ಕೆ.ಎನ್.ಪಿ.ವಾರ್ತೆ,ಹಾವೇರಿ,ನ.07;

ಪ್ರಕೃತಿಯಲ್ಲಿ ದೈವತ್ವ ಕಾಣುವ ಸಂಸ್ಕೃತಿ ಭಾರತೀಯರದ್ದು ಎಂದು ರಂಭಾಪುರಿ ಜಗದ್ಗುರುಗಳು ಹೇಳಿದರು.

ಸಕಲ ಚರಾಚರ ವಸ್ತುಗಳನ್ನೊಳಗೊಡಂತೆ ಪ್ರಕೃತಿಯಲ್ಲಿ ದೈವತ್ವ ಕಾಣುವ ಸಂಸ್ಕೃತಿಯನ್ನು ಹೊಂದಿರುವುದು ಭಾರತೀಯರು ಮಾತ್ರ ಎಂದು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಗುತ್ತಲ ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಗುರುವಾರ ಜರುಗಿದ ಎರಡನೆಯ ದಿನದ ಇಷ್ಟಲಿಂಗ ಪೂಜೆಯನ್ನು ನೇರವೇರಿಸಿ ಭಕ್ತರಿಗೆ ಆರ್ಶೀವಚನ ನೀಡಿದರು. 

ವೀರಶೈವ ಧರ್ಮ ಕೇವಲ ಬೋಧನೆಗೆ ಸಿಮೀತವಾಗದೆ ಆಚರಣೆ ಮಾಡುವುದಾಗಿದೆ. ಬ್ರಹ್ಮ ಋಷಿಗಳಾದಿಯಾಗಿ ಶಿವನ ಆರಾಧನೆ ಮಾಡಿದವರಾಗಿದ್ದಾರೆ. 

ಸನಾತನವಾದ ಧರ್ಮ ನೆಲೆಯನ್ನು ಹೊಂದಿರುವ ವೀರಶೈವ ಧರ್ಮವನ್ನು ರೇಣುಕಾದಿ ಪಂಚಾಚಾರ್ಯರು ಬಸವಾದಿ ಶಿವ ಶರಣರು ಒಪ್ಪಿಕೊಂಡು ಅಪ್ಪಿಕೊಂಡು ಬಂದವರಾಗಿದ್ದಾರೆ. 

ಇಂತಹ ನಡೆ ನುಡಿ ಒಂದಾಗಿರುವ ಪರಂಪರೆಯನ್ನು ಪ್ರತಿಯೊಬ್ಬರು ಕೂಡ ಧರ್ಮ ಮಾರ್ಗದಲ್ಲಿ ನಡೆದು ಸದ್ಗತಿ ಕಾಣಬೇಕೆಂದರು.

ಸಮಾರಂಭದಲ್ಲಿ ಗುತ್ತಲ ಕಲ್ಮಠದ ಗುರುಶಿದ್ದ ಸ್ವಾಮೀಜಿ ಮಾತನಾಡಿ, ಗುರುವಿನ ಒಲುಮೆಯಿಂದ ಸಕಲ ಕಾರ್ಯಗಳಲ್ಲಿ ಯಶಸ್ಸು ಲಭಿಸುತ್ತದೆ. ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾ ಪೂಜೆಯನ್ನು ನೋಡುವುದೇ ಒಂದು ಮಹಾನಂದವಾಗುವುದು.

ಅಂತರಂಗದಲ್ಲಿ ಮಾಡುತ್ತಿದ್ದ ಪೂಜೆಯನ್ನು ಭಕ್ತರೋದ್ಧಾರಕ್ಕಾಗಿ ಬಹಿರಂಗವಾಗಿ ಪೂಜೆ ಮಾಡುತ್ತಿದ್ದಾರೆ. ಭಕ್ತರಿಗೆ ಪೂಜೆ ಎಂದರೇನು ಪೂಜಾ ವಿಧಿ ವಿಧಾನಗಳು ಹೇಗೆ ಎಂಬುದನ್ನು ತೋರಿಸಿಕೊಟ್ಟರು ಎಂದರು.

ಅಮ್ಮಿನಭಾವಿ ಪಂಚಗ್ರಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಬೆಳಗುಂಪ ಹಿರೇಮಠದ ಅಭಿನವ ಪರ್ವತೇಶ್ವರ ಶಿವಾಚಾರ್ಯ ಸ್ವಾಮೀಜಿ, ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಜಿ.ಪಂ.ಸದಸ್ಯ ಸಿ.ಬಿ ಕುರುವತ್ತಿಗೌಡ್ರ, ಪಿ.ಎನ್. ನೆಗಳೂರ ಮಠ, ಕೆ.ಬಿ.ಕೂವಳ್ಳಿಮಠ, ಮುತ್ತಣ್ಣ ಯಲಿಗಾರ, ಪಿ.ಎನ್.ಹೇಮಗಿರಿ ಮಠ, ಮಂಜುನಾಥ ಎರವಿನತೆಲಿ, ಪ್ರಕಾಶ ಹೊನ್ನಮ್ಮನವರ, ಮುತ್ತಯ್ಯ ರಿತ್ತಿಮಠ, ರಾಜಶೇಖರ ಕೂಡ್ಲಮಠ, ಗದಿಗಯ್ಯಸ್ವಾಮಿ ಹಿರೇಮಠ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಪಾಲ್ಗೊಂಡಿದ್ದರು.

ವರದಿ : ಗುರುಶಾಂತಸ್ವಾಮಿ ಹಿರೇಮಠ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.