ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಡಿ.07;

ನೀವು ಮಾರುತಿ ಸುಜುಕಿ ಸಂಸ್ಥೆಯ ಕಾರನ್ನು ಕೊಳ್ಳುವ ಯೋಜನೆಯಲ್ಲಿದ್ದೀರಾ.? ಹಾಗಾದರೆ ಈ ಕೂಡಲೆ ನಿಮ್ಮ ಹತ್ತಿರದ ಮಾರುತಿ ಸುಜುಕಿ ಶೋರಂಗೆ ಭೇಟಿ ನೀಡಿ. ಏಕೆಂದರೆ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಕಾರುಗಳ ಬೆಲೆಗಳನ್ನು ಏರಿಸುವ ಯೋಜನೆಯಲ್ಲಿದೆ.

ದೇಶದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ತನ್ನ ವಿವಿಧ ವಾಹನಗಳ ಬೆಲೆಯನ್ನು ಏರಿಸಲು ನಿರ್ಧರಿಸಿದ್ದು, ಪರಿಷ್ಕೃತ ದರ ವಿವರಗಳು ಜನವರಿ 01,2019ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

ತೈಲ ಬೆಲೆ ಏರಿಳಿತ, ವಿದೇಶಿ ವಿನಿಮಯದಲ್ಲಿ ವ್ಯತ್ಯಾಸ ಇನ್ನಿತರ ಕಾರಣಗಳನ್ನು ಸಂಸ್ಥೆ ನೀಡಿದೆ. ಆದರೆ, ಎಷ್ಟು ಪ್ರಮಾಣದಲ್ಲಿ ಬೆಲೆ ಏರಿಕೆಯಾಗಲಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಕಳೆದ ತ್ರೈಮಾಸಿಕದ ಅಂತ್ಯಕ್ಕೆ ಮಾರುತಿ ಸುಜುಕಿ ಪ್ರಗತಿ ಕುಂಠಿತಗೊಂಡಿತ್ತು. ಇದಕ್ಕೆ ಮಿನಿ ಕಾರು ವಿಭಾಗವೇ ಕಾರಣ ಎನ್ನಬಹುದು. ಆಲ್ಟೋ, ವಾಗನ್ ಆರ್, ಮಧ್ಯಮ ಗಾತ್ರದ ಸಿಯಾಜ್, ಯುಟಿಲಿಟಿ ವಾಹನಗಳಾದ ಎರ್ಟಿಗಾ, ವಿಟಾರಾ ಬ್ರಿಜಾ. ಇತ್ಯಾದಿ ಮಾರಾಟದಲ್ಲಿ ಅಂಥಾ ಏಳಿಗೆ ಕಂಡು ಬಂದಿರಲಿಲ್ಲ.

ಮಾರುತಿ ಸುಜುಕಿ ಎಂಟ್ರಿ ಲೆವಲ್ ಆಲ್ಟೋ 800 ನಿಂದ ಪ್ರೀಮಿಯಂ ಎಸ್ ಕ್ರಾಸ್ ತನಕ 2.53 ಲಕ್ಷ ರೂ ನಿಂದ 11.45 ಲಕ್ಷ ರೂ (ಎಕ್ಸ್ ಶೋರೂಮ್ ದರ, ದೆಹಲಿ) ತನಕ ಇದೆ. ಇಸುಜು ಮೋಟರ್ಸ್ ಇಂಡಿಯಾ ಪ್ರೈ ಲಿಮಿಟೆಡ್, ಟೋಯೋಟಾ ಕಿರ್ಲೋಸ್ಕರ್ ಸಂಸ್ಥೆಗಳು ಇತ್ತೀಚೆಗೆ ವಾಹನಗಳ ಬೆಲೆ ಏರಿಕೆ ಮಾಡಿವೆ.

ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ… 

ನೀವು ಕೂಡ ಬರೆಯಬಹುದು :

ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.

ಈ-ವಿಳಾಸ : karnatakanewsportal@gmail.com

ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.