ಕೆ.ಎನ್.ಪಿ.ವಾರ್ತೆ,ಮುಂಬೈ,ನ.30;

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಶಾಸಕ, ಹಿರಿಯ ಮುಖಂಡ ದಿಲೀಪ್ ವಲ್ಸೆ ಪಾಟೀಲ್ ಅವರನ್ನು ಮಹಾರಾಷ್ಟ್ರ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಶುಕ್ರವಾರದಂದು ನೇಮಿಸಲಾಗಿದೆ.

1956ರ ಅಕ್ಟೋಬರ್ 30ರಂದು ಜನಿಸಿದ ದಿಲೀಪ್ ವಲ್ಸೆ ಪಾಟೀಲ್ ಅವರು ಮಹಾರಾಷ್ಟ್ರದ ಅಂಬೆಗಾಂವ್ ಮೂಲದವರು, 6 ಬಾರಿ ಮಹಾರಾಷ್ಟ್ರದ ವಿಧಾನಸಭಾ ಸದಸ್ಯರಾಗಿ ಅನುಭವ ಹೊಂದಿದ್ದಾರೆ. 2019ರಲ್ಲಿ ಗೆಲುವು ಸಾಧಿಸಿ 7ನೇ ಬಾರಿಗೆ ಅಸೆಂಬ್ಲಿ ಪ್ರವೇಶಿಸಲಿದ್ದಾರೆ.

1999-2009ರ ಅವಧಿಯಲ್ಲಿ ವಿತ್ತ, ಯೋಜನೆ, ಇಂಧನ, ಉನ್ನತ ಶಿಕ್ಷಣ, ಮೆಡಿಕಲ್ ಶಿಕ್ಷಣ ಮುಂತಾದ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಕ್ಕರೆ ಕಾರ್ಖಾನೆ ಸಹಕಾರ ನಿಯಮಿತ ಸಂಸ್ಥೆ( ಎನ್ ಎಫ್ ಸಿಎಸ್ ಎಫ್) ಮುಖ್ಯಸ್ಥರಾಗಿದ್ದಾರೆ.

ದಿಲೀಪ್ ಅವರಿಗೂ ಮುನ್ನ ಬಿಜೆಪಿಯ ಕಾಳಿದಾಸ್ ಕೊಲಂಬ್ಕರ್ ಅವರನ್ನು ಹಂಗಾಮಿ ಸ್ಪೀಕರ್ ಎಂದು ನೇಮಿಸಲಾಗಿತ್ತು. ಶನಿವಾರದಂದು ಹೊಸ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಲಿದೆ.

ಹೀಗಾಗಿ ಮಹಾರಾಷ್ಟ್ರ ವಿಧಾನಸಭೆಯ ಹಂಗಾಮಿ ಸ್ಪೀಕರ್, ಕಾಳಿದಾಸ್ ಕೊಲಂಬ್ಕರ್ ಅವರ ಸ್ಥಾನಕ್ಕೆ ಎನ್‌ಸಿಪಿಯ ದಿಲೀಪ್ ವಲ್ಸೆ ಪಾಟೀಲ್ ಅವರನ್ನು ನೇಮಿಸಲಾಗಿದೆ.

ಪಾಟೀಲ್ ಅವರ ಮೇಲ್ವಿಚಾರಣೆಯಲ್ಲಿ ಹೊಸ ಸರ್ಕಾರ ತನ್ನ ಬಹುಮತವನ್ನು ಸಾಬೀತುಪಡಿಸುತ್ತದೆ. ಕೊಲಂಬ್ಕರ್ ಅವರನ್ನು ಬಿಜೆಪಿ ನೇಮಕ ಮಾಡಿತ್ತು.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.