ಕೆ.ಎನ್.ಪಿ.ವಾರ್ತೆ,ಲಂಡನ್,ಡಿ.15;

ಜಮೈಕಾ ಮೂಲದ ಟೋನಿ ಆನ್ ಸಿಂಗ್ ಅವರು 2019ನೇ ಸಾಲಿನ ವಿಶ್ವ ಸುಂದರಿ (miss world 2019) ಪಟ್ಟಕ್ಕೇರಿದ್ದಾರೆ. ಎಕ್ಸೆಲ್ ಲಂಡನ್ ನಲ್ಲಿ ನಡೆದ ಸಮಾರಂಭದಲ್ಲಿ ವಿಶ್ವಸುಂದರಿಯನ್ನು ಘೋಷಿಸಲಾಯಿತು.

2018ರ ಮಿಸ್ ವರ್ಲ್ಡ್ ಮೆಕ್ಸಿಕೋ ದ ವೆನೆಸ್ಸಾ ಪೋನ್ಸ್ ಅವರು ಹೊಸ ಸುಂದರಿ ಟೋನಿ ಸಿಂಗ್ ಗೆ ಕಿರೀಟ ಧಾರಣೆ ಮಾಡಿದರು. ಟೋನಿ ಸಿಂಗ್ ಸಂತೋಷದಿಂದ ಆನಂದಭಾಷ್ಪ ಸುರಿಸಿದರು. ಇದೇ ಸಂದರ್ಭದಲ್ಲಿ ಎರಡನೇ ಸ್ಥಾನ ಪಡೆದ ಫ್ರಾನ್ಸಿನ ಓಫ್ಲೆ ಮೆಜಿನೋ ಹಾಗೂ ಮೂರನೇ ಸ್ಥಾನ ಪಡೆದ ಭಾರತದ ಸುಮನ್ ರಾವ್ ಅವರು ಜೊತೆಗಿದ್ದರು.

ಬ್ರಿಟಿಷ್ ಪ್ರಸಾರಕ ಪಿಯರ್ಸ್ ಮೊರ್ಗನ್ ಅವರು ಮುಖ್ಯ ಜಡ್ಜ್ ಆಗಿದ್ದ ಈ ಕಾರ್ಯಕ್ರಮ 69ನೇ ಆವೃತ್ತಿಯದ್ದಾಗಿದೆ. 120 ದೇಶಗಳಿಂದ ಸ್ಪರ್ಧಿಗಳು ನವೆಂಬರ್ 20 ರಿಂದ ವಿವಿಧ ಹಂತದ ಸ್ಪರ್ಧೆಗಳಲ್ಲಿ ತೊಡಗಿಕೊಂಡಿದ್ದರು. ಡಿಸೆಂಬರ್ 14ರಂದು ಅಂತಿಮ ವಿಜೇತರನ್ನು ಘೋಷಿಸಲಾಗಿದೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.