ಕೆ.ಎನ್.ಪಿ.ವಾರ್ತೆ,ನವದೆಹಲಿ,ಫೆ.22;

ನೋವು ನಿವಾರಕ ಸಾರಿಡಾನ್ ಮಾತ್ರೆಯನ್ನು ಸುಪ್ರೀಂಕೋರ್ಟ್ ನಿಷೇಧಿತ ಔಷಧಿಗಳ ಪಟ್ಟಿಯಿಂದ ತೆಗೆದು ಹಾಕಿದೆ.

ಈ ಕುರಿತಂತೆ ಮಾತ್ರೆ ಉತ್ಪಾದನಾ ಸಂಸ್ಥೆ ಪಿರಾಮಲ್ ಎಂಟರ್ಪ್ರೈಸಸ್ ಲಿಮಿಟೆಡ್ ಹೇಳಿಕೆ ಬಿಡುಗಡೆಗೊಳಿಸಿದ್ದು, ಸುಪ್ರೀಂಕೋರ್ಟ್ ನಲ್ಲಿ ಸ್ಯಾರಿಡಾನ್ ಪರ ತೀರ್ಪು ಬಂದಿದ್ದಾಗಿ ಬಿಎಸ್ ಇ ಗೆ ಸಂಸ್ಥೆ ಮಾಹಿತಿ ನೀಡಿದೆ.

ಸ್ಯಾರಿಡಾನ್‌ ಸೇರಿದಂತೆ 328 ಔಷಧಗಳ ಉತ್ಪಾದನೆ ಹಾಗೂ ಮಾರಾಟವನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇದರ ವಿರುದ್ಧ ಕಂಪನಿಗಳು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದವು. 1988ಕ್ಕಿಂತ ಮುಂಚಿನ ಔಷಧಗಳ ಮಾರಾಟ ಹಾಗೂ ಉತ್ಪಾದನೆ ನಿಷೇಧವನ್ನು ಅವು ಪ್ರಶ್ನಿಸಿದ್ದವು.

ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸ್ಯಾರಿಡಾನ್ ಮಾತ್ರೆಯ ಮಾರಾಟದ ಮೇಲಿನ ನಿಷೇಧವನ್ನು ತೆರವುಗೊಳಿಸಿ, ಮುಕ್ತ ಮಾರಾಟಕ್ಕೆ ಅವಕಾಶ ನೀಡಿದೆ.

ಈ ಔಷಧದಲ್ಲಿನ ಅತಿಯಾದ ಆ್ಯಂಟಿ ಬಯಾಟಿಕ್‌ ಅಂಶವು ಮಾನವನಿಗೆ ಹಾನಿಕರ ಎಂದು ಅಭಿಪ್ರಾಯಪಟ್ಟು ಸೆಪ್ಟೆಂಬರ್‌ 13ರಂದು 328 ಔಷಧಗಳ ಮಾರಾಟ ನಿಷೇಧಿಸಿತ್ತು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.