿಸಿದ್ದರು.
ವೇದಿಕೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ನಂತರ ಮಾತನಾಡಿದ ರೈತ ಮುಖಂಡ ಜಿಲ್ಲಾಧ್ಯಕ್ಷ ಐನಾಥರೆಡ್ಡಿ, ರೈತರ ಸಾಲಮನ್ನಾ ಮಾಡುವುದು ಬೇಡ. ಅವರು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ನೀಡಿದರೆ ಸಾಕು ಎಂದರು.
ರೈತರಿಗೆ ಸಾಲ ನೀಡಿರುವುದು ಏಕೆ ? ಬೆಳೆ ಬೆಳೆಯಲು, ದೇಶಕ್ಕೆ ಅನ್ನ ನೀಡು ಎಂದು ರೈತರಿಗೆ ಸಾಲವನ್ನು ನೀಡಿದ್ದಾರೆ. ಕೃಷಿ ಸಾಲ ನೀಡಿದ್ದಾರೆಯೇ ಹೊರತು, ರೈತರ ಮಗಳ ಮದುವೆಗೆ ಅಲ್ಲ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಬೆಳೆಸಾಲ ನೀಡಿ, ಅದಕ್ಕೆ ಬಡ್ಡಿ ಹಾಕಿ, ಸಾಲ ಮನ್ನಾ ಮಾಡುವುದಿಲ್ಲ ಎಂದು ಈಗ ಅನೇಕ ನಿಬಂಧನೆಗಳನ್ನು ಹಾಕಿದ್ದಾರೆ. ಸಾಲಮನ್ನಾ ಮಾಡುವುದಾದರೆ ಸಂಪೂರ್ಣ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಸಾವಿರಾರು ಜನ ರೈತರು ಭಾಗವಹಿಸಿದ್ದರು. ಹಾಗೂ ಈ ಸಮಾವೇಶವು ದರೂರ್ ಪುರುಷೋತ್ತಮ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ವರದಿ : ಟಿ.ಗಣೇಶ್
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.