ಕೆ.ಎನ್.ಪಿ.ವಾರ್ತೆ,ಹಾವೇರಿ,ಮಾ.02;

ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡು ಅನೇಕ ಪ್ರಶಸ್ತಿಗಳನ್ನು ಪಡೆದು ದಾಖಲೆ ಮಾಡಿರುವ ಹಾವೇರಿ ಜಿಲ್ಲೆಯ ಡಾ.ಅಂಬಿಕಾ ಹಂಚಾಟೆ ಯವರು ಎಮ್ ಟಿಸಿ ಗ್ಲೋಬಲ್ ಎಕ್ಸ್ ಲೆನ್ಸ್ ಅವಾರ್ಡ್ ಗೆ ಆಯ್ಕೆಯಾಗಿದ್ದಾರೆ.

ಎಮ್ ಟಿಸಿ ಗ್ಲೋಬಲ್ ಸಂಸ್ಥೆಯು ಕೊಡಮಾಡುವ 2019 ರ ಸಾಲಿನ ಜೆ.ಎಲ್ ದತ್ತ ಔಟ್ ಸ್ಟ್ಯಾಂಡಿಂಗ್ ಸೋಷಿಯಲ್ ಸರ್ವಿಸ್ ಪ್ರತಿಷ್ಠಿತ ಪ್ರಶಸ್ತಿಗೆ ಡಾ.ಅಂಬಿಕಾ ಹಂಚಾಟೆ ಯವರನ್ನ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಡಾ. ಭೋಲಾನಾಥ್ ದತ್ ರವರು ಮಾಹಿತಿ ಪ್ರಕಟಿಸಿದ್ದಾರೆ.

2018 ರಿಂದ ಇಲ್ಲಿಯವರೆಗೆ ಏಷ್ಯಾ ಪೆಸಿಫಿಕ್ ಸ್ಟೀವ್ ಅವಾರ್ಡ್ (2 ಬಾರಿ), ಇಂಟರ್ ನ್ಯಾಷನಲ್ ಬಿಜಿನೆಸ್ ಅವಾರ್ಡ್, ವುಮನ್ ಎಕ್ಸಲೇನ್ಸ್ ಅವಾರ್ಡ್, ಕಸ್ಟಮರ್ ಸರ್ವಿಸ್ ಎಕ್ಸಲೇನ್ಸ್ ಅವಾರ್ಡ್, ರಿ ಇಮ್ಯಾಜಿನ್ QS ಸಿಸ್ಟಂ ಅವಾರ್ಡ್ ಕಮಿಟಿ (2 ಬಾರಿ) ಯಲ್ಲಿ ಅಂತಾರಾಷ್ಟ್ರೀಯ ಜೂರಿಯಾಗಿ ಏಜ್ಯುಕೇಶನ್ ವಿಭಾಗ, ಮಾರ್ಕೆಟಿಂಗ್, ಹುಮನ್ ರಿಸೋರ್ಸ್, ವುಮೆನ್ ಎಂಪವರ್ನಮೆಂಟ್, ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಇಲ್ಲಿಯವರೆಗೆ ಸುಮಾರು 800 ಪ್ರತಿಷ್ಠಿತ ದೇಶ ವಿದೇಶಗಳ ನಾಮನಿರ್ದೇಶಿತ ಆರ್ಗನ್ನೈಜೇಶನ್, ಕಂಪನಿ, ಇತ್ಯಾದಿಗಳ ಪರಿಶೀಲನೆ, ಸೂಕ್ತ ವಿಶ್ಲೇಷಣೆ ಮಾಡಿ ಹಲವಾರು ಅಂತರ್ ರಾಷ್ಟ್ರೀಯ ಸಾಮಾಜಿಕ ಆರ್ಗನ್ನೈಜೇಶನ್ನ್ಗಳ ಕಮಿಟಿಗೆ ತಮ್ಮ ಅಮೂಲ್ಯವಾದ ಸೇವೆಯನ್ನು ನೀಡಿದ್ದಾರೆ.

ಅಲ್ಲದೇ, ತಮ್ಮ ಕಾರ್ಯಕುಶಲತೆಯಿಂದ ಉತ್ತಮ ಜ್ಯುರಿಯಾಗಿ ಪ್ರಶಸ್ತಿ ಪಡೆದದ್ದು ಉಂಟು. ಅದರಂತೆ ವಾಷಿಂಗ್ಟನ್ ನಲ್ಲಿ ನಡೆಯುತ್ತಿರುವ SIIA CODIE ಅವಾರ್ಡ್ನ ನ ಅರ್ಥಶಾಸ್ತ್ರ (ಶಿಕ್ಷಣ ) ವಿಭಾಗದಲ್ಲಿ ಜೂರಿ ಆಗಿಯು ಭಾಗವಹಿಸುತ್ತಿರುವ ಡಾ. ಅಂಬಿಕಾ ಹಂಚಾಟೆ ಯವರ ಸೇವೆ ಹಾಗೂ ಜನ ಮನ ಫೌಂಡೇಶನ್ ನ ಮೂಲಕ ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೆಕಾರ್ಡನ್ನು ಸ್ಥಾಪಿಸಿ ತಮ್ಮದೇ ಆದ ಕಾರ್ಯಶೈಲಿಯ ಮೂಲಕ ನಾಡಿನ ಸಾಧಕರ ದಾಖಲೆಯನ್ನು ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ ಮಾಡುತ್ತಿರುವ ಇವರ ಕಾರ್ಯವನ್ನು ಪರಿಗಣಿಸಿ ಎಮ್ ಟಿಸಿ ಗ್ಲೋಬಲ್ ಸಂಸ್ಥೆಯು ಈ ಪ್ರಶಸ್ತಿಗೆ ಡಾ.ಅಂಬಿಕಾ ಹಂಚಾಟೆಯವರನ್ನು ಆಯ್ಕೆ ಮಾಡಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.