ಕೆ.ಎನ್.ಪಿ.ವಾರ್ತೆ,ಲಂಡನ್,ಮಾ.10;

ಭಾರತದ ದೇಶಭ್ರಷ್ಟ ವಜ್ರದ ವ್ಯಾಪಾರಿ ನೀರವ್ ಮೋದಿ ಗಡೀಪಾರಿಗೆ ಸಂಬಂಧಿಸಿದ ಭಾರತದ ಕೋರಿಕೆಯನ್ನು ಯುನೈಟೆಡ್ ಕಿಂಗ್‌ಡಂನ ಗೃಹ ಕಾರ್ಯದರ್ಶಿ ಸಾಜಿದ್ ಜಾವಿದ್‌ ಪ್ರಮಾಣೀಕರಿಸಿದ್ದು, ಲಂಡನ್ ಕೋರ್ಟಿಗೆ ಮಾಹಿತಿ ಸಲ್ಲಿಸಿದ್ದು, ಭಾರತ-ಯುಕೆ ಗಡೀಪಾರು ಒಪ್ಪಂದಗಳನ್ವಯ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಕಾಗದ ಪತ್ರಗಳ ಸಿದ್ಧತೆ ನಡೆಯುತ್ತಿದೆ. ನೀರವ್ ಮೋದಿ ವಿರುದ್ಧ ಗಡೀಪಾರು ವಾರಂಟ್ ಶೀಘ್ರವೇ ಜಾರಿ ಮಾಡಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಲಂಡನ್ ಕೋರ್ಟಿನಲ್ಲಿ ಗುರುವಾರ ನಡೆದ ಬೆಳವಣಿಗೆಗಳನ್ನು ಭಾರತದ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಕೆಲವೇ ವಾರಗಳಲ್ಲಿ ನೀರವ್ ಮೋದಿ ಬಂಧನವಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

13,500 ಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣದಲ್ಲಿ ನೀರವ್ ಮೋದಿ ಭಾರತಕ್ಕೆ ಬೇಕಾಗಿದ್ದು, ದೇಶಬಿಟ್ಟು ಪರಾರಿಯಾಗಿದ್ದಾನೆ. ಪ್ರಸ್ತುತ ಲಂಡನ್‌ನಲ್ಲಿ ವೈಭವೋಪೇತ, ಮಾಸಿಕ 17,000 ಪೌಂಡ್‌ಗಳ ಮಾಸಿಕ ಬಾಡಿಗೆಯ ಬಂಗಲೆಯಲ್ಲಿ ವಾಸಿಸುತ್ತಿದ್ದಾನೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.