ಕೆ.ಎನ್.ಪಿ.ಟೆಕ್ನಾಲಜಿ;

ಈ ಮೊದಲು ಮೊಬೈಲ್ ಬಳಕೆದಾರರಿಗೆ ಒಂದು ಟೆಲಿಕಾಂ ಕಂಪೆನಿಯಿಂದ ಮತ್ತೊಂದು ಟೆಲಿಕಾಂ ಕಂಪೆನಿಗೆ ಜಿಗಿಯಲು ಅವಕಾಶ ಮಾಡಿಕೊಟ್ಟಿದ್ದ ಟ್ರಾಯ್, ಇದೀಗ ತನ್ನ ಈ ಪೋರ್ಟಬಲಿಟಿ ನಿಯಮದಲ್ಲಿ ಸ್ವಲ್ಪ ಬದಲಾವಣೆಯನ್ನು ತರುವ ಮೂಲಕ ಪೋರ್ಟಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಸುಲಭಗೊಳಸಿದೆ.

ಮೊಬೈಲ್ ಬಳಕೆದಾರರು ಹೆಚ್ಚಾದಂತೆಲ್ಲಾ, ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ಕೂಡ ಜೋರಾಗಿಯೇ ಇದೆ. ಹೀಗಾಗಿ ಬಳಕೆದಾರರೂ, ಒಂದು ನೆಟ್​ವರ್ಕ್​ನಿಂದ ಮತ್ತೊಂದು ನೆಟ್​ವರ್ಕ್​​ಗೆ ಶಿಫ್ಟ್ ಆಗ್ತಿರ್ತಾರೆ. ಇಂಥವರಿಗೆ ತಮ್ಮ ಮೊಬೈಲ್ ನಂಬರ್ ಬದಲಿಸಿಕೊಳ್ಳುವ ಸಮಸ್ಯೆ ಎದುರಾಗಬಾರದು ಅಂತಲೇ, ಮೊಬೈಲ್ ನಂಬರ್ ಪೋರ್ಟಿಂಗ್ ನಿಯಮವನ್ನ ಜಾರಿಗೆ ತರಲಾಗಿತ್ತು. ಇದೀಗ ಈ ನಿಯಮದಲ್ಲಿ ಒಂದಷ್ಟು ಮಾರ್ಪಾಡುಗಳನ್ನ ಮಾಡಿದ್ದು, ಪೋರ್ಟಿಂಗ್ ಇನ್ನೂ ಸುಲಭವಾಗಲಿದೆ.

ಪೋರ್ಟಬಲಿಟಿ ನಿಯಮದಲ್ಲಿ ಬದಲಾವಣೆ ತರಲಾಗಿರುವುದರಿಂದ ಈಗ ಕೇವಲ ಎರಡೇ ದಿನಗಳಲ್ಲಿ ನೆಟ್​ವರ್ಕ್ ಬದಲಿಸಿಕೊಳ್ಳಬಹುದಾಗಿದೆ. ಇಲ್ಲಿಯವರೆಗೂ ಪೋರ್ಟ್ ಮಾಡಿಸುವ ವೇಳೆ ಸೇವೆ ಸ್ಥಗಿತದ ಭಯ ಹೊಂದಿದ್ದ ಗ್ರಾಹಕರಿಗೆ ಇದು ನಿರಾಳತೆಯನ್ನು ತಂದಿದ್ದು, ಹೊಸ ನಿಯಮದ ಪ್ರಕಾರ, ಎಂಎನ್​ಪಿ ಸರ್ವೀಸ್ ಪ್ರೊವೈಡರ್ ಪ್ರಕ್ರಿಯೆಯಲ್ಲಿ ಎರಡೇ ದಿನಗಳಲ್ಲಿ ಹೊಸ ನೆಟ್​ವರ್ಕ್​​ಗೆ ಗ್ರಾಹಕರು ಶಿಫ್ಟ್ ಆಗಬಹುದಾಗಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.