ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಆ.20;

ತಾಲ್ಲೂಕಿನ ಮುನಿರಬಾದ ಡ್ಯಾಂ ಅಣೆಕಟ್ಟಿನ ಮೇಲ್ಮಟ್ಟದ ಕಾಲುವೆಯ ಗೇಟ್ ಮುರಿದು ಅಪಾರ ಪ್ರಮಾಣದ ನೀರು ಹರಿದು ಅಂಬೇಡ್ಕರ್ ನಗರದ ಸುಮಾರು 97 ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು ಅಪಾರ ಪ್ರಮಾಣದ ನಷ್ಟವಾಗಿದೆ. ಇಲ್ಲಿಯ ಜನರಿಗೆ ಕೂಲಿ, ವಸತಿ, ಊಟದ ವ್ಯವಸ್ಥೆ ಇಲ್ಲದಂತಾಗಿದೆ.

ಇಲ್ಲಿ ವಾಸಿಸುವ ಜನರು ಬಡವರು ಮತ್ತು ದಲಿತರಾಗಿದ್ದು ಒಂದು ದಿನದ ಊಟಕ್ಕೂ ಪರದಾಡುವ ಸ್ಥಿತಿ ಉಂಟಾಗಿದೆ. ಒಂದು ವಾರದವರೆಗೆ ಇವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿದ್ದು, ಈಗ ತಮ್ಮ ತಮ್ಮ ಮನೆಗಳಿಗೆ ವಾಪಸ್ ಬಂದಿದ್ದು ಮನೆಯಲ್ಲಿ ಎಲ್ಲ ಖಾಲಿ ಖಾಲಿ ಯಾಗಿದೆ ಆದ್ದರಿಂದ ಈ ಸ್ಥಿತಿ ಕಂಡ ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ಐ ಕೆ.ರಂಗಯ್ಯ ಇಂದು ಇವರಿಗೆ ದಿನನಿತ್ಯದ ಅಡುಗೆ ಪದಾರ್ಥಗಳನ್ನು ಮನೆ ಮನೆಗೆ ತೆರಳಿ ವಿತರಣೆ ಮಾಡಿ, ಸೂಕ್ತ ಮಾರ್ಗದರ್ಶನ, ಧೈರ್ಯವನ್ನು ತುಂಬಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ಅಧಿಕಾರಿಗಳಾದ ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ರವಿ ಉಕ್ಕುಂದಿ, ಸಿಬ್ಬಂದಿ ಇದ್ದರು. ಮಾನವೀಯತೆ ಮಹಾಧರ್ಮ ಎನ್ನುವಂತೆ ನಮ್ಮವರು ಕಷ್ಟದಲ್ಲಿರುವಾಗ ಸಹಾಯ ಮಾಡುವ ಗುಣಗಳನ್ನು ಬೆಳೆಸಿಕೊಂಡು ಸಾಮಾಜಿಕ ಸೇವಾ ಮನೋಭಾವ ಹೊಂದಲು ಹಾಗೂ ಸಹಾಯ ಮಾಡಿದ ಕೈ ಗೆ ಸಾವು ಇಲ್ಲದು ಎನ್ನುವ ನುಡಿ ಇಲ್ಲಿ ತಿಳಿಯಬಹುದಾಗಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.