ಕೆ.ಎನ್.ಪಿ.ವಾರ್ತೆ,ಗಂಗಾವತಿ,ಅ.14;
ಗಂಗಾವತಿ ತಾಲೂಕಿನ ಮೂಸ್ಟೂರು ಗ್ರಾಮದಲ್ಲಿ ನವರಾತ್ರಿಯ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ಶ್ರೀ ದೇವಿ ಮಹಾತ್ಮೆ ಪುರಾಣ ಕಾರ್ಯಕ್ರಮವು ಅಕ್ಟೋಬರ್ 10ರಿಂದ ಆರಂಭವಾಗಿದೆ.
ಘನಮೌನಿಗಳಾದ ಚಿಕೇನಕೊಪ್ಪದ ಚನ್ನ ವೀರ ಶಿವಶರಣರ ಕೃಪಾಶೀರ್ವಾದದಿಂದ 1981ನೇ ಇಸವಿಯಿಂದ ಆರಂಭವಾಗಿ ಇಲ್ಲಿಯವರೆಗೆ 38 ವರ್ಷಗಳ ಕಾಲ ನಿರಂತರವಾಗಿ ಪ್ರತಿ ವರ್ಷ ಪುರಾಣ ಮಂಗಲ ಹಾಗೂ ಪುರಾಣಕ್ಕೆ ಆಗಮಿಸಿದ ಭಕ್ತಾದಿಗಳಿಗೆ ದಿನನಿತ್ಯ ದಾಸೋಹಸೇವೆಯನ್ನು ನಡೆಸಿಕೊಂಡು ಬಂದಿದ್ದು, ಶ್ರೀ ದೇವಿ ಮಹಾತ್ಮೆ ಪುರಾಣ ಪ್ರವಚನ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ಸಾಗುತ್ತಾ ಬಂದಿದೆ.
ಅಕ್ಟೋಬರ್ 10 ರಂದು ಪುರಾಣ ಆರಂಭವಾಗಿದ್ದು, ಅಕ್ಟೋಬರ್ 19 ರಂದು ಪುರಾಣ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ. ಅಕ್ಟೋಬರ್ 17 ರಂದು ಸುಮಂಗಲೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗಲಿದೆ.
- ಪುರಾಣ ಪ್ರವಚನಕಾರರು : ಶ್ರೀ.ವೇ.ಮೂ.ರಾಚಯ್ಯ ಶಾಸ್ತ್ರಿಗಳು ಕಲ್ಲೂರು ಯಲಬುರ್ಗಾ ತಾಲೂಕ
- ಪುರಾಣ ಪಠಣಕಾರರು : ಶ್ರೀ. ವೇ.ಮೂ.ಈಶ್ವರಯ್ಯ ತಾತ ಹಿರೇಮಠ ಮೂಸ್ಟೂರು
- ತಬಲಾಕಾರರು : ಮಹಾಬಳೇಶ್ವರ
- ಹಾರ್ಮೋನಿಯಂ : ಸುಖಮಿನಿಯಪ್ಪ ಶರಣಬಸವೇಶ್ವರ ಭಜನಾ ಸಂಘ
ವರದಿ : ಹನುಮೇಶ್ ಢಣಾಪುರ
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.