ಕೆ.ಎನ್.ಪಿ.ಕವಿತೆ,ಜು.12;
ಕವಿಮಿತ್ರರೆ, ಇಂದು ಕೆ.ಎನ್.ಪಿ.ಯ ಕವಿತೆ ವಿಭಾಗದಲ್ಲಿ ಕವಿ ರಮೇಶ ಗಬ್ಬೂರ್ ಅವರ ಗಜಲ್ ಪ್ರಕಟಿಸಲಾಗಿದೆ.
ಸಹೃದಯರು ಗಜಲ್ ಓದಿ ತಮ್ಮಅಮೂಲ್ಯವಾದ ಅನಿಸಿಕೆ/ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.
ಅರಳಿದ ಮರುದಿನವೇ ಸಾಯುತ್ತೇನೆಂದು ತಿಳಿದು ದಿನವೂ ನಗುತ್ತೇನೆ ನನಗಾಗಿ
ನೂರುಕಾಲ ಬದುಕುವವರ ಪ್ರೀತಿಯ ಬದುಕಿನಲಿ ದಳವಾಗಿ ಉದುರುವೆ ನನಗಾಗಿ
ಸುತ್ತಲೂ ಸಂಕಟದ ಮುಳ್ಳಿನ ನೋವು ತುಂಬಿ ಹೊರಬಂದ ಸುಂದರ ಬದುಕು ನಾನು
ನಾಳೆಗಳ ಕಳೆದುಕೊಳ್ಳದೆ ಸಿಕ್ಕ ಅವಕಾಶದಲಿ ಬದುಕಿನ ದೀಪ ಹಚ್ಚುವೆ ನನಗಾಗಿ
ತಲೆಯಲಿಟ್ಟು ಬಾಡಿ ಹೋಗುವ ಮುನ್ನ ಕಳೆದುಹೋಗುವ ನೆನಪುಗಳ ಗುಚ್ಚ ನಾನು
ಜೀವವಿದ್ದರೆ ಮುಳ್ಳುಗಳ ಜೊತೆ ಸತ್ತರೆ ಮಣ್ಣಲಿ ಗೊಬ್ಬರವಾಗುವೆ ನನಗಾಗಿ
ನನ್ನಂತೆ ಯಾರಿಗಿಲ್ಲ ಸಂಕಟಗಳು ಕೀಳುವ ಮನದ ಹಿಂದಿನ ಕಾಣದ ರೂಪ ನಾನು
ಕಾಣುವ ರೂಪವೇ ಸತ್ಯ ಕಾಲ ಮರೆತರೆ ಕಾಲಿನ ಕೆಳಗೂ ನಗುತ್ತಲಿರುವೆ ನನಗಾಗಿ
ನಗದಿರುವವರ ಬದುಕು ನಾನಲ್ಲ ಘಳಿಗೆ ನೋಡಲು ನೆನಪುಳಿವ ಬದುಕು ನಾನು
ಜೀವನವು ಯಾರಿಗಾಗಿಯೂ ಅಲ್ಲ ದೀಪದಂತೆ ಸುಟ್ಟು ಬೆಳಕಾಗುವೆ ನನಗಾಗಿ
ಪದಗಳಲಿ ಹೇಳಲಾಗದೆ ಮೌನದಲಿ ಕಟ್ಟಿ ಕೊಲ್ಲಲಾರೆ ಎಲ್ಲರ ನಗುವಿನಲಿ ನಾನು
ಗರ್ವವನು ಪಾದದಲಿ ಹಾಕು ಎಂದ ‘ರಮೇಶ’ನ ಅಂಗಳದ ಧೂಳಾಗುವೆ ನನಗಾಗಿ
- ರಮೇಶ ಗಬ್ಬೂರ್
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.