ಕೆ.ಎನ್.ಪಿ.ಸಿನಿಸಮಾಚಾರ;

ಸಂಬಂಧಿಕರೊಬ್ಬರ ನಿಶ್ಚಿತಾರ್ಥಕ್ಕೆ ಹೋಗಿದ್ದ ಸ್ಯಾಂಡಲ್‍ವುಡ್ ತಾರೆ ಹರ್ಷಿಕಾ ಪೂಣಚ್ಚಗೆ ಅಹಿತಕರ ಘಟನೆಯೊಂದು ಎದುರಾಗಿದೆ. ಈ ಸಂಬಂಧ ಮಡಿಕೇರಿಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಂಬಂಧಿಕರೊಬ್ಬರ ನಿಶ್ಚಿತಾರ್ಥ ನಿಮಿತ್ತ ಮಡಿಕೇರಿಯ ನೀರುಕೊಲ್ಲಿ ಗ್ರಾಮದಲ್ಲಿನ ರೆಸಾರ್ಟ್‌ಗೆ ಹೋಗಿದ್ದರು. ಗುರುವಾರ ರಾತ್ರಿ ಹರ್ಷಿಕಾ ಸಂಬಂಧಿಕರ ನಿಶ್ಚಿತಾರ್ಥ ಇತ್ತು. ಈ ಸಂದರ್ಭದಲ್ಲಿ ಬನ್ಸಿ ಪೊನ್ನಪ್ಪ, ಬಿಪಿನ್ ದೇವಯ್ಯ ಎಂಬುವವರು ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.

ದುರ್ವತನೆ ತೋರಿದ ಇಬ್ಬರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಬನ್ಸಿ ಪೊನ್ನಪ್ಪನನ್ನು ಬಂಧಿಸಿ ಮಡಿಕೇರಿ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನೊಬ್ಬ ಆರೋಪಿ ಬಿಪಿನ್ ದೇವಯ್ಯ ತಲೆಮರೆಸಿಕೊಂಡಿದ್ದಾನೆ.

ಹರ್ಷಿಕಾ ಪೂಣಚ್ಚ ಸ್ಯಾಂಡಲ್‍ವುಡ್‌ಗೆ ಅಡಿಯಿಟ್ಟು ದಶಕದ ಸಂಭ್ರಮದಲ್ಲಿರುವ ಹೊತ್ತಲೇ ಈ ರೀತಿಯ ಅಹಿತಕರ ಘಟನೆ ನಡೆದಿದೆ. ಈ ಹತ್ತು ವರ್ಷಗಳ ಕಾಲ ಕನ್ನಡ ಇಂಡಸ್ಟ್ರಿಯಿಂದ ಜನರ ಪ್ರೀತಿ, ಒಳ್ಳೊಳ್ಳೆ ಸಿನಿಮಾಗಳನ್ನು ಪಡೆದಿದ್ದೇನೆ ಎಂದಿದ್ದಾರೆ ಹರ್ಷಿಕಾ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.