ಕೆ.ಎನ್.ಪಿ.ವಾರ್ತೆ,ದುಬೈ,ಜ.29;

ಐಸಿಸಿ 2020 ರ ಟಿ20 ವಿಶ್ವಕಪ್ ಕ್ರಿಕೆಟ್ ಕ್ರೀಡಾಕೂಟದ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆಗೊಳಿಸಿದೆ.

ಐಸಿಸಿ ಪುರುಷರ ಹಾಗೂ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ 2ನೇ ಗುಂಪಿನಲ್ಲಿದೆ.

ಇದೇ ಗುಂಪಿನಲ್ಲಿ ಇಂಗ್ಲೆಂಡ್, ಸೌತ್ಆಫ್ರಿಕಾ ಹಾಗೂ ಆಫ್ಘಾನಿಸ್ತಾನ ತಂಡಗಳಿವೆ. 2020ರ ಆಕ್ಟೋಬರ್ 24 ರಿಂದ ನವೆಂಬರ್ 15 ರ ವರೆಗೆ ಪುರುಷರ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ.

ನವೆಂಬರ್ 11, 12 ರಂದು 2 ಸೆಮಿಫೈನಲ್ ಪಂದ್ಯಗಳು ನಡೆಯಲಿದೆ. ಇನ್ನು ಫೈನಲ್ ಪಂದ್ಯ ನವೆಂಬರ್ 15 ರಂದು ನಡೆಯಲಿದೆ. ಇದಕ್ಕೂ ಮುನ್ನ ಅಕ್ಟೋಬರ್ 18 ರಿಂದ 23ರ ವರೆಗೆ ಪುರುಷರ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದೆ. ಮಹಿಳಾ ವಿಶ್ವಕಪ್ ಟೂರ್ನಿ ಫೆಬ್ರವರಿ 21 ರಿಂದ ಮಾರ್ಚ್ 8 ವರೆಗೆ ನಡೆಯಲಿದೆ.

ಆಸ್ಟ್ರೇಲಿಯಾದಲ್ಲಿ ಸುಮಾರು 13 ಸ್ಥಳಗಳಲ್ಲಿ ಪಂದ್ಯ ನಡೆಯಲಿದ್ದು, ತಂಡಗಳನ್ನು ಎರಡು ಗುಂಪುಗಳಾಗಿ ಮಾಡಲಾಗಿದೆ.

ಗ್ರೂಪ್ ಎ ತಂಡಗಳು

ಪಾಕಿಸ್ತಾನ
ಆಸ್ಟ್ರೇಲಿಯಾ
ವೆಸ್ಟ್ ಇಂಡೀಸ್
ನ್ಯೂಜಿಲೆಂಡ್
ಫಸ್ಟ್ ರೌಂಡ್ ಗ್ರೂಪ್ ಎ ಟೀಂ 1
ಫಸ್ಟ್ ರೌಂಡ್ ಗ್ರೂಪ್ ಬಿ ಟೀಂ 2

ಗ್ರೂಪ್ ಬಿ ತಂಡಗಳು

ಭಾರತ
ದ.ಆಫ್ರಿಕಾ
ಇಂಗ್ಲೆಂಡ್
ಅಫ್ಘಾನಿಸ್ತಾನ
ಫಸ್ಟ್ ರೌಂಡ್ ಗ್ರೂಪ್ ಬಿ ಟೀಂ 1
ಫಸ್ಟ್ ರೌಂಡ್ ಗ್ರೂಪ್ ಎ ಟೀಂ 2

ಭಾರತಕ್ಕೆ ಮೊದಲ ಪಂದ್ಯ ಪರ್ತ್ ನಲ್ಲಿ ಅಕ್ಟೋಬರ್ 24 ರಂದು ದ.ಆಫ್ರಿಕಾ ವಿರುದ್ಧ ನಡೆಯಲಿದೆ. ಫೈನಲ್ ಪಂದ್ಯ ನವಂಬರ್ 15 ರಂದು ಎಂಸಿಜಿ ಮೈದಾನದಲ್ಲಿ ನಡೆಯಲಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.