ಕೆ.ಎನ್.ಪಿ.ವಾರ್ತೆ,ಹಾವೇರಿ,ಡಿ.25;

ಪ್ರತಿಯೊಬ್ಬ ಮನುಷ್ಯನಲ್ಲಿ ಪರಂಪರೆಯಿದ್ದರೆ ಅದು ಕಾನೂನಿಗಿಂತ ಮಿಗಿಲಾದದು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪರಂಪರೆ ಜೊತೆಗೆ ಧರ್ಮದಂತೆ ನಡೆಯಬೇಕು ಎಂದು ಹಿಮವತ್ಕೇದಾರ ವೈರಾಗ್ಯ ಪೀಠದ ಜಗದ್ಗುರು ಶ್ರೀ ಭೀಮಾಶಂಕರ ಲಿಂಗ ಶಿವಾಚಾರ್ಯ ಭಗವತ್ಪಾದರರು ಹೇಳಿದರು.

ತಾಲೂಕಿನ ನೆಗಳೂರ ಗ್ರಾಮದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಬುಧವಾರ ಜರುಗಿದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಪರಂಪರೆ ರಕ್ಷಣಾ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀವರ್ಚನ ನೀಡಿದರು.

ಮನುಷ್ಯ ಸತ್ಯವನ್ನೇ ನುಡಿಯಬೇಕು ಧರ್ಮದಂತೆ ನಡೆಯಬೇಕು ಪರಂಪರೆ ರಕ್ಷಣೆ ಮಾಡುವುದು ಧರ್ಮಪೀಠಗಳ ಮೂಲ ಕರ್ತವ್ಯವಾಗಿದೆ ಎಂದರು.

ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀ ಮಠಕ್ಕೆ ಜಗದ್ಗುರುಗಳನ್ನು ಬರಮಾಡಿಕೊಂಡು ನಡೆದಾಡುವ ಮಾತನಾಡುವ ಕೇದಾರನಾಥ ರ ದರ್ಶನ ಆಶೀರ್ವಾದ ವನ್ನು ಸಮಸ್ತ ಶ್ರೀ ಮಠದ ಸದ್ಭಕ್ತರಿಗೆ ಕರಣಿಸಬೇಕೆಂಬ ಬಹಳ ವರ್ಷಗಳ ಕನಸು ಇಂದು ನನಸಾಗಿದೆ. ಜಗದ್ಗುರುಗಳ ಕೃಪಾಶೀರ್ವಾದ ಶ್ರೀ ಮಠದ ಹಾಗೂ ಸಮಸ್ತ ಸದ್ಭಕ್ತರ ಮೇಲೆ ಸದಾಕಾಲ ಇರಲಿ ಎಂದರು.

ಸಮಾರಂಭದಲ್ಲಿ ಕಣ್ವಕಪ್ಪೆ ಗವಿಮಠದ ನಾಲ್ವಡಿಶಾಂತಲಿಂಗಶಿವಾಚಾರ್ಯ ಸ್ವಾಮೀಜಿ, ಬನ್ನಿಕೊಪ್ಪ ಹಿರೇಮಠದ ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ಉಪದೇಶಾಮೃತ ನೀಡಿದರು.

ಶಿವಯೋಗಿಸ್ವಾಮಿ ಕಂಬಾಳಿಮಠ ಕೇದಾರಪೀಠ ಪರಂಪರೆ ಕುರಿತು ಉಪನ್ಯಾಸ ನೀಡಿದರು. ರಂಭಾಪುರಿ ಪೀಠದ ಆಡಳಿತಾಧಿಕಾರಿ ಎಸ್.ಬಿ ಹಿರೇಮಠ ಸ್ವಾಗತಿಸಿದರು. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಸಮಾರಂಭದಲ್ಲಿ ಗುರುಸ್ವಾಮಿ ಕಲಕೇರಿ ವೀರಭದ್ರಯ್ಯಶಾಸ್ತ್ರಿ ಕುರುಬಗೊಂಡ ಸೇರಿದಂತೆ
ನೆಗಳೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಸದ್ಭಕ್ತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ವರದಿ : ಗುರುಶಾಂತಸ್ವಾಮಿ ಹಿರೇಮಠ

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.